For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ವಿಂಡೀಸ್ ಎದುರು ಗೆಲ್ಲಲೇಬೇಕಾದ ಒತ್ತಡದಲ್ಲಿ ದಕ್ಷಿಣ ಆಫ್ರಿಕಾ

ICC Cricket World: South Africa vs West Indies, Match 15, Preview

ಸೌತಾಂಪ್ಟನ್, ಜೂನ್ 10: ಬಲಿಷ್ಠ ತಂಡವಾಗಿದ್ದರೂ ವಿಶ್ವಕಪ್‌ನಲ್ಲಿ ಸತತ ಮೂರೂ ಪಂದ್ಯಗಳಲ್ಲೂ ಸೋತು ಅಂಕಪಟ್ಟಿಯ ತಳ ಸೇರಿರುವ ದಕ್ಷಿಣ ಆಫ್ರಿಕಾಕ್ಕೆ ಸೋಮವಾರದ (ಜೂನ್ 10) ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಟಾಸ್ ಗೆದ್ದಿರುವ ವಿಂಡೀಸ್ ಬೌಲಿಂಗ್ ಆಯ್ದುಕೊಂಡಿದೆ.

ವೆಸ್ಟ್ ಇಂಡೀಸ್ ಕೂಡ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಸೋತು ಮತ್ತೊಂದರಲ್ಲಿ ಗೆದ್ದಿದೆ. ಹೀಗಾಗಿ ಅದಕ್ಕೂ ಸೆಮಿಫೈನಲ್‌ ದೃಷ್ಟಿಯಿಂದ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ಗೆಲುವು ಮಹತ್ವದ್ದೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಹೆಚ್ಚಿನ ಆಟಗಾರರು ಗಾಯದ ಸಮಸ್ಯೆಯಲ್ಲಿರುವುದರಿಂದ 4ನೇ ಪಂದ್ಯದ ಗೆಲುವೂ ಸವಾಲಿನದ್ದೇ.

ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ ಪಂದ್ಯ, Live ಸ್ಕೋರ್‌ಕಾರ್ಡ್

1
43658

ಈವರೆಗೆ ಏಕದಿನ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಒಟ್ಟು 6 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ದಕ್ಷಿಣ ಆಫ್ರಿಕಾ 4ರಲ್ಲಿ ಗೆದ್ದಿದ್ದರೆ, ವೆಸ್ಟ್ ಇಂಡೀಸ್ 2 ಗೆಲುವುಗಳನ್ನು ಕಂಡಿತ್ತು. ಸೌತಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ನಡೆಯಲಿರುವ ಇತ್ತಂಡಗಳ ಪಂದ್ಯ 3 pmಗೆ ಆರಂಭಗೊಳ್ಳಲಿದೆ.

ದಕ್ಷಿಣ ಆಫ್ರಿಕಾ ತಂಡ: ಹಾಶಿಮ್ ಆಮ್ಲಾ / ಐಡೆನ್ ಮಾರ್ಕ್ರಮ್, ಕ್ವಿಂಟನ್ ಡಿ ಕಾಕ್ (ವಿಕೆ), ಫಾಫ್ ಡು ಪ್ಲೆಸಿಸ್ (ಸಿ), ರಾಸ್ಸಿ ವ್ಯಾನ್ ಡೆರ್ ಡಸೆನ್, ಜೆ.ಪಿ. ಡುಮಿನಿ, ಡೇವಿಡ್ ಮಿಲ್ಲರ್, ಕ್ರಿಸ್ ಮೊರಿಸ್, ಆಂಡಿಲೆ ಫೆಹ್ಲುಕ್ವೇವೊ, ಕಾಗಿಸೊ ರಬಾಡಾ, ತಾಬ್ರಾಜ್ ಷಾಂಸಿ / ಬೀರನ್ ಹೆಂಡ್ರಿಕ್ಸ್, ಇಮ್ರಾನ್ ತಾಹಿರ್.

ವೆಸ್ಟ್ ಇಂಡೀಸ್ ತಂಡ: ಕ್ರಿಸ್ ಗೇಲ್, ಎವಿನ್ ಲೆವಿಸ್, ಶಾಯ್ ಹೋಪ್ (ವಿಕ್), ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮರ್, ಜಾಸನ್ ಹೋಲ್ಡರ್ (ಸಿ), ಆ್ಯಂಡ್ರೆ ರಸ್ಸೆಲ್, ಕಾರ್ಲೋಸ್ ಬ್ರಾಥ್ವೈಟ್, ಆ್ಯಶ್ಲೆ ನರ್ಸ್, ಶೆಲ್ಡನ್ ಕಾಟ್ರೆಲ್, ಒಶೇನ್ ಥಾಮಸ್.

{headtohead_cricket_6_8}

Story first published: Monday, June 10, 2019, 17:03 [IST]
Other articles published on Jun 10, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+