ಲಂಡನ್, ಜೂನ್ 06: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ 87 ರನ್ ಗಳಿಂದ ಸೋಲು ಕಂಡಿದೆ. ಈ ಪಂದ್ಯ ಗೆದ್ದಿರುವ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವೆನಿಸಿದೆ.
ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು
ಇಂಗ್ಲೆಂಡ್ ಪರ ಅಲೆಕ್ಸ್ ಹೇಲ್ಸ್ (56), ಜೋ ರೂಟ್(64), ಜಾಸನ್ ಬಟ್ಲರ್(61) ಹಾಗೂ ಬೆನ್ ಸ್ಟೋಕ್ಸ್ (48) ಉತ್ತಮ ಆಟದ ನೆರವಿನಿಂದಇಂಗ್ಲೆಂಡ್ ತಂಡ 310ರನ್ ಸ್ಕೋರ್ ಮಾಡಲು ಸಾಧ್ಯವಾಯಿತು.
311 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ (87) ಗಪ್ಟಿಲ್ (62), ರಾಸ್ ಟೇಲರ್ (39) ಆಸರೆಯಾದರು. ಆದರೆ, ಕೊನೆಯ 7ವಿಕೆಟ್ ಗಳು ಕೇವಲ 65 ರನ್ ಕಳೆದುಕೊಂಡ ನ್ಯೂಜಿಲೆಂಡ್, ಅಂತಿಮವಾಗಿ 44.3 ಓವರ್‌ಗಳಲ್ಲಿ 233 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ ಮಹತ್ವದ ಪಂದ್ಯವಾಡುತ್ತಿದ್ದು, ಈ ಪಂದ್ಯವನ್ನು ಆಸ್ಟ್ರೇಲಿಯಾ ಭಾರಿ ಕುತೂಹಲದಿಂದ ವೀಕ್ಷಿಸುತ್ತಿದೆ. ಒಂದು ವೇಳೆ ನ್ಯೂಜಿಲೆಂಡ್ ತಂಡವೇನಾದರೂ ಈ ಪಂದ್ಯದಲ್ಲಿ ಗೆದ್ದರೆ ಆಸ್ಟ್ರೇಲಿಯಾಕ್ಕೆ ಭಾರಿ ತೊಂದರೆಯಾಗಲಿದೆ.
ಇಂಗ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ದಾಖಲಿಸಿತ್ತು. ನ್ಯೂಜಿಲೆಂಡ್ ತಂಡ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಜತೆ ಅಂಕ ಹಂಚಿಕೊಂಡಿದೆ. ಇನ್ನೊಂದೆಡೆ ಆಸ್ಟ್ರೇಲಿಯಾದ ಎರಡು ಪಂದ್ಯಗಳು ಮಳೆಗೆ ಆಹುತಿಯಾಗಿವೆ.
