ಜಸ್‌ಪ್ರೀತ್ ಬೂಮ್ರಾ ಬೌಲಿಂಗ್‌ಗೆ ಆತಂಕ ವ್ಯಕ್ತಪಡಿಸಿದ ಇಯಾನ್ ಬಿಷಪ್

ಪೋರ್ಟ್ ಆಫ್ ಸ್ಪೇನ್, ಮೇ 27: ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರನ್ನು ವೆಸ್ಟ್ ಇಂಡೀಸ್ ಮಾಜಿ ವೇಗಿ ಇಯಾನ್ ಬಿಷಪ್ ಶ್ಲಾಘಿಸಿದ್ದಾರೆ. ಬೂಮ್ರಾ ಅವರನ್ನು 'ಪೀಳಿಗೆಯ ಪ್ರತಿಭೆ' ಎಂದು ಕರೆದಿರುವ ಬಿಷಪ್, ಹಿಂದಿನ ಸ್ಟಾರ್ ಬೌಲರ್‌ಗಳನ್ನು ಗೌರವಿಸಿದರಲ್ಲದೆ, ಬೂಮ್ರಾ ಒಬ್ಬ ಸಂಪೂರ್ಣವಾಗಿ ವಿಭಿನ್ನ ಬೌಲರ್ ಎಂದಿದ್ದಾರೆ.
ತಾನು ಕ್ರಿಕೆಟ್ ಆಡುತ್ತಿದ್ದಾಗಿನ ಬೌಲರ್‌ಗಳನ್ನು ನೆನಪಿಸಿಕೊಂಡ ಇಯಾನ್ ಬಿಷಪ್, ಶಾರ್ಟ್ ಅಪ್ ಹೊಂದಿದ್ದರೂ ಕ್ಷಿಪ್ರ ವೇಗದ ಎಸೆತ ಹಾಕುವ ಜಸ್‌ಪ್ರೀತ್ ಬೂಮ್ರಾ ತನ್ನ ಯುಗದ ಮಾಜಿ ವೇಗಿಗಳೆಲ್ಲರಿಗಿಂತಲೂ ಪೂರ್ತಿ ಭಿನ್ನರಾಗಿದ್ದಾರೆ ಎಂದರು.
'ಕ್ರಿಕೆಟ್ ಇತಿಹಾಸದ ಜೊತೆಗೆ ಬೆಳೆದವನು ನಾನು. ದೂರದಿಂದ ಓಡಿಬಂದು ಚೆಂಡು ಎಸೆಯುತ್ತಿದ್ದ ವೆಸ್ ಹಾಲ್, ಸರ್ ರಿಚರ್ಡ್ ಹ್ಯಾಡ್ಲೀ, ಡೆನ್ನಿಸ್ ಲಿಲ್ಲೆ, ಮಾರ್ಷಲ್ಸ್, ಹೋಲ್ಡಿಂಗ್ಸ್ ಇತ್ಯದಿ ವೇಗಿ ಬೌಲರ್‌ಗಳ ಪರಿಕಲ್ಪನೆ ನನಗೆ ಗೊತ್ತಿದೆ. ಆದರೆ ಬೂಮ್ರಾ ಇವರೆಲ್ಲರಿಗಿಂತಲೂ ತದ್ವಿರುದ್ದ,' ಎಂದು ಕ್ರಿಕ್‌ಬಝ್ ಜೊತೆ ಮಾತನಾಡುತ್ತ ಬಿಷಪ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಂಡೀಸ್ ಮತ್ತೊಬ್ಬ ವೇಗಿ ಮೈಕಲ್ ಹೋಲ್ಡಿಂಗ್ ಕೂಡ ಬೂಮ್ರಾ ಬೌಲಿಂಗ್‌ಗೆ ಅಚ್ಚರಿ ವ್ಯಕ್ತಪಡಿಸಿದ್ದರು. 'ಬೂಮ್ರಾ ಅವರಲ್ಲಿ ನನಗೆ ಸಮಸ್ಯೆ ಕಾಣುವುದೆಂದರೆ, ಕಳೆದ ಸಾರಿ ನಾನು ಇದನ್ನು ಇಂಗ್ಲೆಂಡ್‌ನಲ್ಲಿ ಗಮನಿಸಿದ್ದೆ. ಕಡಿಮೆ ದೂರದಿಂದ ಓಡಿಬಂದು ಅಷ್ಟೊಂದು ವೇಗ ನಿರ್ಮಿಸಲು ಬೂಮ್ರ ಎಷ್ಟೊಂದು ಶ್ರಮ ಬಳಸಬಹುದು. ಆತನೊಬ್ಬ ಮನುಷ್ಯ, ಮೆಷೀನ್ ಅಲ್ಲ.,' ಎಂದು ಹೋಲ್ಡಿಂಗ್ ಆತಂಕ ವ್ಯಕ್ತಪಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications