ಮುಂಬೈಗೆ ಉತ್ತಮ ಆರಂಭ ನೀಡಲು ಯತ್ನಿಸುತ್ತಿದ್ದೇನೆ: ಕ್ವಿಂಟನ್ ಡಿ ಕಾಕ್

ದುಬೈ: ಎಲ್ಲಾ ತಂಡಗಳಲ್ಲೂ ಮಧ್ಯಮ ಕ್ರಮಾಂಕದಲ್ಲಿ ಬರುವ ಬ್ಯಾಟ್ಸ್‌ಮನ್‌ಗಳಿಗೆ ಜವಾಬ್ದಾರಿ ನಿರ್ವಹಿಸೋದು ಸುಲಭ. ಆದರೆ ಆರಂಭಿಕ ಬ್ಯಾಟ್ಸ್‌ಮನ್‌ಗಳಿಗೆ ಹಾಗಿರೋಲ್ಲ. ತಂಡದ ಉತ್ತಮ ಆರಂಭ ಓಪನರ್‌ಗಳನ್ನೇ ಅವಲಂಭಿಸಿರುವುದರಿಂದ ಇದು ಕೊಂಚ ಸವಾಲಿನ ಸಂಗತಿ ಎಂದು ಮುಂಬೈ ಇಂಡಿಯನ್ಸ್ ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಲಿಮಿಟೆಡ್ ಓವರ್ ಕ್ರಿಕೆಟ್‌ನ ನಾಯಕರಾಗಿರುವ ಕ್ವಿಂಟನ್ ಡಿ ಕಾಕ್, ಮುಂಬೈ ಇಂಡಿಯನ್ಸ್ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 12 ಇನ್ನಿಂಗ್ಸ್ ಆಡಿರುವ ಡಿ ಕಾಕ್ 39.20ರ ಸರಾಸರಿಯಂತೆ 392 ರನ್ ಕಲೆ ಹಾಕಿದ್ದಾರೆ. ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.
ಪಂದ್ಯದಲ್ಲಿನ ತನ್ನ ಜವಾಬ್ದಾರಿಯ ಬಗ್ಗೆ ಮಾತನಾಡಿದ ಡಿ ಕಾಕ್, 'ಮಧ್ಯಮ ಕ್ರಮಾಂಕದಲ್ಲಿ ಅನುಭವ ಇರುವುದರಿಂದ ಇದು ಯಾವುದೇ ಸಂದರ್ಭದಲ್ಲೂ ನೆರವಿಗೆ ಬರುತ್ತದೆ. ನಾವು ಉತ್ತಮ ಆರಂಭದ ಸಾದ್ಯತೆಗಳಿಗಾಗಿ ಎದುರು ನೋಡುತ್ತಿದ್ದೇವೆ. ನೀವು ಅಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಎದುರಿನವರಿಗೆ ಸ್ಟ್ರೈಕ್ ಕೊಡಬೇಕು. ಆಗ ಆತ ಉತ್ತಮ ಬ್ಯಾಟಿಂಗ್ ನೀಡಬಲ್ಲ,' ಎಂದಿದ್ದಾರೆ.
ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಉತ್ತಮ ಆಟ ನೀಡುತ್ತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆಡಿರುವ 12 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದಿರುವ ಎಂಐ 16 ಅಂಕಗಳನ್ನು ಕಲೆ ಹಾಕಿದೆ. ಈಗಾಗಲೇ ಪ್ಲೇ ಆಫ್‌ಗೂ ಪ್ರವೇಶಿಸಿದ ಮೊದಲ ತಂಡವಾಗಿ ಮುಂಬೈ ಗುರುತಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications