ರಿಚರ್ಡ್ಸ್, ಸಚಿನ್, ಕೊಹ್ಲಿಯಂತ ದಿಗ್ಗಜರನ್ನು ನೋಡಿದ್ದೇನೆ: ಆದರೆ ಈತ ಶತಮಾನಕ್ಕೊಬ್ಬ!

ರಾಜ್‌ಕೋಟ್ ಅಂಗಳದಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಮೋಘ ಶತಕ ಬಾರಿಸುವ ಮೂಲಕ ಮತ್ತೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ವಿರಾಟ್ ಕೊಹ್ಲಿಯಿಂದ ಹಿಡಿದು ಹಲವು ದಿಗ್ಗಜ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು ಕೂಡ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, 51 ಎಸೆತಗಳಲ್ಲಿ 112 ರನ್ ಗಳಿಸಿದರು. ಸೂರ್ಯಕುಮಾರ್ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 20 ಓವರ್ ಗಳಲ್ಲಿ 228 ರನ್‌ಗಳ ಬೃಹತ್ ಜಯ ಸಾಧಿಸಿತು. ಭಾರತ 91 ರನ್‌ಗಳ ಅಮೋಘ ಜಯ ಸಾಧಿಸುವ ಮೂಲಕ ಸರಣಿಯನ್ನು ಗೆದ್ದುಕೊಂಡಿತು.
ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್‌ದೇವ್ ಕೂಡ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ಗೆ ಮನಸೋತಿದ್ದಾರೆ. ಸೂರ್ಯಕುಮಾರ್ ಯಾದವ್‌ರನ್ನು ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡೂಲ್ಕರ್, ವಿವ್ ರಿಚರ್ಡ್ಸ್, ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್ ಜೊತೆ ಹೋಲಿಕೆ ಮಾಡಿದ್ದಾರೆ.

ಆತನ ಪದವನ್ನು ವರ್ಣಿಸಲಸಾಧ್ಯ
"ಕೆಲವೊಮ್ಮೆ ಆತನ ಆಟವನ್ನು ಹೇಗೆ ವಿವರಿಸಬೇಕು ಎನ್ನಲು ಪದಗಳು ಸಿಗುವುದಿಲ್ಲ, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನು ಸಾಲಿನಲ್ಲಿ ಸೂರ್ಯಕುಮಾರ್ ಯಾದವ್‌ರನ್ನು ಕೂಡ ಸೇರಿಸಬೇಕು ಎನಿಸುತ್ತದೆ" ಎಮದು ಕಪಿಲ್ ದೇವ್ ಎಬಿಪಿ ಸುದ್ದಿಗೆ ತಿಳಿಸಿದ್ದಾರೆ.
"ಭಾರತದಲ್ಲಿ ಸಾಕಷ್ಟು ಉತ್ತಮವಾಗಿ ಪ್ರತಿಭೆಗಳಿವೆ. ಆತ ಕ್ರಿಕೆಟ್ ಆಡುವ ರೀತಿ, ಲ್ಯಾಪ್ ಫೈನ್ ಲೆಗ್ ಮೇಲೆ ಹೊಡೆದ ಬಾಲ್ ಎಂತಹ ಬೌಲರ್‌ಗೂ ಕೂಡ ಭಯವನ್ನು ಉಂಡುಮಾಡುತ್ತದೆ. ಆತ ನಿಂತುಕೊಂಡು ಮಿಡ್-ಆನ್, ಮಿಡ್-ವಿಕೆಟ್ ಮೇಲೆ ಸಿಕ್ಸರ್ ಹೊಡೆಯುತ್ತಾರೆ. ಬೌಲರ್ ಗಳಿಗೆ ಆತನಿಗೆ ಹೇಗೆ ಬೌಲಿಂಗ್ ಮಾಡಬೇಕು ಎನ್ನುವ ಗೊಂದಲ ಉಂಟಾಗುತ್ತದೆ, ಯಾವುದೇ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಿದರೂ ಆತ ಬೌಂಡರಿ ಹೊಡೆಯುತ್ತಾನೆ" ಎಂದು ಕಪಿಲ್ ದೇವ್ ಹೇಳಿದರು.

