ಕ್ರಿಕೆಟ್ : ಆಸ್ಟ್ರೇಲಿಯಾಕ್ಕೆ ಮತ್ತೊಮ್ಮೆ ವಿಲನ್ ಆದ ಮಳೆರಾಯ
ಲಂಡನ್, ಜೂನ್ 05: ಚಾಂಪಿಯನ್ಸ್ ಟ್ರೋಫಿ 2017ರ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಮೀಮ್ ಇಕ್ಬಾಲ್ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ ಶತಕ ವಂಚಿತರಾದರು.
ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು
183ರನ್ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ 16 ಓವರ್ ಗಳಲ್ಲಿ 83/1 ಗಳಿಸಿದ್ದಾಗ ಮಳೆ ಕಾರಣ ಪಂದ್ಯ ರದ್ದಾಯಿತು. ಉಭಯ ತಂಡಗಳಿಗೂ ಒಂದೊಂದು ಅಂಕ ನೀಡಲಾಯಿತು. ಮಿಚೆಲ್ ಸ್ಟಾರ್ಕ್ 5 ಎಸೆತಗಳಲ್ಲಿ ಮೂರು ವಿಕೆಟ್ ಗಳಿಸಿದ್ದು, 114 ಎಸೆತಗಳಲ್ಲಿ ತಮೀಮ್ ಇಕ್ಬಾಲ್ ಅವರು 95ರನ್ ಚೆಚ್ಚಿದ್ದು ಪಂದ್ಯದ ಮುಖ್ಯಾಂಶವಾಗಿದೆ.
ಚಾಂಪಿಯನ್ಸ್ ಟ್ರೋಫಿ 2017ರ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ಬಾಂಗ್ಲಾದೇಶ ಸೋಲು ಕಂಡಿದೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಆಸ್ಟ್ರೇಲಿಯಾ ಅಂಕ ಹಂಚಿಕೊಂಡಿತ್ತು.

ಆಸ್ಟ್ರೇಲಿಯಾ: ಆರೋನ್ ಫಿಂಚ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ (ನಾಯಕ), ಮೊಯಿಸ್ ಹೆನ್ರಿಕ್ಯೂಸ್, ಗ್ಲೆನ್ ಮ್ಯಾಕ್ಸ್ ವೆಲ್, ಟ್ರಾವಿಸ್ ಹೆಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕುಮಿನ್ಸ್, ಆಡಂ ಝಂಪಾ, ಜೋಶ್ ಹೇಜಲ್ ವುಡ್
ಬಾಂಗ್ಲಾದೇಶ: ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಇಮ್ರುಲ್ ಕೇಯ್ಸ್, ಶಕಿಲ್ ಅಲ್ ಹಸನ್, ಮುಸ್ಫಿಕ್ಯೂರ್ ರಹೀಂ (ವಿಕೆಟ್ ಕೀಪರ್), ಸಬೀರ್ ರಹ್ಮನ್, ಮೆಹದಿ ಹಸನ್, ಮಹಮದುಲ್ಲಾ, ಮಶ್ರಫೆ ಮೊರ್ತಜಾ(ನಾಯಕ), ಮುಸ್ತಫಿಜುರ್ ರಹಮಾನ್, ರುಬೆಲ್ ಹುಸೇನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications