ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಪರ ಮತ್ತೆ ಆಲ್‌ರೌಂಡರ್ ಆಗಿ ಆಡಲು ತಯಾರಿ ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ

Hardik pandya

ಟೀಂ ಇಂಡಿಯಾಕ್ಕೆ ಕಂಬ್ಯಾಕ್ ಮಾಡಲು ಮತ್ತು ಆಲ್‌ರೌಂಡರ್ ಆಗಿ ಪ್ರದರ್ಶನ ನೀಡಲು ಹಾರ್ದಿಕ್ ಪಾಂಡ್ಯ ಗುರಿನೆಟ್ಟಿದ್ದಾರೆ. ಭಾರತದ ಟಾಪ್ ಆಲ್‌ರೌಂಡರ್ ಆಗಿದ್ದ ಪಾಂಡ್ಯ ಕೆಲವು ವರ್ಷಗಳ ಹಿಂದೆ ಮೊದಲ ಆಯ್ಕೆಯಾಗಿದ್ದರು. ಆದ್ರೆ ಇತ್ತೀಚೆಗೆ ಗಾಯಾಳುವಾಗಿ ತಂಡದಿಂದ ಹೊರಬಿದ್ದಿದ್ದಲ್ಲದೆ ಐಪಿಎಲ್‌ನಲ್ಲಿ ತಮ್ಮ ಮುಂಬೈ ತಂಡವನ್ನ ಕಳೆದುಕೊಂಡರು.

ಐಪಿಎಲ್ 2021ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಒಂದು ಓವರ್ ಕೂಡ ಬೌಲಿಂಗ್ ಮಾಡದ ಹಾರ್ದಿಕ್ ಪಾಂಡ್ಯ ಕುರಿತು ಸಾಕಷ್ಟು ಟೀಕೆಗಳು ಎದುರಾದವು, ಆತ ಬೌಲಿಂಗ್ ಮಾಡದೇ ಇದ್ದರೆ, ಆಲ್‌ರೌಂಡರ್ ಎಂದು ಹೇಗೆ ಕರೆಸಿಕೊಳ್ಳುತ್ತಾನೆ ಎಂದೆಲ್ಲಾ ಟೀಕೆಗಳು ಕೇಳಿಬಂದಿದ್ದವು.

ಟೀಂ ಇಂಡಿಯಾಕ್ಕೆ ಫಾರ್ಮ್‌ ಇಲ್ಲದ ಅನುಭವಿಗಳು ಬೇಡ, ಹೊಸ ಆಟಗಾರರು ಬೇಕಾಗಿದ್ದಾರೆ: ಸಂಜಯ್ ಮಂಜ್ರೇಕರ್ಟೀಂ ಇಂಡಿಯಾಕ್ಕೆ ಫಾರ್ಮ್‌ ಇಲ್ಲದ ಅನುಭವಿಗಳು ಬೇಡ, ಹೊಸ ಆಟಗಾರರು ಬೇಕಾಗಿದ್ದಾರೆ: ಸಂಜಯ್ ಮಂಜ್ರೇಕರ್

ಇದರ ಹೊರತಾಗಿಯೂ ಹಾರ್ದಿಕ್ 2021ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿದ್ರು. ಆದ್ರೆ ಟೂರ್ನಿಯಲ್ಲಿ ಮಿಂಚದ ಹಾರ್ದಿಕ್ ಪಾಂಡ್ಯರನ್ನ ಆಯ್ಕೆಗಾರರು ಟೂರ್ನಿ ಮುಗಿದ ಮೇಲೆ ತಂಡದಿಂದ ಕೈ ಬಿಟ್ಟರು.

ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಫಿಟ್ನೆಸ್‌ಗಾಗಿ ರಾಷ್ಟ್ರೀಯ ಅಕಾಡೆಮಿಗೆ ತೆರಳಿ ಪುನರ್ವಸತಿಗೆ ಒಳಗಾದರು. ಈ ವೇಳೆ ಎಡಗೈ ಬ್ಯಾಟ್ಸ್‌ಮನ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್‌ಗೆ ರಾಷ್ಟ್ರೀಯ ತಂಡದಲ್ಲಿ ಪಾಂಡ್ಯ ಸ್ಥಾನ ತುಂಬಲು ಅವಕಾಶ ನೀಡಲಾಯಿತು.

ಭಾರತಕ್ಕೆ ನಾನು ಮತ್ತೆ ಆಲ್‌ರೌಂಡರ್ ಆಗಿ ಆಡುವ ಆಸೆ

ಬ್ಯಾಕ್‌ಸ್ಟೇಜ್ ವಿತ್ ಬೋರಿಯಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹಾರ್ದಿಕ್ ಪಾಂಡ್ಯ, ಮತ್ತೊಮ್ಮೆ ಭಾರತಕ್ಕಾಗಿ ಆಲ್‌ರೌಂಡರ್ ಆಗಿ ಆಡಲು ತಯಾರಿ ನಡೆಸುತ್ತಿರುವುದಾಗಿ ಹೇಳಿದ್ದಾರೆ.

"ನಾನು ಆಲ್ ರೌಂಡರ್ ಆಗಿ ಆಡಲು ಬಯಸುತ್ತೇನೆ. ಏನಾದರೂ ಕೆಟ್ಟದಾದರೆ, ನನಗೆ ಗೊತ್ತಿಲ್ಲ ಆದರೆ ನನ್ನ ಸಿದ್ಧತೆಗಳು ಆಲ್ ರೌಂಡರ್ ಆಗಿ ಆಡುವುದು. ನಾನು ಉತ್ತಮ ಭಾವನೆ ಹೊಂದಿದ್ದೇನೆ, ಬಲಶಾಲಿಯಾಗಿದ್ದೇನೆ ಮತ್ತು ಅಂತಿಮವಾಗಿ ಏನಾಗುತ್ತದೆ ಎಂಬುದನ್ನು ಸಮಯ ಹೇಳುತ್ತದೆ'' ಎಂದು ಪಾಂಡ್ಯ ಹೇಳಿದರು.

ಇನ್ನು ಐಪಿಎಲ್ 2022ರ ಸೀಸನ್‌ನಲ್ಲಿ ಅಹಮದಾಬಾದ್ ತಂಡವನ್ನ ಮುನ್ನಡೆಸಲಿರುವ ಹಾರ್ದಿಕ್ ಪಾಂಡ್ಯ ತಮ್ಮ ನಾಯಕತ್ವದ ಕೌಶಲ್ಯಗಳ ಕುರಿತಾಗಿ ಮಾತನಾಡಿದ್ದಾರೆ.

"ನನ್ನ ನಾಯಕತ್ವದ ಮಾರ್ಗವೆಂದರೆ ಬೇರೆಯವರಿಗೆ ಮಾದರಿಯಾಗಿರುವುದು, ತಂಡವು ಆಡಲು ಬಯಸುವ ಮನೋಭಾವವನ್ನು ಹೊಂದಿಸುವುದು. ಹಾಗಾಗಿ, ನನ್ನ ನಾಯಕತ್ವದ ಮಾರ್ಗವು ತಂಡವನ್ನು ಜೊತೆಗೆ ಕರೆದೊಯ್ಯುವುದು. ಆದ್ದರಿಂದ, ನನ್ನ ತತ್ವಶಾಸ್ತ್ರವು ತುಂಬಾ ಸಂಕೀರ್ಣವಾಗಿಲ್ಲ'' ಎಂದು ಪಾಂಡ್ಯ ಹೇಳಿದ್ದಾನೆ.

ಹಾರ್ದಿಕ್ ಮತ್ತು ರಶೀದ್ ಅವರಿಗೆ ತಲಾ 15 ಕೋಟಿ ನೀಡಲು ಅಹಮದಾಬಾದ್ ಫ್ರಾಂಚೈಸಿ ನಿರ್ಧರಿಸಿದೆ. 2015 ರಲ್ಲಿ 10 ಲಕ್ಷ ರೂ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಅನ್‌ಕ್ಯಾಪ್ಡ್ ಆಟಗಾರನಾಗಿ ಆಯ್ಕೆಯಾದ ಹಾರ್ದಿಕ್‌ ಪಾಂಡ್ಯ, ಕಳೆದ ಸೀಸನ್‌ವರೆಗೂ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ರು. ಆದ್ರೆ ಇದೇ ಮೊದಲ ಬಾರಿಗೆ ಪಾಂಡ್ಯ ಬೇರೆ ಫ್ರಾಂಚೈಸಿಯಲ್ಲಿ ಆಡಲು ಮುಂದಾಗಿದ್ದಾರೆ.

Virat Kohli ಈಗಲೂ ಎಷ್ಟು ವರ್ಷ ಕ್ರಿಕೆಟ್ ಆಡಬಹುದು | Oneindia Kannada

91 ಪಂದ್ಯಗಳಲ್ಲಿ 153.91 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ಪಾಂಡ್ಯ 1476 ರನ್ ದಾಖಲಿಸಿದ್ದಾರೆ. ಅಹಮದಾಬಾದ್ ಫ್ರಾಂಚೈಸಿ ಇವರನ್ನ ಬರೋಬ್ಬರಿ 15 ಕೋಟಿ ರೂಪಾಯಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.

Story first published: Tuesday, January 25, 2022, 22:29 [IST]
Other articles published on Jan 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X