ಐಪಿಎಲ್ ವಿಶ್ವದ ಅತಿದೊಡ್ಡ ದೇಶೀಯ ಟೂರ್ನಿ: ಸ್ಯಾಮ್ ಬಿಲ್ಲಿಂಗ್ಸ್

ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಯಾಮ್ ಬಿಲ್ಲಿಂಗ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ತಮ್ಮ ಮೊದಲ ಐಪಿಎಲ್ ಸೀಸನ್ ಆಡಲು ಕಾತುರರಾಗಿದ್ದಾರೆ. ಈಗಾಗಲೇ ಕಳೆದ ಸೀಸನ್‌ಗಳಲ್ಲಿ ಸ್ಯಾಮ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ.
ಕೆಕೆಆರ್ ಪರ ಕಣಕ್ಕಿಳಿಯಲಿರುವ ಸ್ಯಾಮ್ ಬಿಲ್ಲಿಂಗ್ಸ್ ಟೂರ್ನಮೆಂಟ್‌ನಲ್ಲಿ ಭಾಗಿಯಾಗುವುದರ ಕುರಿತಾಗಿ ಸಾಕಷ್ಟು ಖುಷಿ ವ್ಯಕ್ತಪಡಿಸಿದ್ದು, 2019ರ ಬಳಿಕ ಭಾರತದಲ್ಲಿ ಟೂರ್ನಿ ಆಯೋಜನೆ ಜೊತೆಗೆ, ಪ್ರೇಕ್ಷಕರು ತುಂಬಿದ ಗ್ಯಾಲರಿ ನೋಡಲು ಎದುರು ನೋಡುತ್ತಿದ್ದಾರೆ.
'' ಸ್ಯಾಮ್ ಹೈ ತಯ್ಯಾರ್, ಕೆಕೆಆರ್ ಹೈ ತಯ್ಯಾ್. ನನ್ನ ಪ್ರಕಾರ ಐಪಿಎಲ್ ಇಡೀ ವಿಶ್ವದಲ್ಲೇ ಅತಿದೊಡ್ಡ ದೇಶೀಯ ಟೂರ್ನಮೆಂಟ್ ಆಗಿದೆ. ಇದಕ್ಕಿಂತ ಹೆಚ್ಚಿನದನ್ನು ಹೇಳುವುದಕ್ಕೆ ಏನು ಇಲ್ಲ. ಇದು ನನ್ನ ಆರನೇ ವರ್ಷದ ಸೀಸನ್ ಆಗಿದ್ದು, ಭಾರತದಲ್ಲಿ ಐಪಿಎಲ್ ಆಡುವ ಹಂಬಲ ಹೊಂದಿದ್ದೇನೆ'' ಎಂದು ಸ್ಯಾಮ್ ಬಿಲ್ಲಿಂಗ್ಸ್ ಹೇಳಿದ್ದಾರೆ.
"ನನ್ನ ಪ್ರಕಾರ ಅಭಿಮಾನಿಗಳು ಮತ್ತು ಅವರ ಬೆಂಬಲವು ಐಪಿಎಲ್ ಅನ್ನು ವಿಶ್ವದ ವಿಭಿನ್ನ ಕ್ರೀಡೆಯ ಆಯಾಮಕ್ಕೆ ಕೊಂಡೊಯ್ಯುತ್ತಾರೆ. ನೀವು 1.2 ಶತಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಜನರನ್ನು ಹೊಂದಿದ್ದೀರಿ. ಪ್ರತಿಯೊಬ್ಬರೂ ಸಂಪೂರ್ಣವಾಗಿ ಕ್ರಿಕೆಟ್ ಅನ್ನು ಪ್ರೀತಿಸುತ್ತಾರೆ. ಹಾಗಾಗಿ ಇಲ್ಲಿ ಆಡುವುದು ಆಟಗಾರರಿಗೆ ಸಂತೋಷವಾಗಿದೆ. ಇಲ್ಲಿ ಆಡುವುದು ಒಂದು ಗೌರವ," ಎಂದು ಬಿಲ್ಲಿಂಗ್ಸ್ ಹೇಳಿದ್ದಾರೆ.
2019ರಿಂದ ಐಪಿಎಲ್ ಆಟವಾಡಿಲ್ಲ ಸ್ಯಾಮ್ ಬಿಲ್ಲಿಂಗ್ಸ್
ಬಿಲ್ಲಿಂಗ್ಸ್ ಇದುವರೆಗೆ 215 ಟಿ20 ಪಂದ್ಯಗಳನ್ನ ಆಡಿದ ಅನುಭವ ಹೊಂದಿದ್ದು, ಅವರು ಐಪಿಎಲ್ ವೃತ್ತಿಜೀವನದಲ್ಲಿ ಕೇವಲ 22 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಇಂಗ್ಲೆಂಡ್ ವಿಕೆಟ್ ಕೀಪರ್ ತಲಾ 11 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪ್ರತಿನಿಧಿಸಿದ್ದಾರೆ. 2018 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಮ್ಯಾಚ್ ವಿನ್ನಿಂಗ್ ಆಟವಾಡಿ ಮಿಂಚಿದ್ದಾರೆ.
ಒಟ್ಟಾರೆಯಾಗಿ, ಅವರು ಚೆನ್ನೈಗಾಗಿ 11 ಪಂದ್ಯಗಳಲ್ಲಿ ಕೇವಲ 108 ರನ್‌ಗಳನ್ನು ಮಾತ್ರ ಗಳಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಪರ 134.52 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 10 ಇನ್ನಿಂಗ್ಸ್‌ಗಳಲ್ಲಿ 226 ರನ್‌ಗಳನ್ನು ದಾಖಲಿಸಿ ಉತ್ತಮ ರನ್ ಕಲೆಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications