ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಎಲ್ಲಿ ನಡೆಯುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಒಪ್ಪಿಗೆ ನೀಡಿದೆ. ಈ ಮೂಲಕ ಬಹು ದಿನಗಳಿಂದ ನಡೆಯುತ್ತಿದ್ದ ಹಗ್ಗ ಜಗ್ಗಾಟಕ್ಕೆ ತೆರೆ ಬಿದ್ದಿದೆ. ಐಸಿಸಿಯ ಪ್ರತಿಷ್ಠಿತ ಟೂರ್ನಿಯನ್ನು ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಒಪ್ಪಿಗೆ ನೀಡಿದೆ.
ಪಾಕಿಸ್ತಾನದಲ್ಲಿ ಆಯೋಜಿಸಲಾಗಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪ್ರವಾಸ ಬೆಳೆಸಲು ನಿರಾಕರಿಸಿತ್ತು. ಈ ವೇಳೆ ಬಿಸಿಸಿಐ ಕೇಂದ್ರ ಸರ್ಕಾರದ ಒಪ್ಪಿಗೆಯನ್ನು ಕೇಳಿತ್ತು. ಆದರೆ ಸರ್ಕಾರ ಭದ್ರತಾ ಕಾರಣದಿಂದ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.

ಭದ್ರತಾ ಕಾರಣಗಳಿಂದ ಬಿಸಿಸಿಐ ಪಾಕ್ ಪ್ರವಾಸವನ್ನು ಬೆಳೆಸಲು ನಿರಾಕರಿಸಿತ್ತು. ಈ ವೇಳೆ ಪಾಕಿಸ್ತಾನ ಸಹ ಬಹು ವರ್ಷಗಳಿಂದ ಸಿಕ್ಕಿರುವ ಐಸಿಸಿ ಟೂರ್ನಿಯನ್ನು ಆಯೋಜಿಸುವ ಅವಕಾಶವನ್ನು ತಾನು ಬಿಡುವುದಿಲ್ಲ ಎಂದು ಸಾರಿ ಸಾರಿ ಹೇಳಿತ್ತು. ಅಲ್ಲದೆ ಭಾರತ, ಪಾಕಿಸ್ತಾನಕ್ಕೆ ಪ್ರವಾಸ ಬೆಳಿಸದೇ ಇದ್ದರೇ ಆಗುವು ನಷ್ಟದ ಬಗ್ಗೆ ಪಿಸಿಬಿಗೆ ಅರಿವಿತ್ತು. ಹೀಗಾಗಿ ಪಿಸಿಬಿ, ಭಾರತಕ್ಕೆ ಪ್ರವಾಸ ಬೆಳೆಸುವಂತೆ ಸತತವಾಗಿ ಒತ್ತಾಯಿಸುಲೇ ಬರುತ್ತಿತ್ತು. ಆದರೆ ಇದಕ್ಕೆ ಬಿಸಿಸಿಐ ಯಾವುದೇ ಸೊಪ್ಪನ್ನು ಹಾಕಿರಲಿಲ್ಲ.
ಬಿಸಿಸಿಐ ತಾನು ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ. ಇನ್ನು ಪಿಸಿಬಿ ಸಹ ಈ ನಿಟ್ಟಿನಲ್ಲಿ ಐಸಿಸಿಗೆ ಮನವಿಯನ್ನು ಸಲ್ಲಿಸಿತು. ಈ ವೇಳೆ ಐಸಿಸಿಗೆ, ಪಿಸಿಬಿ ಮನವಿಯನ್ನು ಮಾಡಿಕೊಂಡಿತ್ತು. ಹಲವು ಸುತ್ತುಗಳಲ್ಲಿ ಸಭೆ ನಡೆದ ಬಳಿಕ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಮೂಲಕ ಬಿಸಿಸಿಐ ತನ್ನ ಪಟ್ಟನ್ನು ಸಡಿಲಿಸದೇ ಜಯವನ್ನು ಸಾಧಿಸಿದಂತೆ ಆಗಿದೆ.
2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ವರದಿ ತಿಳಿಸಿದೆ. ಟಿ20 ವಿಶ್ವಕಪ್‌ಕ್ಕೆ ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಲಿದೆ. ಇನ್ನು ಭಾರತ ಜಂಟಿಯಾಗಿ ಆಯೋಜಿಸಲಿರುವ ಟೂರ್ನಿಯಲ್ಲಿ ಪಾಕ್ ಪಂದ್ಯಗಳು ಕೊಲೊಂಬೊದಲ್ಲಿ ನಡೆಯಲಿವೆ ಎಂದು ತಿಳಿದು ಬಂದಿದೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಮುಂದಿನ ಕೆಲವು ವರ್ಷಗಳಲ್ಲಿ ಮೂರು ಐಸಿಸಿ ಟೂರ್ನಿಗಳು ನಡೆಯಲಿವೆ. 2025ರ ಪಾಕ್ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದರೆ, ಭಾರತ ಎರಡು ಪ್ರತಿಷ್ಠಿತ ಟೂರ್ನಿಗಳನ್ನು ಆಯೋಜಿಸಲಿದೆ. ಇದರಲ್ಲಿ ಪುರುಷರ ಹಾಗೂ ಮಹಿಳೆಯರ ವಿಶ್ವಕಪ್ ಸೇರಿದೆ.
ಚಾಂಪಿಯನ್ಸ್ ಟ್ರೋಫಿಯ 10 ಪಂದ್ಯಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಲೀಗ್ ಹಂತದಲ್ಲಿ ಭಾರತದ ಎಲ್ಲಾ ಮೂರು ಪಂದ್ಯಗಳು ದುಬೈನಲ್ಲಿ ನಡೆಯದ್ದು, ಲೀಗ್ ಹಾಗೂ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳೂ ದುಬೈನಲ್ಲಿ ನಡೆಯುವ ಸಾಧ್ಯತೆ ಇದೆ. ಇನ್ನು ಟೀಮ್ ಇಂಡಿಯಾ ನಾಕೌಟ್‌ನಿಂದ ಹೊರಬಿದ್ದರೆ ಸೆಮಿಫೈನ್ ಹಾಗೂ ಫೈನಲ್ ಪಂದ್ಯಗಳು ಪಾಕ್‌ನಲ್ಲಿ ನಡೆಯಲಿದೆ.