'ವಿಜಯ್ ನನ್ನ ಹೆಂಡತಿಯಿದ್ದಂತೆ': ಜೊತೆಯಾಟದ ಕ್ಷಣ ಸ್ಮರಿಸಿದ ಧವನ್!

ನವದೆಹಲಿ, ಮೇ 26: ಇಂಗ್ಲೆಂಡ್ ವಿರುದ್ಧ 2012ರಲ್ಲಿ ತವರಿನಲ್ಲಿ ನಡೆದ ಸರಣಿಯಲ್ಲಿ ಭಾರತದ ಸೋಲು ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಆರಂಭಿಕ ಜೋಡಿಯ ದಾರಿ ಮುಚ್ಚಿಸಿಬಿಟ್ಟಿತ್ತು. ಅನಂತರ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಗಂಭೀರ್ ಅವರನ್ನು ಕೈ ಬಿಡಲಾಯ್ತು. ಗಂಭೀರ್ ಬದಲಿಗೆ ಆಯ್ಕೆಯಾದ ಮುರಳಿ ವಿಜಯ್, ವೀರೇಂದ್ರ ಸೆಹ್ವಾಗ್ ಜೊತೆಗೆ ಆರಂಭಿಕ ಜೋಡಿಯಾದರು. ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಎರಡು ಟೆಸ್ಟ್ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದರಿಂದ ಸೆಹ್ವಾಗ್ ಅವರನ್ನೂ ತಂಡದಿಂದ ದೂರವಿಡಲಾಯ್ತು.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೆಹ್ವಾಗ್ ಜಾಗಕ್ಕೆ ದೆಹಲಿಯ ಮತ್ತೊಬ್ಬ ಬ್ಯಾಟ್ಸ್‌ಮನ್ ಶಿಖರ್ ಧವನ್ ಎಂಟ್ರಿಯಾದರು. ಮೊಹಾಲಿಯಲ್ಲಿ ಮೂರನೇ ಪಂದ್ಯ ನಡೆದಿತ್ತು. ಆವತ್ತು ಪಾದಾರ್ಪಣೆ ಮಾಡಿದ್ದ ಧವನ್, ವಿಜಯ್ ಜೊತೆಗೆ 289 ರನ್ ಪಾರ್ಟ್ನರ್‌ಶಿಪ್ ಕೊಟ್ಟಿದ್ದರು. ಆ ಪಂದ್ಯದಲ್ಲಿ ಧವನ್ 187 ರನ್ ಗಳಿಸಿದ್ದರೆ, ವಿಜಯ್ 153 ರನ್ ಸೇರಿಸಿದ್ದರು.
ಆವತ್ತಿನಿಂದ ಒಂದಿಷ್ಟು ಕಾಲ ಜೊತೆಯಾಗಿ ಆಡಿದ್ದರಿಂದ ಮುರಳಿ ವಿಜಯ್ ಜೊತೆಗಿನ ಕ್ಷಣಗಳನ್ನು ಶಿಖರ್ ಧವನ್ ಸ್ಮರಿಸಿಕೊಂಡಿದ್ದಾರೆ. ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಆರ್ ಅಶ್ವಿನ್ ಜೊತೆಗೆ ಮಾತುಕತೆ
ಟೀಮ್ ಇಂಡಿಯಾದ ಟಾಪ್ ಆರ್ಡರ್‌ನಲ್ಲಿ ಇದ್ದಿದ್ದರಿಂದ ಶಿಖರ್ ಧವನ್-ಮುರಳೀ ವಿಜಯ್ ನೆನಪಿನಲ್ಲಿ ಉಳಿಯುವಂತ ಒಂದಿಷ್ಟು ಖುಷಿಯ ಕ್ಷಣಗಳನ್ನು ಕಳೆದಿದ್ದರು. ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಜೊತೆಗೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡಿದ ಶಿಖರ್ ಧವನ್, ಮುರಳೀ ವಿಜಯ್ ಜೊತೆಯ ನೆನಪುಗಳನ್ನು ಹಂಚಿಕೊಂಡರು.

ಆತ ನನ್ನ ಹೆಂಡತಿಯ ಹಾಗೆ
ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ವಿನ್ ಅವರ 'ರೆಮಿನಿಸ್ ವಿತ್ ಅಶ್' (ಅಶ್ವಿನ್ ಜೊತೆಗೆ ನೆನೆಪಿಸಿಕೊಳ್ಳಿ) ಶೋನಲ್ಲಿ ಮಾತನಾಡಿದ ಧವನ್, 'ಆನ್ಫೀಲ್ಡ್ ಮತ್ತು ಆಫ್ ದಿ ಫೀಲ್ಡ್ನಲ್ಲಿ ವಿಜಯ್ ತುಂಬಾ ಒಳ್ಳೆ ವ್ಯಕ್ತಿ. ಆತನನ್ನ ತುಂಬಾ ಹತ್ತಿರದಿಂದ ನೋಡಿದ್ದೇನೆ. ಎಲ್ಲದಕ್ಕೂ ಏನಾದ್ರೂ ಒಂದು ಹೇಳುತ್ತಲೇ ಇರುತ್ತಾನೆ. ನಾನು ಎಷ್ಟೋ ಬಾರಿ ವಿಜಯ್ಗೆ ಹೇಳಿದ್ದೆ, ನೀನು ನನ್ನ ಹೆಂಡತಿ ಇದ್ದ ಹಾಗೆ ಎಂದು,' ಎಂದರು.

ವಿಜಯ್ ಜೊತೆಗಿನ ಇನ್ನಿಂಗ್ಸ್ ಇಷ್ಟ
'ಆತನನ್ನ ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಆತನನ್ನ ಅರ್ಥಮಾಡಿಕೊಳ್ಳಬೇಕಾದ್ರೆ, ತಾಳ್ಮೆ ಇರಬೇಕು. ಇನ್ನು ಬ್ಯಾಟಿಂಗ್ ಮಾಡುವ ವೇಳೆ, ಕೆಲವೊಮ್ಮೆ ರನ್ ಇದ್ರೂ, ನಾವು ಓಡೋದಿಲ್ಲ. ಆಗ ಇಬ್ಬರ ನಡುವೆ ದೊಡ್ಡ ಜಗಳವೇ ಆಗಿಬಿಡುತ್ತದೆ. ನನಗೆ ವಿಜಯ್ ಜೊತೆ ಇನ್ನಿಂಗ್ಸ್ ಆರಂಭಿಸೋದು ಅಂದ್ರೆ ಇಷ್ಟ. ಏನೇ ಆದ್ರೂ ನಾವಿಬ್ಬರೂ ಒಳ್ಳೆ ಸ್ನೇಹಿತರು. ವಿಜಯ್ ಜೊತೆ ಕಾಲ ಕಳೆಯಲು ಇಷ್ಟ ಪಡುತ್ತೇನೆ ಎಂದಿದ್ದಾರೆ ಶಿಖರ್ ಧವನ್.

ಓಪನಿಂಗ್‌ನಿಂದ ಕೆಳಗಿಳಿದ ಜೋಡಿ
ಶಿಖರ್ ಧವನ್ ಮತ್ತು ಮುರಳಿ ವಿಜಯ್ ಇಬ್ಬರೂ ಸದ್ಯ ಟೀಮ್ ಇಂಡಿಯಾದ ಆರಂಭಿಕ ಸ್ಥಾನವನ್ನು ಯುವ ಬ್ಯಾಟ್ಸ್‌ಮನ್‌ಗಳಾದ ಮಯಾಂಕ್ ಅಗರ್ವಾಲ್ ಮತ್ತು ಪೃಥ್ವಿ ಶಾಗೆ ಬಿಟ್ಟುಕೊಟ್ಟಿದ್ದಾರೆ. ಇತ್ತ ರೋಹಿತ್ ಶರ್ಮಾ ಕೂಡ ಅಧ್ಬುತ ಪ್ರದರ್ಶನದೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲೂ ಆರಂಭಿಕ ಸ್ಥಾನ ಆವರಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications