Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೂಮ್ರಾ ಸವಾಲು ಎದುರಿಸಲು ಕಾತರನಾಗಿದ್ದೇನೆ ಎಂದ ಪಾಕ್ ಬ್ಯಾಟ್ಸ್‌ಮನ್

I want to face Jasprit Bumrah challenge, says Shan Masood

ಲಾಹೋರ್, ಮೇ 25: ಆಧುನಿಕ ಕ್ರಿಕೆಟ್ ಯುಗದಲ್ಲಿ ವೇಗದ ಬೌಲರ್‌ಗಳಲ್ಲಿ ಅತ್ಯುತ್ತಮ ಬೌಲರ್ ಎಂದು ಗುರುತಿಸಿಕೊಂಡವರು ಜಸ್‌ಪ್ರೀತ್ ಬೂಮ್ರಾ. 2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದ ಬೂಮ್ರಾ ಅಲ್ಲಿಂದ ಆಕರ್ಷೀಯ ಆಟಗಾರರ ಸಾಲಿನಲ್ಲಿ ಸೇರಿಕೊಂಡರು.

ಸದ್ಯ ಬೂಮ್ರಾ ಟೀಮ್ ಇಂಡಿಯಾದಲ್ಲಿ ಮೂರೂ ಕ್ರಿಕೆಟ್ ಮಾದರಿಗಳಲ್ಲೂ ಪ್ರಮುಖ ಬೌಲರ್‌ ಆಗಿ ಕಾಣಿಸಿಕೊಂಡಿದ್ದಾರೆ. 14 ಟೆಸ್ಟ್ ಪಂದ್ಯಗಳಲ್ಲಿ ಬೂಮ್ರಾ 20.3ರ ಸರಾಸರಿಯಂತೆ 68 ವಿಕೆಟ್‌, 64 ಏಕದಿನ ಪಂದ್ಯಗಳಲ್ಲಿ 24.4ರ ಸರಾಸರಿಯಲ್ಲಿ 104 ವಿಕೆಟ್‌ ಪಡೆದಿದ್ದಾರೆ.

ಟಿ20ಐನಲ್ಲಿ 50+ ವಿಕೆಟ್‌ ಸಾಧನೆ ಮಾಡಿದ ಭಾರತದ 3 ಬೌಲರ್‌ಗಳ (ಯುಜುವೇಂದ್ರ ಚಾಹಲ್, ಆರ್ ಅಶ್ವಿನ್) ಜೊತೆ ಬೂಮ್ರಾ ಕೂಡ ಗುರುತಿಸಿಕೊಂಡಿದ್ದಾರೆ. ಏಕದಿನ ಮತ್ತು ಟೆಸ್ಟ್ ಎರಡರಲ್ಲೂ ಐಸಿಸಿ ರ್ಯಾಂಕಿಂಗ್‌ನಲ್ಲಿ 10ರೊಳಗೆ ಇರುವ ಅಪಾಯಕಾರಿ ಬೌಲರ್ ಬೂಮ್ರಾ ಅವರ ಸವಾಲು ಸ್ವೀಕರಿಸಲು ಪಾಕಿಸ್ತಾನ ಬ್ಯಾಟ್ಸ್‌ಮನ್ ಶಾನ್ ಮಸೂದ್‌ಗೆ ಆಸೆಯಂತೆ. ಹೀಗಂತ ಅವರೇ ಹೇಳಿಕೊಂಡಿದ್ದಾರೆ.

ಕ್ರಿಕ್ಯಾಸ್ಟ್ ಯೂಟ್ಯೂಬ್‌ ಚಾನೆಲ್‌ನಲ್ಲಿನ ಸಂದರ್ಶನದಲ್ಲಿ ಮಾತನಾಡಿದ 30ರ ಹರೆಯದ ಶಾನ್ ಮಸೂದ್, 'ವೇಗಿ ಬೂಮ್ರಾ ವಿರುದ್ಧ ನಾನು ಯಾವತ್ತಿಗೂ ಆಡಿಲ್ಲ. ಹೀಗಾಗಿ ಬೂಮ್ರಾ ಬಗ್ಗೆ ಜಗತ್ತಿನ ಸುತ್ತಮುತ್ತ ಮಾತನಾಡುವಾಗೆಲ್ಲ ಅವರ ವಿರುದ್ಧ ಆಡಬೇಕೆನಿಸುತ್ತದೆ. ಈ ಸವಾಲನ್ನು ನಾನು ಸ್ವೀಕರಿಸಬಯಸಿದ್ದೇನೆ,' ಎಂದಿದ್ದಾರೆ.

ನಿಮ್ಮ ವೃತ್ತಿ ಬದುಕಿನಲ್ಲಿ ನೀವು ಎದುರಿಸಿದ ವೇಗಿಗಳ ಬಗ್ಗೆ ಹೇಳಿ ಎಂಬ ಪ್ರಶ್ನೆಗೆ ಉತ್ತರಿಸಿದ ಮಸೂದ್, 'ಇತ್ತೀಚೆಗೆ ನಾನು ಆಡಿದ ಮತ್ತು ವೈಯಕ್ತಿಕವಾಗಿ ನನ್ನ ಫೇವರಿಟ್ ವೇಗಿಯೆಂದರೆ ಡೇಲ್ ಸ್ಟೇನ್. ಇನ್ನು ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ, ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ಕೂಡ ನನ್ನ ವಿಕೆಟ್ ವಿಕೆಟ್ ಮುರಿದಿದ್ದಾರೆ,' ಎಂದರು

Story first published: Monday, May 25, 2020, 22:43 [IST]
Other articles published on May 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+