Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಏಕದಿನ ವಿಶ್ವಕಪ್‌ ಕಾಮೆಂಟರಿಗೆ ಭಾರತದಿಂದ ಮೂವರು ಮಾತ್ರ!

ICC announces star-studded commentary line-up for WC

ದುಬೈ, ಮೇ 17: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟಿಲಿವಿಷನ್‌ ವೀಕ್ಷಕರಿಗೆ ವಿವರಣೆ ಒದಗಿಸಲಿರುವ ಸೂಪರ್‌ ಸ್ಟಾರ್‌ ಕಾಮೆಂಟೇಟರ್‌ಗಳ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಬಿಡುಗಡೆ ಮಾಡಿದೆ.

ಈ ಬಾರಿ ವಿಶ್ವಕಪ್‌ಗೆ ವೀಕ್ಷಕ ವಿವರಣೆ ಒದಗಿಸಲು ಐಸಿಸಿ ಭರ್ಜರಿ ಸಿದ್ಧತೆಯನ್ನೇ ನಡೆಸಿದ್ದು, ಒಟ್ಟಾರೆ 24 ಮಂದಿ ಕಾಮೆಂಟೇಟರ್‌ಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ಕಳೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾಗೆ ಪ್ರಶಸ್ತಿ ಗೆದ್ದುಕೊಟ್ಟ ನಾಯಕ ಮೈಕಲ್‌ ಕ್ಲಾರ್ಕ್‌ ಕೂಡ ಇದ್ದು, ಸೌರವ್‌ ಗಂಗೂಲಿ, ಸಂಜಯ್‌ ಮಂಜ್ರೇಕರ್‌ ಮತ್ತು ಹರ್ಷ ಭೋಗ್ಲೆ ಈ ಪಟ್ಟಿಯಲ್ಲಿರುವ ಭಾರತೀಯರಾಗಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಮೆರ್ಲೀಬೋನ್‌ ಕ್ರಿಕೆಟ್‌ ಕ್ಲಬ್‌ನ ಅಧ್ಯಕ್ಷರಾದ ಬಿಟ್ರೀಷ್‌ ಮೂಲದವರಲ್ಲ ಮೊದಲ ವ್ಯಕ್ತಿ ಎನಿಸಿಕೊಂಡ ಕುಮಾರ ಸಂಗಕ್ಕಾರ, ಕಾಮೆಂಟರಿ ಒದಗಿಸಲಿರುವ ಶ್ರೀಲಂಕಾದ ಏಕಮಾತ್ರ ಕಾಮೆಂಟೇಟರ್‌ ಆಗಿದ್ದಾರೆ. ಪಾಕಿಸ್ತಾನದಿಂದ ವಾಸಿಮ್‌ ಅಕ್ರಮ್‌ ಮತ್ತು ರಮೀಝ್‌ ರಾಝಾ ಹಾಗೂ ಬಾಂಗ್ಲಾದೇಶದಿಂದ ಆಥರ್‌ ಅಲಿ ಖಾನ್‌ ಪಾಲ್ಗೊಳ್ಳಲಿದ್ದಾರೆ.

ವಿಶ್ವಕಪ್‌ನಲ್ಲಿ ಕಾಮೆಂಟರಿ ನೀಡಲಿರುವ ವೀಕ್ಷಕ ವಿವರಣೆಗಾರರ ಪಟ್ಟಿ ಇಂತಿದೆ

ನಾಸಿರ್‌ ಹುಸೇನ್‌ (ಇಂಗ್ಲೆಂಡ್‌), ಮೈಕಲ್‌ ಕ್ಲಾರ್ಕ್‌ (ಆಸ್ಟ್ರೇಲಿಯಾ), ಇಯಾನ್‌ ಬಿಶಪ್‌ (ವೆಸ್ಟ್‌ ಇಂಡೀಸ್‌), ಸೌರವ್‌ ಗಂಗೂಲಿ (ಭಾರತ), ಮೆಲನಿ ಜೋನ್ಸ್‌ (ಆಸ್ಟ್ರೇಲಿಯಾ),ಕುಮಾರ ಸಂಗಕ್ಕಾರ (ಶ್ರೀಲಂಕಾ), ಮೈಕಲ್‌ ಅಥರ್ಟನ್‌ (ಇಂಗ್ಲೆಂಡ್‌), ಅಲಿಸನ್‌ ಮಿಚೆಲ್‌ (ಬ್ರಿಟನ್‌), ಬ್ರೆಂಡನ್‌ ಮೆಕಲಮ್‌ (ನ್ಯೂಜಿಲೆಂಡ್‌), ಗ್ರೇಮ್‌ ಸ್ಮಿತ್‌ (ದಕ್ಷಿಣ ಆಫ್ರಿಕಾ),ವಾಸಿಮ್‌ ಅಕ್ರಮ್‌ (ಪಾಕಿಸ್ತಾನ), ಶಾನ್‌ ಪೊಲಾಕ್‌ (ದಕ್ಷಿಣ ಆಫ್ರಿಕಾ), ಮೈಕಲ್‌ ಸ್ಲೇಟರ್‌ (ಆಸ್ಟ್ರೇಲಿಯಾ), ಮಾರ್ಕ್‌ ನಿಕೊಲಾಸ್‌ (ಇಂಗ್ಲೆಂಡ್‌), ಮೈಕಲ್‌ ಹೋಲ್ಡಿಂಗ್‌ (ವೆಸ್ಟ್‌ ಇಂಡೀಸ್‌), ಇಸಾ ಗುಹಾ (ಇಂಗ್ಲೆಂಡ್‌), ಪೋಮಿ ಎಮ್‌ಬಾಂಗ್ವಾ (ಜಿಂಬಾಬ್ವೆ), ಸಂಜಯ್‌ ಮಂಜ್ರೇಕರ್‌ (ಭಾರತ), ಹರ್ಷ ಭೋಗ್ಲೆ (ಭಾರತ), ಸಥಮನ್‌ ಡೌಲ್‌ (ನ್ಯೂಜಿಲೆಂಡ್‌), ಇಯಾನ್‌ ಸ್ಮಿತ್‌ (ನ್ಯೂಜಿಲೆಂಡ್‌), ರಮೀಝ್‌ ರಾಝಾ (ಪಾಕಿಸ್ತಾನ), ಆಥರ್‌ ಅಲಿ ಖಾನ್‌ (ಬಾಂಗ್ಲಾದೇಶ) ಮತ್ತು ಇಯಾನ್‌ ವರ್ಡ್‌ (ಇಂಗ್ಲೆಂಡ್‌).

Story first published: Friday, May 17, 2019, 17:36 [IST]
Other articles published on May 17, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+