For Quick Alerts
ALLOW NOTIFICATIONS  
For Daily Alerts
 

ಸಚಿನ್- ಗಂಗೂಲಿ ಜೋಡಿಗಿಂತಲೂ ಈ ಜೋಡಿಯೇ ಬೆಸ್ಟ್; ಇಯಾನ್ ಚಾಪೆಲ್

Kohli- Rohit best then Tendulkar-Ganguly | Oneindia Kannada
Ian Chappell rates Kohli-Rohit duo more than Tendulkar-Ganguly

ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜೋಡಿ ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯುತ್ತಮ ಜೋಡಿ ಎಂದು ಕರೆಸಿಕೊಂಡಿದೆ. ಅದರಲ್ಲೂ ಟೀಮ್ ಇಂಡಿಯಾವನ್ನು ಈ ಜೋಡಿ ಅದೆಷ್ಟೋ ಪಂದ್ಯಗಳಲ್ಲಿ ಗೆಲ್ಲಿಸಿಕೊಟ್ಟಿರುವ ಹಿರಿಮೆಯಿದೆ. ಆದರೆ ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಈ ಜೋಡಿಗಿಂತಲೂ ಪ್ರಸಕ್ತ ಜೋಡಿ ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಪರಿಣಾಮವನ್ನುಂಟು ಮಾಡಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಯಸ್ ಇಯಾನ್ ಚಾಪೆಲ್ ಹೇಳಿಕೆಯನ್ನು ನೀಡಿರೋದು ಟೀಮ್ ಇಂಡಿಯಾದ ಡೇಂಜರಸ್ ಜೋಡಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೋಹ್ಲಿ ಬಗ್ಗೆ. ಈ ವರ್ಷ ಇಬ್ಬರೂ ಆಟಗಾರರು ಅತ್ಯಮೋಘ ಫಾರ್ಮ್‌ನಲ್ಲಿದ್ದು ರನ್ ಹೊಳೆಯನ್ನೇ ಹರಿಸಿದ್ದಾರೆ.

ಸದ್ಯ ವಿಶ್ವಕ್ರಿಕೆಟ್‌ನಲ್ಲಿ ಉತ್ಕೃಷ್ಠ ಗುಣಮಟ್ಟದ ಬೌಲಿಂಗ್ ಕೊರತೆಯಿದ್ದರೂ ಈ ಜೋಡಿ ಸಚಿಮ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜೋಡಿಗಿಂತ ದೊಡ್ಡ ಪರಿಣಾಮವನ್ನು ಉಂಟುಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದೂಸ್ತಾನ್‌ ಟೈಮ್ಸ್‌ಗೆ ಬರೆದ ಅಂಕಣದಲ್ಲಿ ಚಾಪೆಲ್ ಈ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಜೋಡಿ 15 ವರ್ಷಕ್ಕೂ ಹೆಚ್ಚು ಕಾಲ ಬೌಲರ್‌ಗಳನ್ನು ಪೀಡಿಸಿದ್ದಾರೆ. ಈ ಜೋಡಿ ಹಲವು ವರ್ಷಗಳಕಾಲ ಆರಂಭಿಕ ಆಟಗಾರರಾಗಿ ಬಂದು ಶ್ರೇಷ್ಠ ಬೌಲರ್‌ಗಳನ್ನು ಚೆಂಡಾಡಿದ್ದಾರೆ ಎಂದು ಇಯಾನ್ ಚಾಪೆಲ್ ತಮ್ಮ ಅಂಕಣದಲ್ಲಿ ಹೇಳಿಕೋಂಡಿದ್ದಾರೆ.

ಪಾಕಿಸ್ತಾನದ ವಾಸಿಂ ಅಕ್ರಮ, ವಾಕರ್ ಯೂನಿಸ್, ವೆಸ್ಟ್‌ ಇಂಡೀಸ್‌ನ ಕರ್ಟ್ಲೀ ಆ್ಯಾಂಬ್ರೊಸ್‌ ಮತ್ತು ಕಾರ್ಟ್ನಿ ವಾಲ್ಸ್, ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾಥ್ ಮತ್ತು ಬ್ರೆಟ್‌ಲೀ ದಕ್ಷಿಣ ಆಫ್ರಕಾದ ಅಲನ್ ಡೋನಾಲ್ಡ್ ಮತ್ತು ಶಾನ್ ಪೊಲಾಕ್ ದಕ್ಷಿಣ ಆಫ್ರಿಕಾದ ಲಸಿತ್ ಮಲಿಂಗಾ ಮತ್ತು ಚಮಿಂಡಾ ವಾಸ್‌ರಂತಾ ಬೌಲರ್‌ಗಳು ಬ್ಯಾಟ್‌ಮನ್‌ಗಳ ಕೌಶಲ್ಯವನ್ನು ಅಕ್ಷರಶಃ ಪರೀಕ್ಷಿಸುತ್ತಿದ್ದರು ಎಂದು ಅಂದಿನ ಬೌಲಿಂಗ್ ವಿಭಾಗದ ಪ್ರಭಾವವನ್ನು ಕೂಡ ಇದೇ ಸಂದರ್ಭದಲ್ಲಿ ಇಯಾನ್ ಚಾಪೆಲ್ ಹೊಗಳಿದ್ದಾರೆ.

ಆದರೆ ಇದೇ ಸಂದರ್ಭದಲ್ಲಿ ಚಾಪೆಲ್, ಕೊಹ್ಲಿ ಮತ್ತು ರೋಹಿತ್ ಜೋಡಿ ನಿಗದಿತ ಓವರ್‌ಗಳಲ್ಲಿ ಬೆಸ್ಟ್ ಜೋಡಿ ಎಂದಿದ್ದಾರೆ. ಈ ಇಬ್ಬರು ಆಟಗಾರರ ದಾಖಲೆಗಳು ರನ್ ಸರಾಸರಿ, ಆಕ್ರಮಣಕಾರಿ ಆಟ ಈ ಜೋಡಿಯನ್ನನು ಬೆಸ್ಟ್ ಎನಿಸುವಂತೆ ಮಾಡಿದೆ ಎಂದಿದ್ದಾರೆ. ಸಚಿನ್ ತೆಂಡೂಲ್ಕರ್ ಕೆಲವೆ ಕೆಲವು ಟಿ20 ಪಂದ್ಯಗಳನ್ನಾಡಿದ್ದರೆ ಸೌರವ್ ಗಂಗೂಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪರಿಚಯವಾಗುವ ಮುನ್ನವೇ ವಿದಾಯ ಹೇಳಿದ್ದರು.

Story first published: Sunday, December 22, 2019, 16:09 [IST]
Other articles published on Dec 22, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+