Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಫ್ಘಾನಿಸ್ತಾನ ವಿಶ್ವಕಪ್ ಗೆದ್ದ ನಂತರವೇ ಮದುವೆಯಾಗುತ್ತೇನೆ: ರಶೀದ್ ಖಾನ್

I Will Get Married Once Afghanistan Win The Cricket World Cup-rashid Khan

ಸೀಮಿತ ಓವರ್‌ಗಳ ಬೆಸ್ಟ್ ಆಲ್‌ರೌಂಡರ್ ರಶೀದ್ ಖಾನ್ ತನ್ನ ಸ್ಪಿನ್ ಬೌಲಿಂಗ್ ಮೂಲಕ ಸಂಚಲವನ್ನು ಮೂಡಿಸಿದ್ದಾರೆ. ಅಫ್ಘಾನಿಸ್ತಾನದ ಈ ಯುವ ಕ್ರಿಕೆಟಿಗ ತನ್ನ ರಾಷ್ಟ್ರಕ್ಕೆ ಕ್ರಿಕೆಟ್‌ನಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಯಶಸ್ಸಿನಲ್ಲಿ ರಶೀದ್ ಖಾನ್ ಪಾತ್ರ ಬಹಳ ದೊಡ್ಡದಿದೆ.

ರಶೀದ್ ಖಾನ್ ಈಗ ತಮ್ಮ ಮದುವೆಯ ಬಗ್ಗೆ ನೀಡಿದ ಹೇಳಿಕೆ ಭಾರೀ ವೈರಲ್ ಆಗಿದೆ. ಆಜಾದಿ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ರಶೀದ್ ಖಾನ್ ತನ್ನ ಮದುವೆಯ ಯೋಜನೆಯ ಬಗ್ಗೆ ಹೇಳಿದ್ದಾರೆ. ಅಪ್ಘಾನಿಸ್ತಾನ ವಿಶ್ವಕಪ್ ಗೆದ್ದ ಬಳಿಕವೇ ತನ್ನ ಮದುವೆ ಎಂದು ರಶೀದ್ ಖಾನ್ ಘೋಷಿಸಿದ್ದಾರೆ.

21 ವರ್ಷದ ರಶೀದ್ ಖಾನ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ "ನಾನು ಪ್ರೀತಿಯಲ್ಲಿ ಬೀಳುವುದು ಅಥವಾ ಮದುವೆಯಾಗುವ ಬಗ್ಗೆ ಯೋಚಿಸುವುದು ಅಪ್ಘಾನಿಸ್ತಾನ ಕ್ರಿಕೆಟ್ ತಂಡ ವಿಶ್ವಕಪ್‌ ಗೆದ್ದ ಬಳಿಕ" ಎಂದು ರಶೀದ್ ಖಾನ್ ಹೇಳಿಕೆಯನ್ನು ನೀಡಿ ಅಚ್ಚರಿಯನ್ನು ಮೂಡಿಸಿದ್ದಾರೆ.

ರಶೀದ್ ಖಾನ್ ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ 749 ಅಂಕಗಳೊಂದಿಗೆ ನಂಬರ್1 ಸ್ಥಾನದಲ್ಲಿದ್ದಾರೆ. ಕೊರೊನಾ ವೈರಸ್‌ಗೂ ಮುನ್ನ ನಡೆದ ಐರ್ಲೆಂಡ್ ವಿರುದ್ಧದ ಅಂತಿಮ ಸರಣಿಯಲ್ಲಿ ರಶೀದ್ ಖಾನ್ ಮೂರು ಪಂದ್ಯಗಳಲ್ಲಿ ಐದು ವಿಕೆಟ್ ಕಿತ್ತು ಅಪ್ಘಾನಿಸ್ಥಾನ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು.

ಅಪ್ಘಾನಿಸ್ತಾನ ಕ್ರಿಕೆಟ್ ತಂಡದ ಪರವಾಗಿ ರಶೀದ್ ಖಾನ್ 7 ಟೆಸ್ಟ್, 67 ಏಕದಿನ ಮತ್ತು 48 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲೂ ಮಿಂಚುಹರಿಸಿರುವ ರಶೀದ್ ಖಾನ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿದಿಸುತ್ತಿದ್ದಾರೆ.

Story first published: Monday, July 13, 2020, 10:06 [IST]
Other articles published on Jul 13, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+