For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಮಾರ್ಗನ್‌ ಅಬ್ಬರ, ಇಂಗ್ಲೆಂಡ್‌ಗೆ 150 ರನ್‌ಗಳ ಭರ್ಜರಿ ಜಯ

ICC Cricket World Cup: England vs Afghanistan Match 24, Preview

ಮ್ಯಾಂಚೆಸ್ಟರ್‌, ಜೂನ್ 18: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿರುವ ಆತಿಥೇಯ ಇಂಗ್ಲೆಂಡ್‌ ತಂಡ ಮಂಗಳವಾರ ನಡೆದ ಪಂದ್ಯದಲ್ಲಿ ಕ್ರಿಕೆಟ್‌ ಕೂಸು ಅಫಘಾನಿಸ್ತಾನ ವಿರುದ್ಧ 150 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ತಂಡದ ನಾಯಕ ಐಯಾನ್‌ ಮಾರ್ಗನ್‌ (71 ಎಸೆತಗಳಲ್ಲಿ 148 ರನ್‌) ಅವರ ಸಿಡಿಲಬ್ಬರದ ಶತಕ ಮತ್ತು ಜಾನಿ ಬೈರ್‌ಸ್ಟೋವ್‌ (90) ಮತ್ತು ಜೋ ರೂಟ್‌ (88) ಅವರ ಅರ್ಧಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 397/6 ರನ್‌ಗಳ ಶಿಖರ ನಿರ್ಮಿಸಿತು.

ಮಾರ್ಗನ್‌ ತಮ್ಮ ಅದ್ಭುತ ಇನಿಂಗ್ಸ್‌ನಲ್ಲಿ 17 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ ಪಂದ್ಯದ ಇನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಹಾಗೂ ವಿಶ್ವಕಪ್‌ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಚೆಚ್ಚಿದ ವಿಶ್ವ ದಾಖಲೆಯನ್ನು ಬರೆದರು.

ಬಳಿಕ ಗುರಿ ಬೆನ್ನತ್ತಿದ ಅಫಘಾನಿಸ್ತಾನ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 247 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು. ಅಫಘಾನಿಸ್ತಾನ ಹಶ್ಮತ್ತುಲ್ಲಾ ಶಾಹಿದಿ (76) ಅರ್ಧಶತಕ ದಾಖಲಿಸಿ ಗಮನ ಸೆಳೆದರೆ, ಇಂಗ್ಲೆಂಡ್‌ ಪರ ಜೋಫ್ರಾ ಆರ್ಚರ್‌ 52ಕ್ಕೆ 3 ವಿಕೆಟ್‌ ಪಡೆದರು.

ಇಂಗ್ಲೆಂಡ್ vs ಅಫ್ಘಾನಿಸ್ತಾನ, ಜೂನ್ 18, Live ಸ್ಕೋರ್‌ಕಾರ್ಡ್

1
43667

ಸಂಕ್ಷಿಪ್ತ ಸ್ಕೋರ್‌

ಇಂಗ್ಲೆಂಡ್‌: 50 ಓವರ್‌ಗಳಲ್ಲಿ 397/6 (ಜಾನಿ ಬೈರ್‌ಸ್ಟೋವ್‌ 90, ಜೋ ರೂಟ್‌ 88, ಐಯಾನ್‌ ಮಾರ್ಗನ್‌ 148, ಮೊಯೀನ್‌ ಅಲಿ ಔಟಾಗದೆ 31; ಗುಲ್ಬದಿನ್‌ ನೈಬ್‌ 68ಕ್ಕೆ 3).

ಅಫಘಾನಿಸ್ತಾನ: 50 ಓವರ್‌ಗಳಲ್ಲಿ 247/8 (ಗುಲ್ಬದಿನ್‌ ನೈಬ್‌ 37, ರೆಹಮತ್‌ ಶಾ 46, ಹಷ್ಮತುಲ್ಲಾ ಶಾಹಿದಿ 76, ಅಸ್ಗರ್‌ ಅಫ್ಘಾನ್‌ 44, ಜೋಫ್ರಾ ಆರ್ಚರ್‌ 52ಕ್ಕೆ 3, ಆದಿಲ್‌ ರಶೀದ್‌ 66ಕ್ಕೆ 3, ಮಾರ್ಕ್‌ ವುಡ್‌ 40ಕ್ಕೆ 2).

ಅಫಘಾನಿಸ್ತಾನ ತಂಡ: ಹಜರತುಲ್ಲಾ ಝಝಾಯ್, ನೂರ್ ಅಲಿ ಝದ್ರಾನ್, ರೆಹಮತ್ ಶಾ, ಹಶ್ಮತುಲ್ಲಾ ಶಾಹಿದಿ, ಅಸ್ಗರ್ ಅಫ್ಘಾನ್, ಗುಲ್ಬದಿನ್ ನೈಬ್‌ (ಕ್ಯಾಪ್ಟನ್), ಮೊಹಮ್ಮದ್ ನಬಿ, ಇಕ್ರಮ್ ಅಲಿ ಖಿಲ್ (ವಿಕೆಟ್‌ಕೀಪರ್‌), ರಶೀದ್ ಖಾನ್, ಅಫ್ತಾಬ್ ಆಲಂ, ಹಮೀದ್ ಹಸನ್.

ಇಂಗ್ಲೆಂಡ್ ತಂಡ: ಜೇಮ್ಸ್ ವಿನ್ಸ್, ಜಾನಿ ಬೈರ್‌ಸ್ಟೋವ್‌, ಜೋ ರೂಟ್, ಐಯಾನ್ ಮಾರ್ಗನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಕ್ರಿಸ್ ವೋಕ್ಸ್, ಲಿಯಾಮ್ ಪ್ಲಂಕೆಟ್, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಮೊಯೀನ್‌ ಅಲಿ, ಆದಿಲ್ ರಶೀದ್.

{headtohead_cricket_2_95}

Story first published: Tuesday, June 18, 2019, 23:08 [IST]
Other articles published on Jun 18, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+