ಪಾಕಿಸ್ತಾನ ಮಾಜಿ ನಾಯಕ ಇಮ್ರಾನ್ ಸಲಹೆ ಬದಿಗೊತ್ತಿದ ಸರ್ಫರಾಜ್

ಇಸ್ಲಾಮಾಬಾದ್, ಜೂನ್ 16: ಪಾಕಿಸ್ತಾನದ ವಿಶ್ವಕಪ್ ವಿಜೇತ ನಾಯಕ, ಮಾಜಿ ಕ್ಯಾಪ್ಟನ್, ಹಾಲಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ತಮ್ಮ ತಂಡಕ್ಕೆ ಪ್ರೋತ್ಸಾಹಿಸಲು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ಇಮ್ರಾನ್ ಖಾನ್ತಮ್ಮ ಮೊದಲ ಟ್ವೀಟ್ನಲ್ಲಿ ಪಂದ್ಯದ ತೀವ್ರತೆಯನ್ನು ಗಮನಿಸಿದರೆ, ಉಭಯ ತಂಡಗಳು ಇಂದು ಅಧಿಕ ಮಾನಸಿಕ ಒತ್ತಡಕ್ಕೆ ಸಿಲುಕಲಿದ್ದಾರೆ. ಮಾನಸಿಕ ಸಾಮರ್ಥ್ಯವೇ ಇಂದು ಯಾರು ಗೆಲ್ಲಲಿದ್ದಾರೆ ಎಂಬುದನ್ನು ನಿರ್ಧರಿಸುತ್ತದೆ. ಸರ್ಫರಾಜ್ರಂಥ ದಿಟ್ಟ ನಾಯಕರನ್ನು ಹೊಂದಿರುವ ನಾವು ಅದೃಷ್ಟರು ಎಂದಿದ್ದಾರೆ.
ಮುಂದಿನ ಟ್ವೀಟ್ ಗಳಲ್ಲಿ ಹೇಗೆ ಆಡಬೇಕು, ಟಾಸ್ ಗೆದ್ದರೆ ಏನು ಮಾಡಬೇಕು ಎಂಬುದನ್ನು ಸೂಚಿಸಿದ್ದಾರೆ. ಆದರೆ, ಭಾರತ ವಿರುದ್ಧ ಓಲ್ಡ್ ಟ್ರಾಫರ್ಡ್ ಪಂದ್ಯದಲ್ಲಿ ಸರ್ಫರಾಜ್ ಅವರು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಇಮ್ರಾನ್ ಅವರ ಸಲಹೆ ಬದಿಗೊತ್ತಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಚರ್ಚೆ ನಡೆದಿದೆ.

ಪ್ರಧಾನ ಮಂತ್ರಿ ಇಮ್ರಾನ್ ಖಾನ್ ನೀಡಿದ್ದ ಸಲಹೆ
ಉತ್ತಮ ತಂತ್ರದೊಂದಿಗೆ ಗೆಲುವಿನ ಕಡೆ ಹೋಗುವುದಾದರೆ, ಸರ್ಫರಾಜ್ ಅವರು ವಿಶೇಷ ಬ್ಯಾಟ್ಸ್ಮನ್ ಮತ್ತು ಬೌಲರ್ಗಳೊಂದಿಗೆ ಸಾಗಬೇಕು. ತೀರ ವಿರಳವಾಗಿ ಒತ್ತಡವನ್ನು ನಿಭಾಯಿಸದವರ ಮೇಲೆ ಅವಲಂಬಿತವಾಗಬಾರದು. ಏಕೆಂದರೆ ಇಂದಿನ ಪಂದ್ಯದಲ್ಲಿ ಸಾಕಷ್ಟು ಒತ್ತಡ ಇರುತ್ತದೆ. ಕ್ರೀಡಾಂಗಣ ತೇವವಾಗಿದ್ದರೆ, ಸರ್ಫರಾಜ್ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದರು.
ಇಮ್ರಾನ್ ಖಾನ್ ತಮ್ಮ ಮೊದಲ ಟ್ವೀಟ್ನಲ್ಲಿ
ಇಮ್ರಾನ್ ಖಾನ್ ತಮ್ಮ ಮೊದಲ ಟ್ವೀಟ್ನಲ್ಲಿ ಪಂದ್ಯದ ತೀವ್ರತೆಯನ್ನು ಗಮನಿಸಿದರೆ, ಉಭಯ ತಂಡಗಳು ಇಂದು ಅಧಿಕ ಮಾನಸಿಕ ಒತ್ತಡಕ್ಕೆ ಸಿಲುಕಲಿದ್ದಾರೆ. ಮಾನಸಿಕ ಸಾಮರ್ಥ್ಯವೇ ಇಂದು ಯಾರು ಗೆಲ್ಲಲಿದ್ದಾರೆ ಎಂಬುದನ್ನು ನಿರ್ಧರಿಸುತ್ತದೆ. ಸರ್ಫರಾಜ್ರಂಥ ದಿಟ್ಟ ನಾಯಕರನ್ನು ಹೊಂದಿರುವ ನಾವು ಅದೃಷ್ಟರು ಎಂದಿದ್ದಾರೆ.
ತಮ್ಮ ಕಾಲದ ಆಟ ಸ್ಮರಿಸಿದ ಇಮ್ರಾನ್
ಶೇ 70ರಷ್ಟು ಪ್ರತಿಭೆ ಹಾಗೂ 30% ಮಾನಸಿಕ ಕ್ಷಮತೆ ಇತ್ತು. ನಾನು ನಿವೃತ್ತ ಹೊಂದಿದ ವೇಳೆ ಈ ಅನುಪಾತ 50:50ರಷ್ಟಾಗಿತ್ತು. ಈಗ ಮಾನಸಿಕ ಕ್ಷಮತೆ ಪ್ರಮಾಣ 60%ರಷ್ಟಿರುತ್ತದೆ.
ಸೋಲಿನ ಭೀತಿಯನ್ನು ಮೊದಲು ಗೆಲ್ಲಿ
ಸೋಲಿನ ಭೀತಿಯನ್ನು ಮೊದಲು ಗೆಲ್ಲಿ, ರಕ್ಷಣಾತ್ಮಕ ಆಟ, ಎದುರಾಳಿ ತಂಡದ ಲೋಪ ದೋಷದ ಸದುಪಯೋಗ ಪಡಿಸಿಕೊಂಡು ಆಟವಾಡಬೇಕು. ಸರ್ಫರಾಜ್ ಹಾಗೂ ನನ್ನ ತಂಡಕ್ಕೆ ನನ್ನ ಸಲಹೆ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications