Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2ನೇ ಪಂದ್ಯ : ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ

ಮೆಲ್ಬೋರ್ನ್, ಫೆ.14: ಅತಿಥೇಯ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ವೈರಿ ಇಂಗ್ಲೆಂಡ್ ತಂಡವನ್ನು ಎದುರಿಸಿತು.. ಎಂಸಿಜಿಯಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಮೊದಲ ದಿನದ ಎರಡನೇ ಪಂದ್ಯ ಆರಂಭದಿಂದಲೇ ರೋಚಕತೆ ಸಾಕ್ಷಿಯಾಗಿತು. ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 111 ರನ್ ಗಳ ಅಂತರದ ಭರ್ಜರಿ ಜಯ ದಾಖಲಿಸಿ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು 10 ಓವರ್ ಗಳಲ್ಲಿ 70 ಕ್ಕೂ ಅಧಿಕ ಸ್ಕೋರ್ ಮಾಡಿತು. ಇದಕ್ಕೆ ತಕ್ಕ ಉತ್ತರ ನೀಡಿರುವ ಇಂಗ್ಲೆಂಡ್ ಮೂರು ಆಟಗಾರರನ್ನು ಪೆವಿಲಿಯನ್ ಗೆ ಕಳಿಸಿತು. ಆದರೆ, ಅಂತಿಮವಾಗಿ ಆಸ್ಟ್ರೇಲಿಯಾ 342 ಸ್ಕೋರ್ ಮಾಡಿತು. [ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾಕ್ಕೆ ಸೋಲು]

Australia

ಇಂಗ್ಲೆಂಡ್ ಇನ್ನಿಂಗ್ಸ್ :
* ಇಂಗ್ಲೆಂಡ್ ತಂಡ 41.5 ಓವರ್ಸ್ ನಲ್ಲಿ 231 ರನ್ ಗಳಿಸಿ ಆಲೌಟ್ .
* ಆಸೀಸ್ ಪರ ಮಾರ್ಷ್ ಉತ್ತಮ ಬೌಲರ್ 9-0-33-5
* ಟೇಲರ್ ವೀರಾವೇಶದ ಆಟ ಪ್ರದರ್ಶಿಸಿ 98 ರನ್ (90ಎಸೆತ 11X4, 2 X6) ಗಳಿಸಿ ಅಜೇಯರಾಗಿ ಉಳಿದರು.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | 2015: ಟಾಪ್ 10 ಬದಲಾವಣೆ | ಈ ಯುವ ಸ್ಟಾರ್ ಗಳ ಮೇಲೆ ಕಣ್ಣಿರಿಸಿ

* ಕೊನೆ ಹಂತದಲ್ಲಿ ವೋಕ್ಸ್ 37 ರನ್ ಗಳಿಸಿ ಟೇಲರ್ ಗೆ ಸಾಥ್ ನೀಡಿದರು.
* 22 ಓವರ್ ಗಳಲ್ಲಿ 94/6
* ಇಯನ್ ಬೆಲ್ 36 ರನ್ ಗಳಿಸಿದ್ದು ಬಿಟ್ಟರೆ ಮಧ್ಯಮ ಕ್ರಮಾಂಕ ಫುಲ್ ಕುಸಿತ.
* ಮಿಚೆಲ್ ಮಾರ್ಷ್ 14/4, ಇಂಗ್ಲೆಂಡ್ ಬ್ಯಾಟ್ಸ್ ಮನ್ ಬೆನ್ನಲುಬು ಮುರಿದರು.

ಆಸ್ಟ್ರೇಲಿಯಾ ಇನ್ನಿಂಗ್ಸ್ ಮುಖ್ಯಾಂಶ:

WC 2015 Aus vs eng


* 50 ಓವರ್ಸ್ 342/9, ಫಿನ್ 74/5
* ಮ್ಯಾಕ್ಸ್ ವೆಲ್ 66 ರನ್ 40 ಎಸೆತ 11 ಬೌಂಡರಿ
* ಅರೋನ್ ಪಿಂಚ್ ಈ ಟೂರ್ನಿಯ ಮೊದಲ ಶತಕ ದಾಖಲಿಸಿದರು. 135 ರನ್ (12 ಬೌಂ, 3ಸಿಕ್ಸರ್)
* ಅರೋನ್ ಫಿಂಚ್ 50 ಎಸೆತಗಳಲ್ಲಿ 53 ರನ್ ಗಳಿಸಿದ್ದು, ಆಸೀಸ್ ಮೊತ್ತ 15 ಓವರ್ಸ್ ಗಳಲ್ಲಿ 86/3.
* ಸ್ಟುವರ್ಟ್ ಬ್ರಾಡ್ ಗೆ ಹ್ಯಾಟ್ರಿಕ್ ಮಿಸ್. ಅದರೆ, 5 ರನ್ ಗಳಿಸಿದ ಸ್ಮಿತ್, ವೋಕ್ಸ್ ಎಸೆತಕ್ಕೆ ಬೋಲ್ಡ್.
* ಅತ್ತ ಶ್ರೀಲಂಕಾದ ಮಹೇಲ ಜಯವರ್ದನೆಯಂತೆ ಇತ್ತ ಶೇನ್ ವಾಟ್ಸನ್ ಕೂಡಾ ಶೂನ್ಯ ಸುತ್ತಿ ಪೆವಿಲಿಯನ್ ಗೆ ವಾಪಸ್.
* 18 ಎಸೆತಗಳಲ್ಲಿ 22ರನ್ ಚೆಚ್ಚಿ(4 ಬೌಂಡರಿ) ಬ್ರಾಡ್ ಗೆ ಬೋಲ್ಡ್ ಆದ ಡೇವಿಡ್ ವಾರ್ನರ್.
* 6.1 ಓವರ್ ಗಳಲ್ಲೇ 50 ರನ್ ಕಲೆ ಹಾಕಿದ ಆಸ್ಟ್ರೇಲಿಯಾ. ಫಿಂಚ್ ಗೆ ಆರಂಭದಲ್ಲೇ ಜೀವದಾನ.
* ಇಂಗ್ಲೆಂಡ್ ತಂಡದಲ್ಲಿ ರವಿ ಬೋಪಾರ ಆಡುತ್ತಿಲ್ಲ. ಮೊದಲ ಸ್ಪೆಲ್ ಬೌಲಿಂಗ್ ನಲ್ಲಿ ಸ್ಟುವರ್ಟ್ ಬ್ರಾಡ್ ಇಳಿದಿದ್ದು ವಿಶೇಷ.
* ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+