ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಮೈದಾನದಲ್ಲಿನ ಕೆಟ್ಟ ವರ್ತನೆಗೆ ಕಠಿಣ ಶಿಕ್ಷೆ: ಸಮಿತಿ ಶಿಫಾರಸು

ಮುಂಬೈ: ಮೇ 30: ಕ್ರಿಕೆಟ್ ಅಂಗಳದಲ್ಲಿನ ಆಟಗಾರರ ಕೆಟ್ಟ ವರ್ತನೆಗೆ ಕಡಿವಾಣ ಹಾಕಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕಠಿಣ ನಿರ್ಧಾರಕ್ಕೆ ಮುಂದಾಗಿದೆ.

ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಪಂದ್ಯದ ವೇಳೆ ಆಟಗಾರರ ವರ್ತನೆಯಲ್ಲಿ ಸುಧಾರಣೆ ತರಲು ಪಂದ್ಯದ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ.

ವೈರಲ್ ಆಯ್ತು ಧೋನಿ-ಜಿವಾರ ಈ ಮುದ್ದಾದ ವಿಡಿಯೋವೈರಲ್ ಆಯ್ತು ಧೋನಿ-ಜಿವಾರ ಈ ಮುದ್ದಾದ ವಿಡಿಯೋ

ಮೈದಾನದಲ್ಲಿ ಅಸಭ್ಯ ವರ್ತನೆ, ಪರಸ್ಪರ ನಿಂದಿಸುವಿಕೆ, ನಿಯಮಾವಳಿಗಳ ಉಲ್ಲಂಘನೆ ಮುಂತಾದವುಗಳನ್ನು ನಿಯಂತ್ರಿಸುವ ಸಂಬಂಧ ಐಸಿಸಿ ಕ್ರಿಕೆಟ್ ಸಮಿತಿಯು ಮುಂಬೈನಲ್ಲಿ ಎರಡು ದಿನಗಳ ಸಭೆ ನಡೆಸಿತು.

ICC cricket committee recommends for stricter punishments for poor behaviour

ಅಲ್ಲದೆ, ಚೆಂಡು ವಿರೂಪಗೊಳಿಸುವ ಪ್ರಕರಣಗಳ ಕುರಿತು ಸಹ ಚರ್ಚೆಗೆ ಒಳಗಾಗಿದ್ದು, ಇಂತಹ ಪ್ರಕರಣಗಳಲ್ಲಿ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸುವ ಬಗ್ಗೆ ಸಹಮತ ವ್ಯಕ್ತವಾಯಿತು.

Code of Respect ರಚಿಸುವ ಮೂಲಕ ಪಂದ್ಯದ ರೆಫರಿಗಳಿಗೆ ಹೆಚ್ಚಿನ ಅಧಿಕಾರ ಹಾಗೂ ಬೆಂಬಲ ನೀಡಲು ಸಮಿತಿ ಶಿಫಾರಸು ಮಾಡಿದೆ. ಅಲ್ಲದೆ, ಪಂದ್ಯದ ರೆಫರಿಗಳಿಗೆ ಅಪರಾಧದ ಮಟ್ಟ ಅಥವಾ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅವಕಾಶ ನೀಡಲಿದೆ.

ಮೈಕ್ ಗ್ಯಾಟಿಂಗ್ ಮತ್ತು ಡೇವಿಡ್ ಬೂನ್ ಅವರೊಂದಿಗೆ ಆಟಗಾರರ ವರ್ತನೆ ವಿಚಾರವಾಗಿ ಉತ್ತಮ ಚರ್ಚೆ ನಡೆಯಿತು. ಅತಿಯಾದ ವೈಯಕ್ತಿಕ ನಿಂದನೆ ಮತ್ತು ಚೆಂಡು ವಿರೂಪ ಮಾಡುವುದು ಗಂಭೀರ ಅಪರಾಧಗಳಾಗಿದ್ದು, ಅವುಗಳನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಬೇಕು ಎಂಬುದಾಗಿ ತೀರ್ಮಾನಿಸಲಾಯಿತು ಎಂದು ಕುಂಬ್ಳೆ ಹೇಳಿದ್ದಾರೆ.

ICC cricket committee recommends for stricter punishments for poor behaviour

ಟೆಸ್ಟ್‌ನಲ್ಲಿ ಟಾಸ್ ರದ್ದು ಇಲ್ಲ
ಟೆಸ್ಟ್ ಕ್ರಿಕೆಟ್‌ನಲ್ಲಿ ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ಹಾಕುವ ಪದ್ಧತಿಯನ್ನು ರದ್ದುಗೊಳಿಸಬೇಕು ಎಂಬ ಅಭಿಪ್ರಾಯವನ್ನು ಸದ್ಯಕ್ಕೆ ಅನುಮೋದಿಸದೆ ಇರಲು ಸಮಿತಿ ತೀರ್ಮಾನಿಸಿದೆ.

ಟಾಸ್ ಹಾಕುವುದರಿಂದ ಆತಿಥೇಯ ತಂಡಗಳು ಪಿಚ್‌ನ ವರ್ತನೆಯ ಲಾಭವನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಹೀಗಾಗಿ ಟಾಸ್ ಪದ್ಧತಿಯನ್ನು ಕೈಬಿಟ್ಟು, ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ದುಕೊಳ್ಳುವ ಆಯ್ಕೆಯನ್ನು ಪ್ರವಾಸಿ ತಂಡಕ್ಕೇ ಬಿಟ್ಟುಕೊಡಬೇಕು ಎಂಬ ಸಲಹೆ ಬಂದಿದ್ದವು.

ಆದರೆ, ಸದ್ಯಕ್ಕೆ ಟಾಸ್ ವ್ಯವಸ್ಥೆ ಟೆಸ್ಟ್‌ ಕ್ರಿಕೆಟ್‌ನ ಭಾಗವಾಗಿಯೇ ಮುಂದುವರಿಯಲಿದೆ. ಕೆಟ್ಟ ಪಿಚ್‌ಗಳನ್ನು ಸಿದ್ಧಪಡಿಸುವ ಆತಿಥೇಯ ದೇಶಗಳ ತಂತ್ರಕ್ಕೆ ನಿಯಂತ್ರಣ ಹಾಕುವ ಸಲುವಾಗಿ ಐಸಿಸಿ, ಕೆಟ್ಟ ಪಿಚ್ ಕಾರಣದಿಂದ ಪಂದ್ಯ ರದ್ದಾದರೆ ಪ್ರವಾಸಿ ತಂಡಕ್ಕೆ ವಿಶ್ವ ಚಾಂಪಿಯನ್‌ಶಿಪ್ ಪಾಯಿಂಟ್ಸ್‌ಗಳನ್ನು ನೀಡಬೇಕು ಎಂದು ಈ ಹಿಂದೆ ಶಿಫಾರಸು ಮಾಡಿತ್ತು.

ಟೆಸ್ಟ್‌ ಪಂದ್ಯಕ್ಕೆ ಅಡೆತಡೆಗಳು ಉಂಟಾಗಿ ಅವಧಿ ಕಡಿಮೆಯಾದ ಸಂದರ್ಭಗಳಲ್ಲಿ ಅನುಕೂಲವಾಗುವಂತೆ, ಹೆಚ್ಚುವರಿ ಒಂದು ದಿನವನ್ನು ಕಾಯ್ದಿರಿಸಲು ಸಹ ಸಮಿತಿ ಶಿಫಾರಸು ಮಾಡಿದೆ.

Story first published: Wednesday, May 30, 2018, 14:42 [IST]
Other articles published on May 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X