ENG vs AFG: ಕ್ರಿಕೆಟ್ ಜನಕರಿಗೆ ಶುರುವಾಯಿತು ನಡಕ: ಇಬ್ರಾಹಿಂ ಜದ್ರಾನ್ ದಾಖಲೆ
ಚಾಂಪಿಯನ್ಸ್ ಟ್ರೋಫಿಯ ರೋಚಕತೆ ಹೆಚ್ಚಿದೆ. "ಬಿ" ಗುಂಪಿನ ಪಂದ್ಯದಲ್ಲಿ ಬುಧವಾರ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸಿವೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಬ್ಯಾಟರ್ ಇಬ್ರಾಹಿಂ ಜದ್ರಾನ್ ಅವರ ಸ್ಫೋಟಕ ಬ್ಯಾಟಿಂಗ್ ಕಂಡು ಕ್ರಿಕೆಟ್ ಜನಕರಿಗೆ ನಡುಕ ಶುರುವಾಗಿದೆ. ಲಾಹೋರ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ಬೃಹತ್ ಮೊತ್ತವನ್ನು ಕಲೆ ಹಾಕಿದೆ. ಈ ಮೂಲಕ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ 326 ರನ್‌ಗಳ ಗುರಿ ನೀಡಿದೆ.
ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡದ ಆರಂಭ ಕಳಪೆಯಾಗಿತ್ತು. ಸ್ಟಾರ್ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಜವಾಬ್ದಾರಿ ಮರೆತರು. ಮಧ್ಯಮ ಕ್ರಮಾಂಕದಲ್ಲಿ ಸೆದಿಕುಲ್ಲಾ ಅಟಲ್, ರಹಮತ್ ಷಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲಿಲ್ಲ. ನಾಲ್ಕನೇ ವಿಕೆಟ್‌ಗೆ ಆರಂಭಿಕ ಇಬ್ರಾಹಿಂ ಜದ್ರಾನ್ ಅವರನ್ನು ಸೇರಿಕೊಂಡ ಹಶ್ಮತುಲ್ಲಾ ಶಾಹಿದಿ ತಂಡಕ್ಕೆ ಭರ್ಜರಿ ಕಾಣಿಕೆ ನೀಡಿದರು. ಈ ಜೋಡಿ ಮಿಡ್ಲ್ ಓವರ್‌ನಲ್ಲಿ ತಂಡದ ಪರ ವಿಕೆಟ್ ಬೀಳದಂತೆ ನೋಡಿಕೊಂಡಿತು. ಅಲ್ಲದೆ 37 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಯಿತು.

ನಾಲ್ಕನೇ ವಿಕೆಟ್‌ಗೆ ಇಬ್ರಾಹಿಂ ಜದ್ರಾನ್ ಹಾಗೂ ಹಶ್ಮತುಲ್ಲಾ ಶಾಹಿದಿ ಜೊತೆಗೂಡಿ ತಂಡಕ್ಕೆ ಶತಕದ ಜೊತೆಯಾಟದ ಕಾಣಿಕೆ ನೀಡಿದರು. ಇವರು 124 ಎಸೆತಗಳಲ್ಲಿ 103 ರನ್‌ಗಳ ಅಮೂಲ್ಯ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾದರು. ಹಶ್ಮತುಲ್ಲಾ ಶಾಹಿದಿ 40 ರನ್ ಬಾರಿಸಿ ಔಟ್ ಆದರು. ಐದನೆ ವಿಕೆಟ್‌ಗೆ ಇಬ್ರಾಹಿಂ ಜದ್ರಾನ್ ಹಾಗೂ ಅಜ್ಮತುಲ್ಲಾ ಒಮರ್ಜೈ ಅಬ್ಬರದ ಆಟವನ್ನು ಆಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 63 ಎಸೆತಗಳಲ್ಲಿ 72 ರನ್‌ಗಳ ಜೊತೆಯಾಟವನ್ನು ನೀಡಿತು. ಅಜ್ಮತುಲ್ಲಾ ಒಮರ್ಜೈ 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ 41 ರನ್ ಸಿಡಿಸಿ ಔಟ್ ಆದರು.
ಐದನೇ ವಿಕೆಟ್‌ಗೆ ಶತಕದ ಜೊತೆಯಾಟ
ಅಫ್ಘಾನಿಸ್ತಾನದ ಪರ ಐದನೇ ವಿಕೆಟ್‌ಗೆ ಇಬ್ರಾಹಿಂ ಜದ್ರಾನ್ ಹಾಗೂ ಮೊಹಮ್ಮದ್ ನಬಿ ಜೋಡಿ ವಿಸ್ಫೋಟಕ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 55 ಎಸೆತಗಳಲ್ಲಿ 111 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಪರಿಣಾಮ ಅಫ್ಘಾನಿಸ್ತಾನ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ನೆರವಾಯಿತು. ನಬಿ 2 ಬೌಂಡರಿ, 3 ಸಿಕ್ಸರ್ ನೆರವಿನಿಂದ 40 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇಬ್ರಾಹಿಂ ಶತಕ
ಅಫ್ಘಾನಿಸ್ತಾನದ ಸ್ಟಾರ್ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ ಅವರು ಅಮೋಘ ಬ್ಯಾಟಿಂಗ್ ನಡೆಸಿದರು. ಮಹತ್ವದ ಪಂದ್ಯದಲ್ಲಿ ಅಫ್ಘಾನಿಸ್ತಾನ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ ಇಬ್ರಾಹಿಂ ರನ್‌ಗಳನ್ನು ಗುಡ್ಡೆ ಹಾಕಿ ದಾಖಲೆ ಬರೆದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ವ್ಯಯಕ್ತಿಕ ಗರಿಷ್ಠ ರನ್ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇವರು 146 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್‌ಗಳ ನೆರವಿನಿಂದ 177 ರನ್ ಸಿಡಿಸಿ ಔಟ್ ಆದರು. ಅತಿಮವಾಗಿ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 325 ರನ್ ಸಿಡಿಸಿತು.
ಇಂಗ್ಲೆಂಡ್ ತಂಡದ ಪರ ಜೋಫ್ರಾ ಆರ್ಚರ್ 3, ಲಿಯಮ್ ಲಿವಿಂಗ್ ಸ್ಟೋನ್ 2 ವಿಕೆಟ್ ಕಬಳಿಸಿದರು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ರನ್ ಸಾಧಕರು
ಇಬ್ರಾಹಿಂ ಜರ್ದಾನ್ (ಅಫ್ಘಾನಿಸ್ತಾನ), 177 ರನ್
ಬೆನ್ ಡಕೆಟ್ (ಇಂಗ್ಲೆಂಡ್), 165 ರನ್
ನಾಥನ್ ಆಸ್ಟಲ್ (ನ್ಯೂಜಿಲೆಂಡ್), 145* ರನ್
ಆಂಡಿ ಫ್ಲಾವರ್ (ಜಿಂಬಾಬ್ವೆ), 145 ರನ್
ಸೌರವ್ ಗಂಗೂಲಿ (ಭಾರತ), 141* ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications