ವಿಶ್ವಕಪ್ Live Score: ಆಸ್ಟ್ರೇಲಿಯಾ ವಿರುದ್ಧ ಬೌಲಿಂಗ್ ಆಯ್ದ ಪಾಕಿಸ್ತಾನ

ಟೌನ್‌ಟನ್, ಜೂನ್ 12: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಬುಧವಾರ (ಜೂನ್ 12) ಟೌನ್‌ಟನ್‌ನ ಕೂಪರ್ ಅಸೋಸಿಯೇಟ್ಸ್ ಕೌಂಟಿ ಗ್ರೌಂಡ್‌ನಲ್ಲಿ ಪಾಕಿಸ್ತಾನ ತಂಡದ ಸವಾಲು ಸ್ವೀಕರಿಸುತ್ತಿದೆ. ಭಾರತದ ವಿರುದ್ಧ ಪಂದ್ಯ ಸೋತ ಆಘಾತದಲ್ಲಿರುವ ಆಸೀಸ್, ಪಾಕಿಸ್ತಾನ ಮಣಿಸಿ ಅಂಕಪಟ್ಟಿಯಲ್ಲಿ ಮೇಲಕ್ಕೇರುವತ್ತ ಕಣ್ಣಿಟ್ಟಿದೆ. ಟಾಸ್ ಗೆದ್ದಿರುವ ಪಾಕಿಸ್ತಾನ ಬೌಲಿಂಗ್ ಆಯ್ದುಕೊಂಡಿದೆ.
ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳೂ ಈ ವಿಶ್ವಕಪ್‌ನಲ್ಲಿ 3 ಪಂದ್ಯಗಳನ್ನಾಡಿವೆ. ಇದರಲ್ಲಿ ಆ್ಯರನ್ ಫಿಂಚ್ ಬಳಗ 2 ರಲ್ಲಿಗೆದ್ದಿದೆ. ಇನ್ನು ಸರ್ಫರಾಜ್ ಅಹ್ಮದ್ ಪಡೆ 1ರಲ್ಲಷ್ಟೇ ಗೆಲುವು ಕಂಡಿದೆ. ಇನ್ನೆರಡು ಪಂದ್ಯಗಳಲ್ಲಿ ಒಂದು ಸೋಲು ಕಂಡಿದ್ದರೆ, ಇನ್ನೊಂದು ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿತ್ತು.
ಆಸ್ಟ್ರೇಲಿಯಾ vs ಪಾಕಿಸ್ತಾನ, ಜೂನ್ 12, Live ಸ್ಕೋರ್‌ಕಾರ್ಡ್
ಸದ್ಯದ ಅಂಕಪಟ್ಟಿಯಲ್ಲಿ ನ್ಯೂಜಿಲ್ಯಾಂಡ್, ಇಂಗ್ಲೆಂಡ್ ಮತ್ತು ಭಾರತದ ಬಳಿಕ ಆಸೀಸ್ 4ನೇ ಸ್ಥಾನದಲ್ಲಿದೆ. ಪಾಕಿಸ್ತಾನ 8ನೇ ಸ್ಥಾನದಲ್ಲಿದೆ. ತಳ ಸ್ಥಾನದಲ್ಲಿರುವುದರಿಂದ ಪಾಕ್‌ಗೂ ಈ ಪಂದ್ಯದ ಪ್ರಮುಖವಾದ್ದು. ಆದರೆ ಕಾಂಗಾರೂ ಪಡೆಯನ್ನು ಸುಲಭವಾಗಿ ಕಟ್ಟಿಹಾಕೋದು ಪಾಕ್‌ನಿಂದ ಸಾಧ್ಯಾನಾ? ಕಾದು ನೋಡಬೇಕಿದೆ. ಪಂದ್ಯ 3 pmಗೆ ಆರಂಭಗೊಳ್ಳಲಿದೆ.
ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಆ್ಯರನ್ ಫಿಂಚ್ (ಸಿ), ಉಸ್ಮಾನ್ ಖವಾಜಾ, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಅಲೆಕ್ಸ್ ಕ್ಯಾರಿ (ವಿಕೆ), ನಾಥನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಆದಂ ಝಂಪಾ.
ಪಾಕಿಸ್ತಾನ ತಂಡ: ಇಮಾಮ್ ಉಲ್ ಹಕ್, ಫಖರ್ ಜಮಾನ್, ಬಾಬರ್ ಅಝಾಮ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಸರ್ಫ್ರಾಜ್ ಅಹ್ಮದ್ (ವಿ.ಕೆ. / ಸಿ), ಆಸಿಫ್ ಅಲಿ, ಶದಾಬ್ ಖಾನ್, ಹಸನ್ ಅಲಿ, ವಹಾಬ್ ರಿಯಾಜ್, ಮೊಹಮ್ಮದ್ ಅಮೀರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications