For Quick Alerts
ALLOW NOTIFICATIONS  
For Daily Alerts
 

ಆಗಿನ ಚೀಕು ಬೇರೆ.. ಈಗಿನ ವಿರಾಟ್ ಬೇರೆ..: ಧೋನಿ ಬಳಿಕ ಕೊಹ್ಲಿ ಬಗ್ಗೆ ಯುವರಾಜ್ ಸ್ಪೋಟಕ ಹೇಳಿಕೆ

ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಕಾಲಿಡುವ ಮುನ್ನವೇ ಯುವರಾಜ್ ಸಿಂಗ್ ಸೂಪರ್ ಸ್ಟಾರ್ ಆಗಿ ಮೆರೆದ ಕ್ರಿಕೆಟಿಗ. ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮುನ್ನವೇ ಯುವಿ ಟಿ20 ವಿಶ್ವಕಪ್‌ನಲ್ಲಿ ಆರು ಎಸೆತಗಳಿಗೆ ಆರು ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಬರೆದಿದ್ದರು. ಆದರೆ ಕೊಹ್ಲಿ ಭಾರತ ತಂಡಕ್ಕ ಸೇರಿಕೊಂಡ ಬಳಿಕ ಯುವಿ ಹಾಗೂ ಕೊಹ್ಲಿ ಜೊತೆಗಿನ ಒಡನಾಟ ಅದ್ಭುತವಾಗಿತ್ತು ಎನ್ನುವುದು ಕೂಡ ಅಭಿಮಾನಿಗಳಿಗೆ ಗೊತ್ತೇ ಇದೆ.

ವಿರಾಟ್ ಕೊಹ್ಲಿ ಭಾರತ ತಂಡವನ್ನು ಸೇರಿದ ಬಳಿಕ ತನ್ನ ಸಾಮರ್ಥ್ಯ ಮೂಲಕ ದೊಡ್ಡ ಛಾಪು ಮೂಡಿಸುತ್ತಾ ಸಾಗಿದರು. ಮ್ಯಾಚ್ ವಿನ್ನರ್‌ಗಳಾದ ಇಬ್ಬರು ಆಟಗಾರರು ಅತ್ಯಂತ ಆಪ್ತವಾಗಿದ್ದುಕೊಂಡು ಸುದೀರ್ಘ ಕಾಲ ತಂಡದಲ್ಲಿ ಕೊಡುಗೆ ನೀಡಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳಿ ಕೂಡ ಸಾಕ್ಷಿಯಾಗಿದ್ದಾರೆ. ಆದರೆ ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಜೊತೆಗಿನ ಬಾಂಧವ್ಯ ಈಗ ಈ ಮೊದಲಿನಂತೆ ಇಲ್ಲ ಎನ್ನುವ ವಿಚಾರವನ್ನು ಯುವರಾಜ್ ಸಿಂಗ್ ಸೂಚ್ಯವಾಗಿ ಹೇಳಿಕೊಂಡಿದ್ದು ಅಚ್ಚರಿ ಮೂಡಿಸಿದೆ.

 I was close with Cheeku but not Virat Kohli, he is busy; Yuvraj Singh Remarks On Virat Kohli

ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿರುವ ಯುವರಾಜ್ ಸಿಂಗ್ ಇತ್ತೀಚೆಗಷ್ಟೇ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ತಮ್ಮ ನಡುವಿನ ಗೆಳೆತನದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ತಾನು ಹಾಗೂ ಎಂಎಸ್ ಧೋನಿ ಆತ್ಮೀಯ ಗೆಳೆಯಲ್ಲ ಎಂದು ಹೇಳಿರುವ ಯುವರಾಜ್ ಸಿಂಗ್ ಕ್ರಿಕೆಟ್‌ನ ಕಾರಣದಿಂದಾಗಿ ನಮ್ಮ ಮಧ್ಯೆ ಕೇವಲ ಸಾಂದರ್ಭಿಕ ಗೆಳೆತನ ಮಾತ್ರವೇ ಇತ್ತು ಎಂದು ಹೇಳಿ ಅಚ್ಚರಿ ಮೂಡಿಸಿದ್ದರು.

ಇದೀಗ ಯುವರಾಜ್ ಸಿಂಗ್ ವಿರಾಟ್ ಕೊಹ್ಲಿ ಜೊತೆಗಿನ ಸ್ನೇಹದ ಬಗ್ಗೆಯೂ ಯುವಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 2022ರಲ್ಲಿ ಮೊಹಾಲಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದಾಗ ಮೈದಾನದಲ್ಲಿ ಯುವಿ ಹಾಗೂ ವಿರಾಟ್ ಕ್ಯಾಮರಾ ಮುಂದೆಯೇ ಮುಖಾಮುಖಿಯಾಗಿದ್ದಾಗ ಇಬ್ಬರು ಕೂಡ ಬಾಲ್ಯದ ಗೆಳೆಯರಂತೆ ಆತ್ಮೀಯವಾಗಿ ಮಾತುಕತೆ ನಡೆಸಿದ್ದು ಕಂಡು ಬಂದಿತ್ತು. ಆ ಸಂದರ್ಭದ ಬಗ್ಗೆ ಯುವರಾಜ್ ಸಿಂಗ್ ಮಾತನಾಡಿದ್ದು ನಮ್ಮ ಮಧ್ಯೆ ಅಷ್ಟೇನೂ ಮಾತುಕತೆಯಾಗಿರಲಿಲ್ಲ ಎಂದಿದ್ದು ಕೊಹ್ಲಿ ಬ್ಯುಸಿಯಿದ್ದರು ಎಂದಿದ್ದಾರೆ.

ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿರುವ ಯುವರಾಜ್ ಸಿಂಗ್ ಅವರಲ್ಲಿ ಕೊಹ್ಲಿ ಅವರ ಜೊತೆಗೆ ಸಂಪರ್ಕದಲ್ಲಿ ಇದ್ದೀರಾ ಎಂದು ಕೇಳಲಾಯಿತು. ಅದಕ್ಕೆ ಯುವ ಈ ಅಚ್ಚರಿಯ ಹೇಳಿಕೆ ನೀಡಿದ್ದಾರೆ. "ನಿಜಕ್ಕೂ ಇಲ್ಲ. ಆತ ಬಹಳ ಬ್ಯುಸಿಯಿರುವ ಕಾರಣದಿಂದಾಗಿ ಆತನನ್ನು ಡಿಸ್ಟರ್ಬ್ ಮಾಡಲು ನಾನು ಬಯಸುವುದಿಲ್ಲ. ಯುವಕನಾಗಿದ್ದಾಗ ವಿರಾಟ್ ಹೆಸರು ಚೀಕು. ಈಗ ಚೀಕು ವಿರಾಟ್ ಆಗಿದ್ದಾರೆ. ಅದರಲ್ಲಿ ಬಹಳ ವ್ಯತ್ಯಾಸವಿದೆ" ಎಂದು ಯುವರಾಜ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಇನ್ನು ಇದೇ ಸಮದರ್ಭದಲ್ಲಿ ಯುವರಾಜ್ ಸಿಂಗ್ ನಾಯಕನಾಗಿ ವಿರಾಟ್ ಕೊಹ್ಲಿ ನೇಮಕಗೊಂಡ ಬಳಿಕ ಭಾರತ ತಂಡದಲ್ಲಿ ಫಿಟ್‌ನೆಸ್ ವಿಚಾರವಾಗಿ ಆದ ಬದಲಾವಣೆಗೆ ಪ್ರಶಂಸೆಯ ಮಾತುಗಳನ್ನಾಡಿದ್ದು ಫಿಟ್‌ನೆಸ್ ವಿಚಾರದಲ್ಲಿ ಕೊಹ್ಲಿ ಕ್ರಾಂತಿ ಮಾಡಿದರು ಎಂದಿದ್ದಾರೆ. "ನಾವೆಲ್ಲರೂ ಫಿಟ್ ಆಗಿರುವ ತಂಡವನ್ನು ಹೊಂದಬೇಕು ಎಂದು ಬಯಸಿದ್ದೆವು. ಆದರೆ ಕೊಹ್ಲಿ ನಾಯಕನಾಗಿ ಆಯ್ಕೆಯಾದ ಬಳಿಕ ದೊಡ್ಡ ಬದಲಾವಣೆಯೇ ಆಯಿತು. ಆತ ಬೆಂಚ್ ಮಾರ್ಕ್ ಸೆಟ್ ಮಾಡಿದ್ದರು" ಎಂದಿದ್ದಾರೆ ಯುವಿ.

ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಫುಟ್ಬಾಲ್ ಕೌಶಲ್ಯದ ಬಗ್ಗೆ ಯುವರಾಜ್ ಸಿಂಗ್ ತಮಾಷೆಯ ಮಾತುಗಳನ್ನಾಡಿದ್ದಾರೆ. "ಕೊಹ್ಲಿ ಆತನನ್ನು ಅತ್ಯುತ್ತಮ ಫುಟ್ಬಾಲರ್ ಎಂದುಕೊಂಡಿದ್ದಾನೆ. ನಾನು ಆತನಿಗಿಂತ ಹೆಚ್ಚು ಕೌಶಲ್ಯ ಹೊಂದಿದ್ದೇನೆ. ಆತ ಕಿರಿಯವನಾಗಿದ್ದು ಎಲ್ಲೆಡೆ ಓಡಾಡುತ್ತಾನೆ. ಆತ ತನ್ನನ್ನು ಕ್ರಿಶ್ಚಿಯಾನೋ ರೊನಾಲ್ಡೋ ಎಂದುಕೊಂಡಿದ್ದಾನೆ. ಆದರೆ ಆತ ಅಲ್ಲ. ಕ್ರಿಕೆಟ್‌ನಲ್ಲಿ ಆತ ಕ್ರಿಶ್ಚಿಯಾನೋ ರೊನಾಲ್ಡೋ. ಫಿಟ್‌ನೆಸ್ ಹಾಗೂ ಮನಸ್ಥಿತಿಯಲ್ಲಿ ಅವರು ಹೊಂದಿಕೊಳ್ಳುತ್ತಾರೆ. ಆಟದ ಮೇಲೆ ಅವರ ಏಕಾಗ್ರತೆಯ ವಿಚಾರದಲ್ಲಿಯೂ ಅವರು ಸಮವಾಗುತ್ತಾರೆ" ಎಂದಿದ್ದಾರೆ ಯುವರಾಜ್ ಸಿಂಗ್.

Story first published: Thursday, November 9, 2023, 14:00 [IST]
Other articles published on Nov 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+