ಪಾಕಿಸ್ತಾನ ಪವರ್ ಫುಲ್ ಬ್ಯಾಟಿಂಗ್, ಯುಎಇಗೆ ಸೋಲು
ನೇಪಿಯರ್, ಮಾ.4: ವಿಶ್ವಕಪ್ 2015 ಟೂರ್ನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಹಳೆ ಹುಲಿ ಪಾಕಿಸ್ತಾನ ಪವರ್ ಫುಲ್ ಬ್ಯಾಟಿಂಗ್ ಪ್ರದರ್ಶಿಸಿದೆ. ಯುಎಇ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಕೈ ಕೊಟ್ಟಿದೆ. 340 ರನ್ ಬೆನ್ನತ್ತಿದ ಯುಎಇ ತಂಡ 50 ಓವರ್ಸ್ ನಲ್ಲಿ 210/8 ಸ್ಕೋರ್ ಮಾಡಿ ಸೋಲೊಪ್ಪಿಕೊಂಡಿದೆ.
ಪಾಕ್ ಬ್ಯಾಟ್ಸ್ ಮನ್ ಗಳು ಭರ್ಜರಿ ಹೊಡೆತಗಳ ಮೂಲಕ 339/6 ಗಳಿಸಿದೆ. ಬೃಹತ್ ಮೊತ್ತ ಬೆನ್ನತ್ತಿರುವ ಯುಎಇ 20ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 79ರನ್ ಗಳಿಸಿ ಆಘಾತ ಅನುಭವಿಸಿದ್ದು ನಂತರ ಚೇತರಿಕೆ ಕಾಣಲಿಲ್ಲ.
ಯುಎಇ ಪರ ಖುರಂ ಖಾನ್ 43, ಶೈಮಾನ್ ಅನ್ವರ್ 62 ಹಾಗೂ ಅಹ್ಮದ್ ಜಾವೇದ್ 40 ಕೊಂಚ ಪ್ರತಿರೋಧ ಒಡ್ಡಿದರು. ಶಹೀದ್ ಅಫ್ರಿದಿ ಬೌಲಿಂಗ್ ನಲ್ಲಿ ಮಿಂಚಿ 35ಕ್ಕೆ 2 ವಿಕೆಟ್ ಕಿತ್ತರು. ಸೊಹೈಲ್ ಖಾನ್, ವಹಾಬ್ ರಿಯಾಜ್ ತಲಾ 2, ರಹತ್ ಅಲಿ, ಮಕ್ಸೂದ್ ತಲಾ 1 ವಿಕೆಟ್ ಪಡೆದು ಯುಎಇ ತಂಡವನ್ನು ನಿಯಂತ್ರಿಸಿ ಗೆಲುವಿನ ನಗೆ ಬೀರಿದರು.
ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೂ ಪಾಕಿಸ್ತಾನ ಆರಂಭದಲ್ಲೇ ನಾಸೀರ್ ಜೆಮ್ಶೆಡ್ (4)ವಿಕೆಟ್ ಕಳೆದುಕೊಂಡಿತು. ಆದರೆ, ಅಹ್ಮದ್ ಶೆಹಜಾದ್ 93 ರನ್ (103ಎ, 8x4, 1x6) ಹಾಗೂ ಹಾರೀಸ್ ಸೊಹೈಲ್ 70 ರನ್ (83ಎ, 5x4,1x6) ಇನ್ನಿಂಗ್ಸ್ ಕಟ್ಟಿದರು.

ನಂತರ ನಾಯಕ ಮಿಸ್ಬಾ ಉಲ್ ಹಕ್ ಬಿರುಸಿನ ಆಟವಾಡಿ 49 ಎಸೆತಗಳಲ್ಲಿ 65 ರನ್ ಚೆಚ್ಚಿದರು. ಸೊಹೈಬ್ ಮಕ್ಸೂದ್ 31 ಎಸೆತಗಳಲ್ಲಿ 45 ರನ್, ಅಫ್ರಿದಿ 7 ಎಸೆತಗಳಲ್ಲಿ ಅಜೇಯ 21ರನ್ ಗಳಿಸುವ ಮೂಲಕ ಪಾಕಿಸ್ತಾನ 50 ಓವರ್ ಗಳಲ್ಲಿ 6 ವಿಕೆಟ್ ಕಳೆದು ಕೊಂಡು 339 ಸ್ಕೋರ್ ಮಾಡಿತು. ಯುಎಇ ಪರ ಗುರುಗೆ 8 ಓವರ್ ಗಳಲ್ಲಿ 56ರನ್ನಿತ್ತು 4 ವಿಕೆಟ್ ಕೆಡವಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications