
ಮ್ಯಾನ್ಚೆಸ್ಟರ್, ಜೂನ್ 16: ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇದು ಏಳನೇ ಬಾರಿಗೆ ಬದ್ಧ ಎದುರಾಳಿ ತಂಡಗಳಾದ ಪಾಕಿಸ್ತಾನ ಮತ್ತು ಭಾರತ ಭಾನುವಾರ (ಜೂನ್ 16) ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್ ನಲ್ಲಿ ಮುಖಾಮುಖಿಯಾಗುತ್ತಿವೆ. ಎರಡರಲ್ಲಿ ಯಾವ ತಂಡ ಸೋತರೂ, ಯಾವ ತಂಡ ಗೆದ್ದರೂ ಇತಿಹಾಸವಾಗಲಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಈ ಹಿಂದಿನ 6 ವಿಶ್ವಕಪ್ ಕಾದಾಟಗಳಲ್ಲಿ ಭಾರತ ಆರರಲ್ಲಿ ಆರೂ ಪಂದ್ಯಗಳನ್ನು ಗೆದ್ದಿದೆ, ಪಾಕಿಸ್ಥಾನ ಆರರಲ್ಲೂ ಸೋಲಿನ ಮುಖಭಂಗ ಅನುಭವಿಸಿದೆ. ಹೀಗಾಗಿ ಈ ಬಾರಿ ಭಾರತ ಗೆದ್ದರೆ ಸತತ ಎಳನೇ ಬಾರಿ ಗೆಲುವಿನ ದಾಖಲೆ ಬರೆಯಲಿದೆ, ಸೋತರೆ ಪ್ರಥಮ ಸಾರಿ ವಿಶ್ವಕಪ್‌ನಲ್ಲಿ ಪಾಕ್ ಎದುರು ಸೋಲಿನ ಕಹಿ ಅನುಭವಿಸಲಿದೆ.
ಈ ಹಿಂದಿನ ಆರು ಪಂದ್ಯಗಳೆಂದರೆ, 1. 1992, ಸಿಡ್ನಿ, ಭಾರತಕ್ಕೆ 43 ರನ್ ಜಯ- 2. 1996, ಬೆಂಗಳೂರು, ಟೀಮ್ ಇಂಡಿಯಾಕ್ಕೆ 39 ರನ್ ಗೆಲುವು- 3. 1999, ಮ್ಯಾಂಚೆಸ್ಟರ್, ಪಾಕ್‌ಗೆ 47 ರನ್ ಸೋಲು- 4. 2003, ಸೆಂಚುರಿಯನ್, 6 ವಿಕೆಟ್ ಗೆಲುವಾಚರಿಸಿದ ಗಂಗೂಲಿ ಬಳಗ- 5. 2011, ಮೊಹಾಲಿ, ಭಾರತ 29 ರನ್ ಜಯಭೇರಿ- 6. 2015, ಅಡಿಲೇಡ್, ಭಾರತಕ್ಕೆ 76 ರನ್ ಜಯ.
ಈ ಬಾರಿಯ ವಿಶ್ವಕಪ್‌ನಲ್ಲಿ ಎರಡರಲ್ಲಿ ಏರಡೂ ಪಂದ್ಯಗಳನ್ನು ಗೆದ್ದಿರುವ ವಿರಾಟ್ ಕೊಹ್ಲಿ ಬಳಗ ಸರ್ಫರಾಜ್ ಬಳಗದೆದುರೂ ಗೆಲುವಿನ ವಿಶ್ವಾಸದಲ್ಲಿದೆ. ಅತ್ತ ಪಾಕಿಸ್ತಾನ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಷ್ಟೇ ಗೆಲುವು ಕಂಡಿದೆ. ಭಾನುವಾರ ಮಳೆ ಬಾರದಿದ್ದರೆ ಇತ್ತಂಡಗಳ ಕುತೂಹಲಕಾರಿ ಕದನ ಕಣ್ತುಂಬಿಕೊಳ್ಳಬಹುದು.
{headtohead_cricket_3_5}