Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy: ಎಚ್ಚೆತ್ತುಕೊಂಡ ಪಾಕ್‌: ಕರಾಚಿ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಾಟ

ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗಿಲ್ಲ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇತ್ತ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಪಾಕಿಸ್ತಾನಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ತ್ರಿವರ್ಣ ಧ್ವಜ ವಿವಾದವೂ ಮುನ್ನೆಲೆಗೆ ಬಂದಿತ್ತು. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಪಾಕಿಸ್ತಾನದಲ್ಲಿ ಹೊಸದಾಗಿ ನಿರ್ಮಿಸಲಾದ ಕರಾಚಿಯ ಸ್ಟೇಡಿಯಂನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ. ಇದನ್ನು ಗಮನಿಸಿದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ಇದೀಗ ಎಚ್ಚೆತ್ತುಕೊಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸರಿ ದಾರಿಗೆ ಬಂದಿದೆ.

ಬುಧವಾರ, ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭದಲ್ಲಿ ಕರಾಚಿಯ ಸ್ಟೇಡಿಯಂನಲ್ಲಿ ಟೂರ್ನಿಯಲ್ಲಿ ಭಾಗವಹಿಸುವ ಇತರ ರಾಷ್ಟ್ರಗಳ ಧ್ವಜಗಳೊಂದಿಗೆ ತ್ರಿವರ್ಣ ಧ್ವಜವು ಹಾರಾಡುತ್ತಿರುವುದು ಕಂಡುಬಂದಿದೆ. ಇಂದು ಕರಾಚಿಯ ಸ್ಟೇಡಿಯಂನಿಂದ ಹೊರ ಬಂದಿರುವ ವೀಡಿಯೊಗಳು ಮತ್ತು ಫೋಟೋಗಳಲ್ಲಿ ಭಾರತದ ತ್ರಿವರ್ಣ ಧ್ವಜವು ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದ ಧ್ವಜಗಳ ನಡುವೆ ತನ್ನ ಸ್ಥಾನವನ್ನು ಪಡೆದುಕೊಂಡಿದೆ.

ICC Champions Trophy 2025 Indian national flag flying at Karachi ground in Pakistan

ಭಾರತ ತಂಡ ಗುರುವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮುನ್ನ, ಕರಾಚಿಯ ಸ್ಟೇಡಿಯಂನಲ್ಲಿ ತ್ರಿವರ್ಣ ಧ್ವಜ ಹಾರಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ತರಿಸಿದೆ. ಆರಂಭದಲ್ಲಿ, ಕರಾಚಿಯ ಸ್ಟೇಡಿಯಂನಲ್ಲಿ ತ್ರಿವರ್ಣ ನೋಡದಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಈ ವಿವಾದದ ನಡುವೆಯೇ, ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ ಸ್ಟೇಡಿಯಂಗಳಲ್ಲಿ ಪಂದ್ಯಗಳನ್ನು ಆಡುವ ಎಲ್ಲಾ ದೇಶಗಳ ಧ್ವಜಗಳನ್ನು ಹಾರಿಸಲಾಗಿದೆ. ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಪಂದ್ಯಗಳನ್ನು ಆಡಲು ಪಾಕಿಸ್ತಾನಕ್ಕೆ ಬರುತ್ತಿಲ್ಲವಾದ್ದರಿಂದ, ಸ್ಟೇಡಿಯಂನಲ್ಲಿ ಭಾರತದ ಧ್ವಜವನ್ನು ಹಾರಿಸಿಲ್ಲ ಎಂದು ಪಿಸಿಬಿ ಮೂಲವೊಂದು ಮಾಹಿತಿ ನೀಡಿತ್ತು.ಆದರೆ ಇಂದು ಕರಾಚಿ ಸ್ಟೇಡಿಯಂನ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಇತರ ಎಲ್ಲಾ ದೇಶಗಳೊಂದಿಗೆ ಪಾಕಿಸ್ತಾನದಲ್ಲಿಯೂ ಭಾರತದ ಧ್ವಜವನ್ನು ಹಾರಿಸಲಾಗಿದೆ.

ಭಾರತ ತಂಡವು ಐಸಿಸಿ ನಿಯಮಗಳ ಪ್ರಕಾರ, ಪಾಕಿಸ್ತಾನ ಹೆಸರಿರುವ ಚಾಂಪಿಯನ್ಸ್ ಟ್ರೋಫಿಯ ಅಧಿಕೃತ ಲೋಗೋವನ್ನು ತನ್ನ ಜೆರ್ಸಿಯಲ್ಲಿ ಬಳಸುತ್ತಿದೆ. ಪಾಕಿಸ್ತಾನದಲ್ಲಿ ಆಡದಿರುವುದರಿಂದ ಭಾರತ ತಮ್ಮ ಜೆರ್ಸಿಯ ಮೇಲೆ ಪಾಕಿಸ್ತಾನ ಹೆಸರನ್ನು ಬಳಸುವುದಿಲ್ಲ ಎಂಬ ವದಂತಿಗಳು ವೇಗ ಪಡೆದುಕೊಂಡಿದ್ದವು. ಆದರೆ, ಈ ಎಲ್ಲಾ ಊಹಪೋಹಗಳನ್ನು ತಳ್ಳಿಹಾಕಿದ ಬಿಸಿಸಿಐ ಕಾರ್ಯದರ್ಶಿ ಟೀಮ್ ಇಂಡಿಯಾ ಐಸಿಸಿಯ ಎಲ್ಲಾ ನಿಯಮಗಳನ್ನು ಪಾಲಿಸುತ್ತದೆ ಎಂದು ಹೇಳಿದ್ದರು.

Story first published: Wednesday, February 19, 2025, 19:26 [IST]
Other articles published on Feb 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+