ಆರ್‌ಸಿಬಿ ವಿರುದ್ಧ ನಡೆದಿದ್ದ ಆ ಘಟನೆ ನೆನೆದು ಖುಷಿಪಟ್ಟ ಸೂರ್ಯಕುಮಾರ್ ಯಾದವ್

Surya ಹಾಗು Virat Kohli ನಡುವೆ ಅಂದು ಹಾಗಾಗಿದ್ದು ಒಳ್ಳೆಯದಾಯಿತು | Oneindia Kannada

ಕಳೆದ ವರ್ಷ ಅಬುದಾಬಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯವೊಂದರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ತಮ್ಮ ಐಪಿಎಲ್ ವೃತ್ತಿ ಜೀವನದ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. 43 ಎಸೆತಗಳಲ್ಲಿ 79 ರನ್ ಸಿಡಿಸಿದ ಸೂರ್ಯಕುಮಾರ್ ಯಾದವ್ ಆ ಪಂದ್ಯದ ಬಳಿಕ ಸಿಕ್ಕಾಪಟ್ಟೆ ವೈರಲ್ ಆದರು.

ಯುವಕರಿದ್ದಾಗಿನ ಅನುಭವಗಳನ್ನು ಕೊಹ್ಲಿ ಹಂಚಿಕೊಳ್ಳುತ್ತಿರುತ್ತಾರೆ: ಗಿಲ್

ಆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 165 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರರು ಭರ್ಜರಿ ಆರಂಭ ನೀಡುವಲ್ಲಿ ವಿಫಲರಾದರು, ಮಧ್ಯಮ ಕ್ರಮಾಂಕದ ಆಟಗಾರರು ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ಮಾಡಿ 5 ಎಸೆತಗಳು ಬಾಕಿ ಇರುವಾಗಲೇ ಮುಂಬೈ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಯಾರಿಂದಲೂ ಮುರಿಯಲಾಗದ ಸಿಎಸ್‌ಕೆ ನಿರ್ಮಿಸಿರುವ 5 ದಾಖಲೆಗಳು!

ಈ ಪಂದ್ಯದ ವೇಳೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡುತ್ತಿದ್ದಾಗ ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ಮಾಡಿದ್ದರು. ಕೊಹ್ಲಿ ಮಾಡಿದ್ದ ಈ ಸ್ಲೆಡ್ಜ್ ಆ ಪಂದ್ಯದ ಬಳಿಕ ದೊಡ್ಡ ಮಟ್ಟದಲ್ಲಿ ಚರ್ಚೆಗೀಡಾಗಿತ್ತು. ಆ ಸ್ಲೆಡ್ಜಿಂಗ್ ಕುರಿತು ಸೂರ್ಯಕುಮಾರ್ ಯಾದವ್ ಮಾತನಾಡಿದ್ದು 'ನಾನು ಮಾತ್ರವಲ್ಲ ಆ ಜಾಗದಲ್ಲಿ ಬೇರೆ ಯಾವುದೇ ಆಟಗಾರ ಇದ್ದಿದ್ದರೂ ವಿರಾಟ್ ಕೊಹ್ಲಿ ಅದೇ ರೀತಿ ಪ್ರತಿಕ್ರಿಯಿಸುತ್ತಿದ್ದರು, ತಮ್ಮ ಎದುರಾಳಿ ವಿರುದ್ಧ ಕೊಹ್ಲಿ ಮೈದಾನದಲ್ಲಿ ಅದೇ ರೀತಿ ವರ್ತಿಸುತ್ತಾರೆ. ಅದೊಂದು ಒತ್ತಡ ಹೇರುವ ತಂತ್ರವಷ್ಟೆ, ನಿಜಕ್ಕೂ ಕೊಹ್ಲಿ ಸ್ಲೆಡ್ಜಿಂಗ್ ಮಾಡಿದಾಗ ನನಗೆ ತುಂಬಾ ಖುಷಿಯಾಯಿತು' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, May 25, 2021, 7:31 [IST]
Other articles published on May 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X