Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೈಪರ್ ಬದಲಾಯಿಸುವುದನ್ನು ನಾನು ಮಿಸ್ ಮಾಡಿಕೊಳ್ಳಬೇಕು, ಪಾರ್ಟಿ ಅಲ್ಲ: ಹಾರ್ದಿಕ್ ಪಾಂಡ್ಯ

I Should Be Missing Changing The Diapers And Not Parties: Hardik Pandya

ತಮ್ಮ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸುಲಭವಾಗಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಯನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಮಿಂಚಿತು. ಹಾರ್ದಿಕ್ ಪಾಂಡ್ಯ ಕೊನೆಯಲ್ಲಿ ತ್ವರಿತ ರನ್ ಗಳಿಸುವಲ್ಲಿ ಯಶಸ್ವಿಯಾದರು. ಕ್ವಿಂಟನ್ ಡಿ ಕಾಕ್ ಭರ್ಜರಿ ಆಟಕ್ಕೆ ಪಾಂಡ್ಯ ಸಾಥ್ ನೀಡಿದ್ರು.

ವಿಂಡೀಸ್ ಕ್ರಿಕೆಟಿಗರಂತೆ ಹಾರ್ದಿಕ್ ಪಾಂಡ್ಯ ಅವರು ಅಲಂಕಾರಿಕ ಜೀವನಶೈಲಿಗೆ ಹೆಸರುವಾಸಿಯಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಅವರ ಬಟ್ಟೆಗಳನ್ನು ಮತ್ತು ಪರಿಕರಗಳು ಎಲ್ಲವೂ ವಿಭಿನ್ನವಾಗಿರುತ್ತದೆ.

ತನ್ನ ಸರ್ಬಿಯಾದ ಗೆಳತಿ ಮತ್ತು ನಟಿ ನತಾಶ ಸ್ಟಾಂಕೋವಿಕ್ ಅವರನ್ನು ಮದುವೆಯಾದ ಕಾರಣ ಅವರ ವೈಯಕ್ತಿಕ ಜೀವನದ ದೃಷ್ಟಿಯಿಂದ 2020 ವರ್ಷವು ಅವರಿಗೆ ಅದ್ಭುತವಾಗಿದೆ. ಜುಲೈ ತಿಂಗಳಲ್ಲಿ ಈ ದಂಪತಿಯು ಗಂಡು ಮಗುವಿನ ಪೋಷಕರಾದರು. ಇತ್ತೀಚೆಗಷ್ಟೇ ನತಾಶ ಮತ್ತು ಹಾರ್ದಿಕ್ ತಮ್ಮ ಮಗ ಅಗಸ್ತ್ಯನಿಗೆ ಎರಡು ತಿಂಗಳು ತುಂಬಿದೆ ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಆದರೆ ಈಗ ವಿಚಾರ ಏನಂದ್ರೆ ಮುಂಬೈನ ಇತ್ತೀಚಿನ ಪಂದ್ಯದಲ್ಲಿ, ಪಾಂಡ್ಯ ಅವರನ್ನು ಪಂದ್ಯದ ಸೂಪರ್-ಸ್ಟ್ರೈಕರ್ ಪ್ರಶಸ್ತಿಗೆ ಗೌರವಿಸಲಾಯಿತು. ಈ ವೇಳೆ ವೀಕ್ಷಕ ವಿವರಣೆಗಾರ ಡ್ಯಾನಿ ಮಾರಿಸನ್ ಅವರು ಈಗ ಪಾರ್ಟಿಗಳಿಗೆ ಹಾಜರಾಗುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ ಎಂದು ಕೇಳಿದರು.

ಮಾರಿಸನ್ ರ ಈ ತಮಾಷೆಯ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್ ''ನಾನು ಈಗ ತಂದೆಯಾಗಿದ್ದೇನೆ, ನಾನು ಅದನ್ನು ಮಿಸ್ ಮಾಡಿಕೊಳ್ಳಬಾರದು, ಡೈಪರ್‌ಗಳನ್ನು ಬದಲಾಯಿಸುವುದನ್ನು ಮಿಸ್‌ ಮಾಡಿಕೊಳ್ಳಬೇಕು'' ಎಂದು ಹೇಳಿದ್ದಾರೆ.

ಹಾರ್ದಿಕ್‌ರ ಈ ಉತ್ತರವು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು, ಜೊತೆಗೆ ಪ್ರಶ್ನೆ ಕೇಳಿದ ಡ್ಯಾನಿ ಮಾರಿಸನ್ಗೆ ಟಾಂಗ್ ಕೊಟ್ಟಂತೂ ಇತ್ತು.

Story first published: Saturday, October 17, 2020, 18:24 [IST]
Other articles published on Oct 17, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+