ಲಂಡನ್, ಜೂನ್ 08: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ ತಂಡಕ್ಕೆ 7 ವಿಕೆಟ್ ಗಳ ಅಂತರದ ಭರ್ಜರಿ ಜಯ ದಾಖಲಿಸಿದೆ. 50 ಓವರ್ ಗಳಲ್ಲಿ ಟೀಂ ಇಂಡಿಯಾ 321/6 ಸ್ಕೋರ್ ಮಾಡಿತ್ತು. ಶ್ರೀಲಂಕಾ ತಂಡ 48.4 ಓವರ್ಸ್ ನಲ್ಲಿ 332/3 ಸ್ಕೋರ್ ಮಾಡಿ ಐತಿಹಾಸಿಕ ಜಯ ದಾಖಲಿಸಿದೆ.
ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು
ಸಂಕ್ಷಿಪ್ತ ಸ್ಕೋರ್ :
ಶ್ರೀಲಂಕಾ : ಗುಣತಿಲಕ್ 76, ಕುಶಾಲ್ ಮೆಂಡಿಸ್ 89, ಕುಶಾಲ್ ಪೆರೆರಾ47, ಏಂಜೆಲೋ ಮ್ಯಾಥ್ಯೂಸ್ ಅಜೇಯ 52, ಗುಣರತ್ನೆ 34
ಟೀಂ ಇಂಡಿಯಾ: ಶಿಖರ್ ಧವನ್ 125, ರೋಹಿತ್ 78, ಧೋನಿ 63, ಮಾಲಿಂಗ 2/70
ಸೆಮಿಫೈನಲ್ ಹಂತಕ್ಕೇರಲು ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಒಂದು ವೇಳೆ ಮಳೆ ಬಿದ್ದು, ಪಂದ್ಯ ರದ್ದಾದರೆ, ಅಂಕಪಟ್ಟಿಯಲ್ಲಿ ರನ್ ಸರಾಸರಿ ಲೆಕ್ಕಕ್ಕೆ ಬರುತ್ತದೆ.

ಲಂಡನ್ನಿನ ಹವಾಮಾನ ವರದಿಯಂತೆ ಗುರುವಾರ ಮಧ್ಯಾಹ್ನ ಹಾಗೂ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಶೇ 40-50 ಮಳೆ ಖಂಡಿತ ಎಂದು ವರದಿ ಹೇಳಿದೆ.