ವೆಸ್ಟ್ ಇಂಡೀಸ್ ವಿಶ್ವಕಪ್ ತಂಡಕ್ಕೆ ಉಪ ನಾಯಕನಾಗಿ ಕ್ರಿಸ್‌ಗೇಲ್ ಆಯ್ಕೆ

ಕಿಂಗ್ಸ್‌ಟೌನ್, ಮೇ 7: ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅವರನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್, ವಿಶ್ವಕಪ್ ತಂಡದ ಉಪ ನಾಯಕನಾಗಿ ಆರಿಸಿದೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ 2019ರ ವಿಶ್ವಕಪ್ ಟೂರ್ನಿಯಲ್ಲಿ ಜೇಸನ್ ಹೋಲ್ಡರ್ ವೆಸ್ಟ್ ಇಂಡೀಸ್ ತಂಡದ ನಾಯಕತ್ವ ವಹಿಸಿದರೆ, ಗೇಲ್ ಉಪನಾಯಕ ಜವಾಬ್ದಾರಿ ಹೊರಲಿದ್ದಾರೆ.
ಮಾಜಿ ನಾಯಕ 39ರ ಹರೆಯದ ಗೇಲ್ ಪಾಲಿಗೆ ಇದು ಐದನೇ ವಿಶ್ವಕಪ್ ಅವಕಾಶ. ಕೆರಿಬಿಯನ್ ತಂಡ ಪ್ರತಿನಿಧಿಸಿ ಗೇಲ್ 289 ಏಕದಿನ ಪಂದ್ಯಗಳಲ್ಲಿ ಸುಮಾರು 10,000ಕ್ಕೂ ಅಧಿಕ ರನ್ ಬಾರಿಸಿದ್ದಾರೆ. 15 ಜನರಿರುವ ವಿಂಡೀಸ್ ತಂಡದಲ್ಲಿ ಡ್ಯಾರೆನ್ ಬ್ರಾವೋ, ಶಿಮ್ರಾನ್ ಹೆಟ್ಮೈರ್, ಆ್ಯಂಡ್ರೆ ರಸೆಲ್, ಕಾರ್ಲೋಸ್ ಬ್ರಾತ್‌ವೇಸ್ ಮೊದಲಾದವರಿದ್ದಾರೆ.
'ಅನುಭವಿ ಆಟಗಾರನಾಗಿ ತಂಡದ ನಾಯಕನನ್ನೂ ಸೇರಿ ತಂಡದ ಪ್ರತಿ ಆಟಗಾರರನ್ನೂ ಬೆಂಬಲಿಸೋದು ನನ್ನ ಜವಾಬ್ದಾರಿ. ಬಹುಶಃ ಇದು ಅತೀದೊಡ್ಡ ವಿಶ್ವಕಪ್ ಆಗಿ ಗುರುತಿಸಿಕೊಳ್ಳಲಿದೆ. ಇಲ್ಲಿ ನಿರೀಕ್ಷೆಗಳೂ ಹೆಚ್ಚಿರುತ್ತವೆ ಎಂಬ ಅರಿವಿದೆ. ವೆಸ್ಟ್ ಇಂಡೀಸ್‌ಗಾಗಿ ಉತ್ತಮ ಪ್ರದರ್ಶನ ನೀಡುತ್ತೇನೆ' ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಜೊತೆ ಗೇಲ್ ಹೇಳಿಕೊಂಡಿದ್ದಾರೆ.
ಬಲಿಷ್ಠ ಕ್ರಿಕೆಟ್ ತಂಡಗಳಲ್ಲಿ ಒಂದಾಗಿರುವ ವೆಸ್ಟ್ ಇಂಡೀಸ್ ತಂಡ 1975 ಮತ್ತು 1979ರಲ್ಲಿ ಚಾಂಪಿಯನ್ ಆಗಿ ಮುನುಗಿತ್ತು. ಮೇ 31ರಂದು ನಾಟಿಂಗ್ಹ್ಯಾಮ್ ನಡೆಯಲಿರುವ ವಿಶ್ವಕಪ್ 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications