For Quick Alerts
ALLOW NOTIFICATIONS  
For Daily Alerts
 

Champions Trophy 2025: ಟೂರ್ನಿಯಲ್ಲಿ ಬೌಲರ್‌ಗಳನ್ನು ಬಹುವಾಗಿ ಕಾಡಿದ ಐವರು ಬ್ಯಾಟರ್‌ಗಳು

ಏಳು ವರ್ಷಗಳ ಬಳಿಕ ಐಸಿಸಿ ಮೆಗಾ ಈವೆಂಟ್, ಚಾಂಪಿಯನ್ಸ್ ಟ್ರೋಫಿ ಮತ್ತೆ ಆರಂಭವಾಗಲಿದೆ. ಈ ಬಾರಿ ಈ ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸುತ್ತಿದ್ದು, ವಿಶ್ವದ ಎಂಟು ತಂಡಗಳು ಭಾಗವಹಿಸುತ್ತಿವೆ. ಹಾಲಿ ಚಾಂಪಿಯನ್ ಪಾಕ್‌ ಸೇರಿದಂತೆ ಭಾರತ, ಬಾಂಗ್ಲಾದೇಶ, ನ್ಯೂಜಿಲೆಂಡ್ "ಎ" ಗುಂಪಿನಲ್ಲಿ ಸ್ಥಾನ ಪಡೆದಿವೆ. ಇನ್ನು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ " ಬಿ" ಗುಂಪಿನಲ್ಲಿ ಸ್ಥಾನ ಪಡೆದಿವೆ. ಎರಡೂ ಗುಂಪುಗಳಿಂದ ಅಗ್ರ ಎರಡು ತಂಡಗಳು ನಾಕೌಟ್ ಹಂತ ಪ್ರವೇಶಿಸಲಿವೆ.

ಈ ಬಾರಿ ಚಾಂಪಿಯನ್ಸ್ ಟ್ರೋಫಿ ಏಕದಿನ ಮಾದರಿಯಲ್ಲಿ ನಡೆಯುತ್ತಿದೆ. ಈ ಹಿಂದೆಯೂ ಈ ಟೂರ್ನಿ ನಡೆದಾಗ ಸ್ಟಾರ್‌ ಆಟಗಾರರು ತಮ್ಮ ಅಬ್ಬರವನ್ನು ಪ್ರದರ್ಶಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅಬ್ಬರದ ಆಟವನ್ನು ಆಡಿದ ವಿಶ್ವ ಟಾಪ್‌ 5 ಆಟಗಾರರ ಪಟ್ಟಿ ಇಲ್ಲಿದೆ.

ICC Champions Trophy Returns Top 5 Players with Stellar Performances in Tournament History

ಕ್ರಿಸ್‌ ಗೇಲ್‌

ವೆಸ್ಟ್‌ ಇಂಡೀಸ್‌ ತಂಡದ ದೈತ್ಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಆಟಗಾರ ಕ್ರಿಸ್‌ ಗೇಲ್. ಇವರು ಈ ಟೂರ್ನಿಯಲ್ಲಿ ಗರಿಷ್ಠ ರನ್‌ ಸಾಧಕ. ಇವರು ಆಡಿದ 17 ಪಂದ್ಯಗಳಲ್ಲಿ 52ರ ಸರಾಸರಿಯಲ್ಲಿ 791 ರನ್‌ ಸಿಡಿಸಿದ್ದಾರೆ. ಈ ವೇಳೆ 3 ಶತಕ ಹಾಗೂ 1 ಅರ್ಧಶತಕ ಸಹ ಸೇರಿವೆ. ಇನ್ನು ಇವರು 101 ಬೌಂಡರಿ ಹಾಗೂ 15 ಸಿಕ್ಸರ್‌ ಬಾರಿಸಿದ್ದಾರೆ.

ಮಹೇಲ್ ಜಯವರ್ಧನೆ

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೋಬ್ಬ ಸ್ಟಾರ್ ಆಟಗಾರ ಶ್ರೀಲಂಕಾದ ಮಹೇಲ್ ಜಯವರ್ಧನೆ. ಇವರು ಶ್ರೀಲಂಕಾ ಪರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ 22 ಪಂದ್ಯಗಳ 21 ಇನಿಂಗ್ಸ್‌ನಲ್ಲಿ 742 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 41 ಆಗಿದೆ. ಇನ್ನು ಈ ವೇಳೆ ಜಯವರ್ಧನೆ 5 ಅರ್ಧಶತಕ ಬಾರಿಸಿ ಸಂಭ್ರಮಿಸಿದ್ದಾರೆ.

ICC Champions Trophy Returns Top 5 Players with Stellar Performances in Tournament History

ಗಬ್ಬರ್ ಖ್ಯಾತಿಯ ಶಿಖರ್

ಟೀಮ್ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್‌ ಐಸಿಸಿ ಟೂರ್ನಿಗಳಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುವ ಆಟಗಾರ. ಇವರು ಆಡಿದ 10 ಪಂದ್ಯಗಳಲ್ಲಿ 77ರ ಸರಾಸರಿಯಲ್ಲಿ 701 ರನ್‌ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 3 ಅರ್ಧಶತಕಗಳು ಸೇರಿವೆ. ಈ ವೇಳೆ ಇವರು 79 ಬೌಂಡರಿ, 8 ಸಿಕ್ಸರ್ ಬಾರಿಸಿದ್ದಾರೆ.

ಕುಮಾರ್ ಸಂಗಕ್ಕಾರ

ಶ್ರೀಲಂಕಾದ ಭರವಸೆಯ ಎಡಗೈ ಆಟಗಾರ ಕುಮಾರ್ ಸಂಗಾಕ್ಕರ್ ಸಹ ಈ ಟೂರ್ನಿಯಲ್ಲಿ ರನ್ ಕಲೆ ಹಾಕಿ ಎಲ್ಲರ ಚಿತ್ತ ಕದ್ದಿದ್ದಾರೆ. ಇವರು ಆಡಿದ 22 ಪಂದ್ಯಗಳಲ್ಲಿ 683 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 4 ಅರ್ಧಶತಕಗಳು ಸೇರಿವೆ.

ICC Champions Trophy Returns Top 5 Players with Stellar Performances in Tournament History

ಸೌರವ್ ಗಂಗೂಲಿ

ಟೀಮ್ ಇಂಡಿಯಾದ ಯಶಸ್ವಿ ನಾಯಕರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಸೌರವ್ ಗಂಗೂಲಿ. ಇವರು ಸಹ ಚಾಂಪಿಯನ್ಸ್‌ ಟ್ರೋಫಿ ರನ್‌ ಸಾಧಕರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಆಡಿದ 13 ಪಂದ್ಯಗಳಲ್ಲಿ 665 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸರಾಸರಿ 73 ಆಗಿದೆ. ಗಂಗೂಲಿ 3 ಶತಕ ಹಾಗೂ 3 ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ದಾದಾ ಒಟ್ಟು 66 ಬೌಂಡರಿ, 17 ಸಿಕ್ಸರ್‌ ಬಾರಿಸಿದ್ದಾರೆ.

Story first published: Wednesday, February 12, 2025, 10:11 [IST]
Other articles published on Feb 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+