ಶತಮಾನಕ್ಕೊಮ್ಮೆ ಬರುವ ಆಟಗಾರ
"ನಾನು ಎಬಿ ಡಿವಿಲಿಯರ್ಸ್, ವಿವಿಯನ್ ರಿಚರ್ಡ್ಸ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಿಕಿ ಪಾಂಟಿಂಗ್ ಅವರಂತಹ ಶ್ರೇಷ್ಠ ಬ್ಯಾಟರ್‌ಗಳನ್ನು ನೋಡಿದ್ದೇನೆ, ಆದರೆ ಕೆಲವೇ ಆಟಗಾರರು ಮಾತ್ರ ಚೆಂಡನ್ನು ಕ್ಲೀನ್ ಆಗಿ ಹೊಡೆಯುತ್ತಾರೆ. ಸೂರ್ಯಕುಮಾರ್ ಯಾದವ್ ಅಂತಹ ಆಟಗಾರ, ಈ ರೀತಿಯ ಆಟಗಾರ ಶತಮಾನದಲ್ಲಿ ಒಮ್ಮೆ ಮಾತ್ರ ಬರುತ್ತಾರೆ" ಎಂದು ಶ್ಲಾಘಿಸಿದ್ದಾರೆ.
ಸೂರ್ಯಕುಮಾರ್ ಇನ್ನೂ ಭಾರತಕ್ಕಾಗಿ ಟೆಸ್ಟ್ ಪಂದ್ಯವನ್ನು ಆಡಿಲ್ಲ, ಏಕದಿನ ಮಾದರಿಯಲ್ಲಿ ಅವರ ಅಂಕಿ ಅಂಶ ಉತ್ತಮವಾಗಿಲ್ಲ. ಆದರೆ, ಟಿ20 ಮಾದರಿಯಲ್ಲಿ ಸೂರ್ಯಕುಮಾರ್ ಅವರ ಆಟಕ್ಕೆ ಮನಸೋಲದವರಿಲ್ಲ.

ಏಕದಿನ ಸರಣಿಯಲ್ಲೂ ಮೋಡಿ ಮಾಡ್ತಾರ?
ಸೂರ್ಯಕುಮಾರ್ ಯಾದವ್ ಟಿ20 ಮಾದರಿಯಲ್ಲಿ ಅದ್ಭುತವಾದ ಪ್ರದರ್ಶನ ನೀಡಿದರು ಕೂಡ ಏಕದಿನ ಮಾದರಿಯಲ್ಲಿ ಅದು ನಿರೀಕ್ಷೆಗೆ ತಕ್ಕಂತಿಲ್ಲ. ಇದುವರೆಗೂ 15 ಏಕದಿನ ಇನ್ನಿಂಗ್ಸ್ ಆಡಿರುವ ಸೂರ್ಯ 100.52 ಸ್ಟ್ರೈಕ್‌ರೇಟ್‌ನಲ್ಲಿ 32 ಸರಾಸರಿಯಲ್ಲಿ 382 ರನ್ ಗಳಿಸಿದ್ದಾರೆ.
ಟಿ20 ಮಾದರಿಯಲ್ಲಿ ಮೂರು ಶತಕ ಗಳಿಸಿದ್ದು, ಏಕದಿನ ಮಾದರಿಯಲ್ಲಿ ಇದುವರೆಗೂ 2 ಅರ್ಧಶತಕ ಮಾತ್ರ ಗಳಿಸಿದ್ದಾರೆ. ಟಿ20 ಮಾದರಿಯಲ್ಲಿ ಆಡುವ ಆಟವನ್ನು ಅವರು ಏಕದಿನ ಕ್ರಿಕೆಟ್‌ಗೂ ತಂದರೆ, ಭಾರತಕ್ಕೆ ಸಾಕಷ್ಟು ಲಾಭವಾಗಲಿದೆ. 2023 ಆರಂಭದಲ್ಲೇ ಈ ಪ್ರತಿಕ್ರಿಯೆ ನೀಡಿರುವ ಸೂರ್ಯ, ಏಕದಿನ ಮಾದರಿಯಲ್ಲಿ ಹೆಚ್ಚಿನ ರನ್ ಗಳಿಸುವತ್ತ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications