Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy 2025: ಭಾರತ, ಪಾಕ್‌ ಪಂದ್ಯ ಫೆ.23 ರಂದು: ಇಲ್ಲಿದೆ ಕಂಪ್ಲೀಟ್ ವೇಳಾ ಪಟ್ಟಿ

ಐಸಿಸಿ ಚಾಂಪಿಯನ್ ಟ್ರೋಫಿ 2025ರ ವೇಳಾಪಟ್ಟಿಗಾಗಿ ಅಭಿಮಾನಿಗಳ ಕಾಯುವಿಕೆ ಮುಗಿದಿದೆ, ಬಹುನಿರೀಕ್ಷಿತ ಚಾಂಪಿಯನ್ ಟ್ರೋಫಿ 2025ರ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಉಳಿದ ದೇಶಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದ್ದು, ಭಾರತ ತಂಡವು ಫೆಬ್ರವರಿ 20 ರಿಂದ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಚಾಂಪಿಯನ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯ ಕರಾಚಿಯಲ್ಲಿ ನಡೆಯಲಿದೆ. ಫೆಬ್ರವರಿ 19 ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಉದ್ಘಾಟನಾ ಪಂದ್ಯವನ್ನು ಆಡಲಿವೆ. ಒಟ್ಟು 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಸೇರಿವೆ. ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳಿವೆ. ಟೂರ್ನಿಯ ಫೈನಲ್‌ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ.

ICC Champions Trophy 2025 India to Face Pakistan on February 23 Full Schedule Inside

ಭಾರತ-ಪಾಕಿಸ್ತಾನ ಪಂದ್ಯ ಯಾವಾಗ?

ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಫೆಬ್ರವರಿ 20 ರಂದು ಆಡಲಿದೆ. ನಂತರ ಫೆಬ್ರವರಿ 23 ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಭಾರತ ತಂಡ ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ಗುಂಪು ಹಂತದ ಮೂರನೇ ಮತ್ತು ಕೊನೆಯ ಪಂದ್ಯವನ್ನು ಆಡಲಿದೆ. ಎರಡೂ ಗುಂಪಿನ ಅಗ್ರ-2 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.

ಫೈನಲ್ ಎಲ್ಲಿ?

ಚಾಂಪಿಯನ್ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯ ಲಾಹೋರ್‌ನಲ್ಲಿ ನಡೆಯಲಿದೆ. ಭಾರತ ಫೈನಲ್‌ಗೆ ಅರ್ಹತೆ ಪಡೆದರೆ ಆ ಪಂದ್ಯ ದುಬೈನಲ್ಲಿ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಎರಡಕ್ಕೂ ಮೀಸಲು ದಿನವನ್ನು ಇರಿಸಲಾಗಿದೆ. ಮಾರ್ಚ್ 10 ಫೈನಲ್‌ ಪಂದ್ಯಕ್ಕೆ ಮೀಸಲು ದಿನವಾಗಿದೆ. ರಾವಲ್ಪಿಂಡಿ, ಲಾಹೋರ್ ಮತ್ತು ಕರಾಚಿ ನಗರಗಳಲ್ಲಿ ಪಾಕಿಸ್ತಾನ ಚಾಂಪಿಯನ್ ಟ್ರೋಫಿ ಪಂದ್ಯಗಳನ್ನು ಆಯೋಜಿಸಲಿದೆ.

ಚಾಂಪಿಯನ್ಸ್ ಟ್ರೋಫಿ-2025 ಸಂಪೂರ್ಣ ವೇಳಾಪಟ್ಟಿ

  • ಫೆಬ್ರವರಿ-19 : ಪಾಕಿಸ್ತಾನ vs ನ್ಯೂಜಿಲೆಂಡ್, ಕರಾಚಿ, ಪಾಕಿಸ್ತಾನ
  • ಫೆಬ್ರವರಿ-20 : ಬಾಂಗ್ಲಾದೇಶ vs ಭಾರತ, ದುಬೈ
  • ಫೆಬ್ರವರಿ-21 : ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ- ಕರಾಚಿ, ಪಾಕಿಸ್ತಾನ
  • ಫೆಬ್ರವರಿ-22 : ಆಸ್ಟ್ರೇಲಿಯಾ vs ಇಂಗ್ಲೆಂಡ್- ಲಾಹೋರ್, ಪಾಕಿಸ್ತಾನ
  • ಫೆಬ್ರವರಿ-23 : ಪಾಕಿಸ್ತಾನ vs ಭಾರತ- ದುಬೈ
  • ಫೆಬ್ರವರಿ-24 : ಬಾಂಗ್ಲಾದೇಶ vs ನ್ಯೂಜಿಲೆಂಡ್- ರಾವಲ್ಪಿಂಡಿ, ಪಾಕಿಸ್ತಾನ
  • ಫೆಬ್ರವರಿ-25 : ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕ- ರಾವಲ್ಪಿಂಡಿ, ಪಾಕಿಸ್ತಾನ
  • ಫೆಬ್ರವರಿ-26 : ಅಫ್ಘಾನಿಸ್ತಾನ vs ಇಂಗ್ಲೆಂಡ್- ಲಾಹೋರ್, ಪಾಕಿಸ್ತಾನ
  • ಫೆಬ್ರವರಿ-27 : ಪಾಕಿಸ್ತಾನ vs ಬಾಂಗ್ಲಾದೇ- ರಾವಲ್ಪಿಂಡಿ, ಪಾಕಿಸ್ತಾನ
  • ಫೆಬ್ರವರಿ-28 : ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ- ಲಾಹೋರ್, ಪಾಕಿಸ್ತಾನ
  • ಮಾರ್ಚ್-1 : ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್- ಕರಾಚಿ, ಪಾಕಿಸ್ತಾನ
  • ಮಾರ್ಚ್-2 : ನ್ಯೂಜಿಲೆಂಡ್ vs ಭಾರತ- ದುಬೈ
  • ಮಾರ್ಚ್-4 : ಸೆಮಿಫೈನಲ್ ಪಂದ್ಯ 1- ದುಬೈ
  • ಮಾರ್ಚ್-5 : ಸೆಮಿಫೈನಲ್ ಪಂದ್ಯ 2- ಲಾಹೋರ್, ಪಾಕಿಸ್ತಾನ
  • ಮಾರ್ಚ್- 9 : ಫೈನಲ್ ಪಂದ್ಯ- ಲಾಹೋರ್ (ಭಾರತ ಅರ್ಹತೆ ಪಡೆದರೆ ದುಬೈನಲ್ಲಿ ಆಡಲಾಗುತ್ತದೆ)

Story first published: Tuesday, December 24, 2024, 18:04 [IST]
Other articles published on Dec 24, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+