Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy: ಪಾಕಿಸ್ತಾನ ತಂಡದ ಪರ ಹ್ಯಾರಿಸ್ ರೌಫ್ ಕಣಕ್ಕಿಳಿಯುವುದು ಫಿಕ್ಸ್

ನ್ಯೂಜಿಲೆಂಡ್ ವಿರುದ್ಧ ತ್ರಿಕೋನ ಸರಣಿಯ ಸೋಲಿನಿಂದ ತವರಿನಲ್ಲಿ ಮುಖಭಂಗ ಅನುಭವಿಸಿದ್ದ ಪಾಕಿಸ್ತಾನ ತಂಡದಲ್ಲಿ ಸಂತಸ ಮನೆ ಮಾಡಿದೆ. ಐಸಿಈ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಗಾಯದ ಕಾರಣ ಹೊರಗುಳಿದಿದ್ದ ಸ್ಟಾರ್ ವೇಗದ ಬೌಲರ್ ಹ್ಯಾರಿಸ್ ರೌಫ್ ಪಾಕಿಸ್ತಾನ ತಂಡ ಸೇರಿಕೊಂಡಿದ್ದಾರೆ.ಗಾಯದಿಂದ ಚೇತರಿಸಿಕೊಂಡಿರುವ ಹ್ಯಾರಿಸ್ ರೌಫ್ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ತ್ರಿಕೋನ ಸರಣಿ ಸಂದರ್ಭದಲ್ಲಿ ಹ್ಯಾರಿಸ್ ರೌಫ್ ಎದೆಯ ಕೆಳ ಭಾಗದಲ್ಲಿ ಸ್ನಾಯು ನೋವಿಗೆ ಒಳಗಾಗಿದ್ದರು. ಇದೀಗ ಕರಾಚಿಯಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಪಂದ್ಯದಲ್ಲಿ ಹ್ಯಾರಿಸಗ ರೌಫ್ ಆಡಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಖಚಿತಪಡಿಸಿದೆ.

ICC Champions Trophy 2025 Harris Rauf is set to play for Pakistan

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಗಾಯಗೊಂಡ ವೇಗದ ಬೌಲರ್‌ಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೌಫ್ ಲಭ್ಯತೆಯು ಪಾಕಿಸ್ತಾನ ತಂಡಕ್ಕೆ ಸಮಾಧಾನ ತಂದಿದೆ. ಭಾರತ ತಂಡದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹೇಜಲ್​ವುಡ್ ಅವರಂತಹ ಆಟಗಾರರು ಗಾಯಗಳಿಂದ ಬಳಲುತ್ತಿದ್ದು, ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.

ಕಳೆದ ವರ್ಷ ನವೆಂಬರ್ 2024ರಲ್ಲಿ ಆಸ್ಟ್ರೇಲಿಯಾ ತಂಡವನ್ನು ತವರಿನಲ್ಲಿ ಸೋಲಿಸಲು ಪಾಕಿಸ್ತಾನ ಪರ ಹ್ಯಾರಿಸ್ ರೌಫ್ ಪ್ರಮುಖ ಪಾತ್ರವಹಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನಯನ್ನು ಪಾಕಿಸ್ತಾನ 2-1 ಅಂತರದಲ್ಲಿ ಗೆದ್ದಿತ್ತು. ಸರಣಿಯುದ್ದಕ್ಕೂ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ ರೌಫ್ 10 ವಿಕೆಟ್‌ಗಳನ್ನು ಉರುಳಿಸಿದ್ದರು. ಹೀಗೆ ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನ ತಂಡದಲ್ಲಿ ರೌಫ್ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಹ್ಯಾರಿಸ್ ರೌಫ್ ತಮ್ಮ ಏಕದಿನ ವೃತ್ತಿಜೀವನದಲ್ಲಿ 46 ಪಂದ್ಯಗಳನ್ನು ಆಡಿದ್ದರು. 25.73ರ ಸರಾಸರಿಯಲ್ಲಿ 83 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಎರಡು ಬಾರಿ ಐದು ವಿಕೆಟ್ ಹಾಗು ನಾಲ್ಕು ಬಾರಿ ನಾಲ್ಕು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ತಂಡ

ಮೊಹಮ್ಮದ್ ರಿಜ್ವಾನ್ (ನಾಯಕ), ಬಾಬರ್ ಅಜಮ್, ಫಖರ್ ಜಮಾನ್, ಸೌದ್ ಶಕೀಲ್, ಕಮ್ರಾನ್ ಗುಲಾಮ್, ತಯ್ಯಬ್ ತಾಹಿರ್, ಸಲ್ಮಾನ್ ಅಲಿ ಆಘಾ, ಖುಶ್ದಿಲ್ ಶಾ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್, ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ, ಮೊಹಮ್ಮದ್ ಹಸ್ನೈನ್ ಮತ್ತು ಹ್ಯಾರಿಸ್ ರೌಫ್.

Story first published: Monday, February 17, 2025, 17:51 [IST]
Other articles published on Feb 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+