Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿಗೆ ಹೆದರಲಾರೆ ಎಂದ ಪಾಕಿಸ್ತಾನ ವೇಗಿ ನಸೀಮ್ ಷಾ

I respect him, but I don’t fear him: Pakistan pacer Naseem Shah

ಲಾಹೋರ್, ಜೂನ್ 1: 2020ರ ಫೆಬ್ರವರಿ 10ಕ್ಕೆ ರಾವಲ್ಪಿಂಡಿಯಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್‌ ಪಡೆದು ವಿಶ್ವದಾಖಲೆ ನಿರ್ಮಿಸಿದ್ದ ಪಾಕಿಸ್ತಾನ ವೇಗಿ ನಾಸೀಮ್ ಷಾ, ತಾನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಗೌರವಿಸುತ್ತೇನೆ; ಆದರೆ ಹೆದರಲಾರೆ ಎಂದಿದ್ದಾರೆ.

ರಾವಲ್ಪಿಂಡಿ ಟೆಸ್ಟ್‌ನಲ್ಲಿ ಪಾಲ್ಗೊಳ್ಳುವಾಗ ನಾಸೀಮ್ ಷಾಗೆ 16 ವರ್ಷ 359 ದಿನ ವಯಸ್ಸು. ಆವತ್ತು ಹ್ಯಾಟ್ರಿಕ್ ವಿಕೆಟ್‌ ಲಭಿಸಿದ್ದರಿಂದ ನಾಸೀಮ್, ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಅತೀ ಕಿರಿಯ ಬೌಲರ್ ಆಗಿ ದಾಖಲೆ ನಿರ್ಮಿಸಿದ್ದರು. ಅದಕ್ಕೂ ಮುನ್ನ ಈ ದಾಖಲೆ ಬಾಂಗ್ಲಾದ ಲೆಗ್ ಸ್ಪಿನ್ನರ್ ಅಲೋಕ್ ಕಪಿಲ್ ಹೆಸರಿನಲ್ಲಿತ್ತು. 19ರ ಹರೆಯದಲ್ಲಿ ಅಲೋಕ್, ಪಾಕ್ ವಿರುದ್ಧ 2003ರಲ್ಲಿ ಈ ದಾಖಲೆ ಮಾಡಿದ್ದರು.

ಪಾಕ್ ಪ್ಯಾಷನ್ ಡಾಟ್‌ ನೆಟ್‌ ಜೊತೆ ಇತ್ತೀಚೆಗೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ನಾಸೀಮ್ ಷಾ, ವಿರಾಟ್ ಕೊಹ್ಲಿಯಂತ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಕೊಹ್ಲಿ ವಿರುದ್ಧ ಆಡಲು ತಾನು ಕಾತರನಾಗಿರುವುದಾಗಿಯೂ ನಾಸೀಮ್ ಹೇಳಿಕೊಂಡಿದ್ದಾರೆ.

'ಖಂಡಿತವಾಗಿಯೂ. ಭಾರತ ಮತ್ತು ಪಾಕಿಸ್ತಾನ ಪಂದ್ಯ ಯಾವತ್ತಿಗೂ ವಿಶೇಷವಾಗಿರುತ್ತೆ. ಈ ಪಂದ್ಯದಲ್ಲಿ ಆಟಗಾರರು ಒಂದೋ ಹೀರೋ ಆಗಿ ಅಥವಾ ವಿಲನ್‌ ಆಗಿ ಗುರುತಿಸಿಕೊಳ್ಳಬಹುದು ಎಂದು ನಾನು ಬೇರೆಯವರೊಟ್ಟಿಗೆ ಆಗಾಗ ಹೇಳುತ್ತಿರುತ್ತೇನೆ,' ಎಂದು ಷಾ ನುಡಿದರು.

'ಭಾರತ ವಿರುದ್ಧ ಪಂದ್ಯ ನಡೆದರೆ ನಾನು ಚೆನ್ನಾಗಿ ಬೌಲಿಂಗ್ ಮಾಡಬಲ್ಲೆ ಎಂದು ನನಗೆ ಭರವಸೆಯಿದೆ. ಅಂಥ ಅವಕಾಶ ಲಭಿಸಿದರೆ ನಾನು ನಮ್ಮ ಅಭಿಮಾನಿಗಳನ್ನು ಬೇಜಾರು ಮಾಡಲಾರೆ. ವಿರಾಟ್ ಕೊಹ್ಲಿಗೆ ನಾನು ಗೌರವಿಸುತ್ತೇನೆ, ಆದರೆ ಆತನಿಗೆ ಹೆದರಲಾರೆ,' ಎಂದು ನಸೀಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Monday, June 1, 2020, 17:12 [IST]
Other articles published on Jun 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+