Champions Trophy: ಪಾಕ್‌ಗೆ ಭಾರಿ ಹಿನ್ನಡೆ: ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ ಚಾಂಪಿಯನ್ಸ್ ಟ್ರೋಫಿ
ಬಹು ವರ್ಷಗಳ ಬಳಿಕ ಸಿಕ್ಕ ಐಸಿಸಿ ಈವೆಂಟ್‌ನ್ನು ನಾವು ಬಿಟ್ಟು ಕೊಡಲು ತಯಾರಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಹೇಳುತ್ತಿದ್ದರೆ, ಇತ್ತ ಬಿಸಿಸಿಐ ಪಾಕ್‌ಗೆ ಪ್ರವಾಸ ಬೆಳೆಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದೆ. ಈ ಉಭಯ ದೇಶಗಳ ನಡುವಿನ ಜಿದ್ದಾಜಿದ್ದಿನಿಂದ ಐಸಿಸಿ 100 ದಿನಗಳ ಮೊದಲು ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ಆಗುತ್ತಿಲ್ಲ. ಹೀಗಾಗಿ ಐಸಿಸಿ ಈ ಬಗ್ಗೆ ಒಂದು ನಿರ್ಧಾರಕ್ಕೆ ಬರುವ ಲಕ್ಷಣಗಳು ಕಾಣುತ್ತಿವೆ. ಐಸಿಸಿ ಹಾಗೂ ಪಿಸಿಬಿ ಅಧಿಕಾರಿಗಳ ನಡುವೆ ನಡೆದ ಮಾತುಕತೆ ನಡೆದಿದ್ದು, ಈ ವೇಳೆ ಪರಿಹಾರ ಕಂಡುಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.
2027 ರವರೆಗೆ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ನಡುವೆ ನಡೆಯುವ ಐಸಿಸಿ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಐಸಿಸಿ ಒಪ್ಪಿಕೊಂಡಿವೆ ಎಂದು ನಂಬಲಾಗಿದೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕರಾ ಐಸಿಸಿ ಹಾಗೂ ಪಿಸಿಬಿ ಈ ನಿರ್ಣಾಯಕ್ಕೆ ಬಂದಿವೆ ಎಂದು ವರದಿಯಾಗಿದೆ. ಇನ್ನು ಹೈ ಬ್ರಿಡ್ ಮಾದರಿ ಬರೀ ಪುರುಷರ ಟೂರ್ನಿಗಳಿಗೋ ಅಥವಾ ಮಹಿಳಾ ಟೂರ್ನಿಗಳಿಗೂ ಅನ್ವಯಿಸುತ್ತದೋ ಎಂಬುದನ್ನು ಕಾದು ನೋಡಬೇಕಿದೆ.

ಮೂರು ಐಸಿಸಿ ಈವೆಂಟ್
2025 ರಿಂದ 2027 ರವರೆಗೆ ಭಾರತ ಹಾಗೂ ಪಾಕ್ ಒಟ್ಟು ಮೂರು ಐಸಿಸಿ ಟೂರ್ನಿಗಳಿಗೆ ಆತಿಥ್ಯ ನೀಡಲಿದೆ. ಪಾಕ್‌ನಲ್ಲಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ನಡೆದರೆ, ಭಾರತದಲ್ಲಿ 2025ರಲ್ಲಿ ಮಹಿಳಾ ಏಕದಿನ ವಿಶ್ವಕಪ್ ಆಯೋಜಿಸಲಾಗುತ್ತದೆ. ಅಲ್ಲದೆ 2026 ಪುರುಷರ ಟಿ20 ವಿಶ್ವಕಪ್‌ಗೂ ಭಾರತ ವೇದಿಕೆ ಕಲ್ಪಿಸಲಿದೆ. ಟಿ20 ವಿಶ್ವಕಪ್‌ನ್ನು ಭಾರತ, ಶ್ರೀಲಂಕಾ ಜೊತೆಗೆ ಜಂಟಿಯಾಗಿ ಆಯೋಜಿಸಲಿದೆ. ಐಸಿಸಿ ಹಾಗೂ ಪಿಸಿಬಿ ನಡೆದಿರುವ ಒಪ್ಪಂದದಿಂದಾಗಿ ಈ ಮೂರು ಸರಣಿಗಳ ಮೇಲೆ ನೇರ ಪರಿಣಾಮ ಬೀರಲಿದೆ.
ಶನಿವಾರ ನಿರ್ಧಾರ
ಗುರುವಾರದಂದು ಐಸಿಸಿ ನೂತನ ಅಧ್ಯಕ್ಷ ಜಯ್ ಶಾ ಹಾಗೂ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಮಧ್ಯ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆದಿವೆ. ಈ ಬಗ್ಗೆ ಚರ್ಚಿಸಲು ಶನಿವಾರ ಮತ್ತೆ ಸಭೆ ಕರೆಯಲಾಗಿದೆ. ಇದೇ ವೇಳೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಗಳನ್ನು ನಡೆಸಿದರೆ, ತನಗೆ ಆಗುವ ನಷ್ಟವನ್ನು ತುಂಬಿಕೊಡುವಂತೆ ಪಿಸಿಬಿ, ಐಸಿಸಿಗೆ ಕೇಳಿಕೊಂಡಿದೆ. ಐಸಿಸಿ, ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಮನವಿಯನ್ನು ತಿರಸ್ಕರಿಸಿದೆ. ಒಂದು ವೇಳೆ ಸರಣಿಯಲ್ಲಿ ಟೀಮ್ ಇಂಡಿಯಾ ನಾಕೌಟ್ ಪ್ರವೇಶಿಸಿದರೆ, ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡಿಸಲು ತೀರ್ಮಾನಿಸಲಾಗಿದೆ.
ವರದಿಯ ಅನುಸಾರ ಹೈಬ್ರಿಡ್ ಪಂದ್ಯಗಳನ್ನು ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಸುವ ಸಾಧ್ಯತೆ ಇದೆ. ಒಂದು ವೇಳೆ ಹೈಬ್ರಿಡ್ ಮಾದರಿಯಲ್ಲಿ ಮುಂದಿನ ಐಸಿಸಿ ಟೂರ್ನಿಗಳು ನಡೆಯುತ್ತವೆ ಎಂದಾದರೆ ಭಾರತಕ್ಕೂ ಇದರಿಂದ ನಷ್ಟವಾಗುತ್ತದೆ. ಏಷ್ಯಾ ಕಪ್ ಅಥವಾ ಯಾವುದೇ ಐಸಿಸಿ ಈವೆಂಟ್ ಆಗಿರಲಿ, ಭಾರತ ಮತ್ತು ಪಾಕಿಸ್ತಾನವು 2027 ರ ವರೆಗೆ ಹೈ ಬ್ರೀಡ್ ಮಾದರಿಯಲ್ಲೇ ಮುಖಾಮುಖಿ ಆಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications