'ಡೇಂಜರ್ ಆಗುತ್ತೇನೆ'; 5ನೇ ಟೆಸ್ಟ್‌ಗೂ ಮುನ್ನ ಇಂಗ್ಲೆಂಡ್‌ಗೆ ಎಚ್ಚರಿಕೆ ನೀಡಿದ ಮೊಹಮ್ಮದ್ ಸಿರಾಜ್

ಐಪಿಎಲ್ 2022ರ 15ನೇ ಸೀಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಮೊಹಮ್ಮದ್ ಸಿರಾಜ್‌ಗೆ ಅತ್ಯಂತ ಕಳಪೆಯಾಗಿತ್ತು. ಆರ್‌ಸಿಬಿಗೆ ಇವರಿಂದ ಈ ಬಾರಿ ಯಾವ ಲಾಭವೂ ಆಗಲಿಲ್ಲ. ಪ್ರಮುಖ ಪಂದ್ಯಗಳಲ್ಲಿ ದುಬಾರಿಯಾಗಿದ್ದರಿಂದ ಆರ್‌ಸಿಬಿ ಅಭಿಮಾನಿಗಳಿಂದ ತೀವ್ರ ಟೀಕೆಗೆ ಒಳಗಾಗಿದ್ದಾರೆ.
ಆದರೆ ಭಾರತದ ಉದಯೋನ್ಮುಖ ವೇಗದ ಬೌಲಿಂಗ್ ತಾರೆಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧದ ಸರಣಿ-ನಿರ್ಣಾಯಕ ಐದನೇ ಟೆಸ್ಟ್ ಸಮಯದಲ್ಲಿ ಕೆಂಪು ಬಾಲ್‌ನೊಂದಿಗೆ ತಪ್ಪು ಸರಿಪಡಿಸಿಕೊಂಡು ಕಂ-ಬ್ಯಾಕ್ ಮಾಡುವ ಭರವಸೆಯಲ್ಲಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಮೊಹಮ್ಮದ್ ಸಿರಾಜ್ 15 ಪಂದ್ಯಗಳಿಂದ ಕೇವಲ ಒಂಬತ್ತು ವಿಕೆಟ್‌ಗಳೊಂದಿಗೆ 10.07 ಎಕಾನಮಿ ದರವನ್ನು ಹೊಂದಿದ್ದರು. ಆದರೆ ಇದಕ್ಕಿಂತ ದೊಡ್ಡ ಅವಮಾನವೆಂದರೆ, ಈ ಬಾರಿ ಅವರ ಬೌಲಿಂಗ್‌ನಲ್ಲಿ 31 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟರು. ಇದು ಐಪಿಎಲ್ ಪಂದ್ಯಾವಳಿಯ ಇತಿಹಾಸದಲ್ಲಿ ಯಾವುದೇ ಬೌಲರ್‌ನಿಂದ ದಾಖಲಾದ ಅತ್ಯಧಿಕವಾಗಿದೆ.

ನನ್ನ ಸಾಮರ್ಥ್ಯದಲ್ಲಿ ನಂಬಿಕೆ ಇಡುತ್ತೇನೆ
"ಈ ಋತುವಿನಲ್ಲಿ ಐಪಿಎಲ್ ಸ್ವಲ್ಪ ಕಳಪೆಯಾಗಿತ್ತು. ಕಳೆದ ಎರಡು ಸೀಸನ್‌ಗಳಲ್ಲಿ ನನ್ನ ಗ್ರಾಫ್ ಹೆಚ್ಚಿತ್ತು ಮತ್ತು ಈ ಬಾರಿ ಅದು ಕಡಿಮೆಯಾಗಿದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಏನು ಮಾಡಿದ್ದೇನೆ ಎಂಬುದನ್ನು ನಾನು ನೋಡುತ್ತೇನೆ ಮತ್ತು ಅದನ್ನು ತೆಗೆದುಕೊಂಡು ಹೋಗುತ್ತೇನೆ," ಎಂದು ಸಿರಾಜ್ ಪಿಟಿಐಗೆ ತಿಳಿಸಿದರು.
2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತದ ಟೆಸ್ಟ್ ಸರಣಿ ಜಯವನ್ನು ಆಧರಿಸಿ 'ವೂಟ್ ಸೆಲೆಕ್ಟ್'ನಲ್ಲಿ ಸ್ಟ್ರೀಮ್ ಮಾಡಲಿರುವ 'ಬಂದನ್ ಮೇ ಥಾ ದಮ್' ವೆಬ್-ಸರಣಿಯ ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ ಸಿರಾಜ್ ಹೇಳಿದರು.
"ಈ ವರ್ಷ ನನಗೆ ಕೆಟ್ಟ ಹಂತವಾಗಿದೆ, ಆದರೆ ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಬಲವಾದ ಪುನರಾಗಮನವನ್ನು ಮಾಡುತ್ತೇನೆ. ನಾನು ನನ್ನ ಸಾಮರ್ಥ್ಯದ ಮೇಲೆ ಕೆಲಸ ಮಾಡುತ್ತೇನೆ, ನನ್ನ ಸಾಮರ್ಥ್ಯದಲ್ಲಿ ನಂಬಿಕೆ ಇಡುತ್ತೇನೆ," ಎಂದು ಮೊಹಮ್ಮದ್ ಸಿರಾಜ್ ತಿಳಿಸಿದ್ದಾರೆ.

ಜುಲೈ 1-5ರವರೆಗೆ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಟೆಸ್ಟ್
ಭಾರತದ ಪರ ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಮೊಹಮ್ಮದ್ ಸಿರಾಜ್, ಜುಲೈ 1-5ರವರೆಗೆ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸಿದ್ದಾರೆ.
"ಟೆಸ್ಟ್‌ಗೆ ನನ್ನ ಸಿದ್ಧತೆಗಳು ಉತ್ತಮವಾಗಿ ನಡೆಯುತ್ತಿವೆ. ಇಂಗ್ಲೆಂಡ್‌ನಲ್ಲಿ ಡ್ಯೂಕ್ಸ್ ಬಾಲ್ ಅನ್ನು ಬಳಸಲಾಗುತ್ತದೆ. ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ಬೌಲ್ ಮಾಡುವುದು ಯಾವಾಗಲೂ ಒಳ್ಳೆಯದು ಮತ್ತು ಇದು ಬೌಲರ್‌ಗಳಿಗೆ ಸಹಾಯಕವಾಗಿದೆ," ಎಂದು ಹೈದರಾಬಾದ್ ಮೂಲದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಮಹತ್ವದ್ದು
ಮೊಹಮ್ಮದ್ ಸಿರಾಜ್ ಪ್ರಕಾರ, ಕಳೆದ ವರ್ಷ ಭಾರತೀಯ ಶಿಬಿರದಲ್ಲಿ ಏಕಾಏಕಿ ಕೋವಿಡ್ ಕಾಣಿಸಿಕೊಂಡಿದ್ದರಿಂದ ಟೆಸ್ಟ್ ಸರಣಿಯ ಉಳಿದ ಒಂದು ಪಂದ್ಯವನ್ನು ಮುಂದೂಡಲಾಗಿತ್ತು. ಈಗ ಐದನೇ ಟೆಸ್ಟ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸಂದರ್ಭದಲ್ಲಿ "ಬಹಳ ಮಹತ್ವದ್ದಾಗಿದೆ' ಎಂದಿದ್ದಾರೆ.
"ಈ ಟೆಸ್ಟ್ ನಮಗೆ ಅತ್ಯಂತ ಮಹತ್ವದ್ದಾಗಿದ್ದು, ನಾವು 2-1 ಮುನ್ನಡೆಯಲ್ಲಿದ್ದೇವೆ. ಟೆಸ್ಟ್ ಅನ್ನು ಮರುನಿಗದಿಗೊಳಿಸಿರುವುದು ಒಳ್ಳೆಯದು ಮತ್ತು ನಾವು ಮುನ್ನಡೆ ಹೊಂದಿರುವುದರಿಂದ (ಉತ್ತಮವಾಗಿ ಕಾರ್ಯನಿರ್ವಹಿಸುವ) ವಿಶ್ವಾಸ ಹೊಂದಿದ್ದೇವೆ, ಇದು ಉತ್ತಮ ಭಾವನೆಯಾಗಿದೆ," ಎಂದು ಬಲಗೈ ವೇಗಿ ಸಿರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಬಹಳ ಮುಖ್ಯ
ಟೆಸ್ಟ್ ಕ್ರಿಕೆಟ್‌ನಲ್ಲಿ ಪಟ್ಟುಬಿಡದೆ ಆಡುವ ಹನ್ನೊಂದರ ಬಳಗದಲ್ಲಿ ಒಂದು ಸ್ಥಾನವನ್ನು ಪಡೆಯುವುದು ಬಹಳ ಮುಖ್ಯವೆಂದು ಮೊಹಮ್ಮದ್ ಸಿರಾಜ್ ಲೆಕ್ಕಾಚಾರವಾಗಿದೆ.
"ಟೆಸ್ಟ್ ಪಂದ್ಯದಲ್ಲಿ ಪ್ರಮುಖ ವಿಷಯವೆಂದರೆ ನಿಮ್ಮ ಲೈನ್ ಮತ್ತು ಲೆಂತ್ ಮತ್ತು ನೀವು ಒಂದೇ ಸ್ಥಳದಲ್ಲಿ ಎಷ್ಟು ಸ್ಥಿರವಾಗಿ ಬೌಲಿಂಗ್ ಮಾಡಬಹುದು ಎಂಬುದು. ಆಸ್ಟ್ರೇಲಿಯಾದಲ್ಲಿ ನಾನು ಕಲಿತದ್ದು ಅದನ್ನೇ. ತಂಡಕ್ಕಾಗಿ ಸ್ಥಿರ ಪ್ರದರ್ಶನ ನೀಡುವುದು ಮತ್ತು ಒಂದು ಪ್ರದೇಶದಲ್ಲಿ ಬೌಲಿಂಗ್ ಮಾಡುವುದು ಮತ್ತು ಒತ್ತಡವನ್ನು ಸೃಷ್ಟಿಸುವುದು ನನ್ನ ಗುರಿಯಾಗಿದೆ. ನಾನು ವಿಕೆಟ್ ಪಡೆಯದಿದ್ದರೂ, ಎದುರಾಳಿ ತಂಡವನ್ನು ಹೇಗೆ ಒತ್ತಡಕ್ಕೆ ಸಿಲುಕಿಸಬಹುದು ಎಂಬುದು ನನ್ನ ಗುರಿ," ಎಂದು ಬಲಗೈ ವೇಗಿ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications