For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಗೆ ಸುನಿಲ್ ಗವಾಸ್ಕರ್ ಎಚ್ಚರಿಕೆ: ಆಡದಿದ್ದರೆ ತಂಡದಿಂದ ಹೊರ ನಡೆಯಬೇಕಾಗುತ್ತದೆ!

Virat kohli

ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಮಾಜಿ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಎಚ್ಚರಿಕೆ ನೀಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ನಾಲ್ಕು ಎಸೆತಗಳಲ್ಲಿ ಕೇವಲ ಎಂಟು ರನ್ ಗಳಿಸಿ ಕೊಹ್ಲಿ ಔಟಾದ್ರು.

ಕೊಹ್ಲಿ ಬ್ಯಾಟಿಂಗ್ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಗವಾಸ್ಕರ್ ಕೊಹ್ಲಿ ಬ್ಯಾಟಿಂಗ್‌ನತ್ತ ಹೆಚ್ಚು ಗಮನಹರಿಸಿ ರನ್ ಗಳಿಸಲು ಪ್ರಯತ್ನಿಸಬೇಕು ಇಲ್ಲದಿದ್ದರೆ ಅವರನ್ನು ತಂಡದಿಂದ ಕೈಬಿಡಬಹುದು ಎಂದು ಗವಾಸ್ಕರ್ ಎಚ್ಚರಿಸಿದ್ದಾರೆ.

ಎರಡು ವರ್ಷಗಳಿಂದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿಲ್ಲ. ಅವರು ಕೊನೆಯದಾಗಿ 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮೂರಂಕಿ ದಾಟಿದ್ರು. 70 ಅಂತರಾಷ್ಟ್ರೀಯ ಶತಕ ಸಿಡಿಸಿರುವ ಕೊಹ್ಲಿ ಆನಂತರ ಒಂದೇ ಒಂದೂ ಶತಕ ಸಿಡಿಸದೇ ಇರುವುದು ಭಾರೀ ಆಶ್ಚರ್ಯ ಮೂಡಿಸುವುದರ ಜೊತೆಗೆ ಟೀಕೆಗೆ ಕಾರಣವಾಗಿದೆ.

ಪ್ರಸ್ತುತ ತಂಡದಲ್ಲಿ ಕೇವಲ ಆಟಗಾರನಾಗಿ ಆಡುತ್ತಿರುವಾಗ ಕೊಹ್ಲಿ, ಹೊಸ ನಾಯಕ ಗೆಲ್ಲಲು ಬಯಸುವುದಿಲ್ಲ ಎಂಬ ಊಹಾಪೋಹ ಯಾವಾಗಲೂ ಇರುತ್ತದೆ. ಇದು ಅಸಂಬದ್ಧ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಏಕೆಂದರೆ ತಂಡದಲ್ಲಿ ಈ ಮಾಜಿ ನಾಯಕನ ಸ್ಥಾನ ಎಂದಿಗೂ ಸುಭದ್ರವಾಗಿಲ್ಲ. ಬ್ಯಾಟ್ಸ್ ಮನ್ ಆಗಿದ್ದರೆ ಉತ್ತಮ ರನ್ ಗಳಿಸಬೇಕು, ಬೌಲರ್ ಆಗಿದ್ದರೆ ವಿಕೆಟ್ ಕಬಳಿಸಬೇಕು. ಇಲ್ಲದಿದ್ದರೆ, ಆಟಗಾರನು ರಾಷ್ಟ್ರೀಯ ತಂಡವನ್ನು ತೊರೆಯಬೇಕಾಗುತ್ತದೆ ಎಂದು ಗವಾಸ್ಕರ್ ಎಚ್ಚರಿಸಿದ್ದಾರೆ.

ಸುನಿಲ್ ಗವಾಸ್ಕರ್ ವಿರಾಟ್ ಕೊಹ್ಲಿ ಹೆಸರನ್ನು ಹೇಳದೆ ಈ ಮಾತು ಹೇಳಿದ್ದರೂ, ಅದು ಕೊಹ್ಲಿ ಬಗ್ಗೆ ಎಂಬುದು ಸ್ಪಷ್ಟವಾಗಿದೆ. ಕೊಹ್ಲಿ ಸ್ಕೋರ್ ಮಾಡಲು ವಿಫಲವಾದರೆ, ಶೀಘ್ರದಲ್ಲೇ ತಂಡವನ್ನು ತೊರೆಯಬೇಕಾಗುತ್ತದೆ ಎಂದು ಗವಾಸ್ಕರ್ ಹೇಳಿದ್ದಾರೆ.

West Indies ವಿರುದ್ಧ‌ ನಾಳೆ ಕಣಕ್ಕಿಳಿಯುವವರ್ಯಾರು | Oneindia Kannada

ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ಉದ್ದೇಶಪೂರ್ವಕವಾಗಿ ರನ್ ಗಳಿಸದೆ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ ಎಂದು ಕೆಲವರು ಬೆಟ್ಟು ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗವಾಸ್ಕರ್, ನಾಯಕ ಕೊಹ್ಲಿ ಅಷ್ಟೇ ಅಲ್ಲದೇ ಬೇರೆಯವರು ಉತ್ತಮ ಪ್ರದರ್ಶನ ನೀಡದಿದ್ದರೆ ತಂಡವನ್ನು ತೊರೆಯಬೇಕಾಗುತ್ತದೆ ಎಂದು ಹೇಳಿದ್ದಾರೆ. ಕೊಹ್ಲಿ ರೋಹಿತ್ ಅಡಿಯಲ್ಲಿ ಅಲ್ಲ, ಯಾರ ಅಡಿಯಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

Story first published: Tuesday, February 8, 2022, 23:32 [IST]
Other articles published on Feb 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+