Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy 2025: ಐಸಿಸಿಯಿಂದ ಪಿಸಿಬಿಗೆ ಗುಡ್ ನ್ಯೂಸ್; ಬಿಸಿಸಿಐ ನಿಲುವೇನು?

ಐಸಿಸಿ ಚಾಂಪಿಯನ್ ಟ್ರೋಫಿ 2025ರ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಇದಕ್ಕಾಗಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯ ಸಿದ್ಧತೆಗಳು ಭರದಿಂದ ಸಾಗಿವೆ. ಈ ಸಿದ್ಧತೆಗಳನ್ನು ಪರಿಶೀಲಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತೃಪ್ತಿ ವ್ಯಕ್ತಪಡಿಸಿದೆ.

ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಸಂಬಂಧಿಸಿದ ಬಾಕಿ ಉಳಿದರುವ ಕೆಲಸವನ್ನು ಬೇಗ ಮುಗಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಐಸಿಸಿ ಗಡುವು ನೀಡಿದೆ. ಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಲು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮೊಹ್ಸಿನ್ ನಖ್ವಿ ಐಸಿಸಿಗೆ ಸಂಪೂರ್ಣ ವಿವರಗಳನ್ನು ಸಲ್ಲಿಸಿದ್ದು, ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಆಯೋಜಿಸಲು ಪಾಕಿಸ್ತಾನ ತನ್ನ ಮೂರು ಕ್ರೀಡಾಂಗಣಗಳನ್ನು (ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ) ನವೀಕರಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ICC expressed satisfaction with the preparations for Champions Trophy 2025 organized by PCB

ಐಸಿಸಿಗೆ ಪಿಸಿಬಿ ಹೇಳಿದ್ದೇನು?

ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಪಿಸಿಬಿ ಕೈಗೊಂಡಿರುವ ಚಾಂಪಿಯನ್ ಟ್ರೋಫಿಯ ಸಿದ್ಧತೆಗಳಿಂದ ಐಸಿಸಿ ತೃಪ್ತವಾಗಿದೆ. ಮುಂದಿನ ವರ್ಷ 2025ರ ಫೆಬ್ರವರಿಯಲ್ಲಿ ಮೆಗಾ ಟೂರ್ನಿ ಪ್ರಾರಂಭವಾಗುವ ಮೊದಲು ಸ್ಟೇಡಿಯಂಗಳು ಸಿದ್ಧವಾಗುತ್ತವೆ ಎಂದು ಐಸಿಸಿಗೆ ಪಿಸಿಬಿ ತಿಳಿಸಿದೆ. ಟೂರ್ನಿಗೆ ಮಾಡಲಾಗುತ್ತಿರುವ ಸಿದ್ಧತೆಗಳು ಮತ್ತು ವ್ಯವಸ್ಥೆಗಳ ಬಗ್ಗೆ ಐಸಿಸಿ ಸ್ವತಃ ಪರಿಶೀಲಿಸಲು ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ನಖ್ವಿ ಐಸಿಸಿಗೆ ವಿನಂತಿಸಿದ್ದಾರೆ.

ಭಾರತದತ್ತ ಎಲ್ಲರ ಕಣ್ಣು

ಪಿಸಿಬಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ಸಜ್ಜಾಗುತ್ತಿರುವಾಗ, ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಹೀಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡವಾದ ಭಾರತವಿಲ್ಲದೆ 2025ರ ಚಾಂಪಿಯನ್ಸ್ ಟ್ರೋಫಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬುದು ಪಾಕಿಸ್ತಾನಕ್ಕೂ ಗೊತ್ತಿರುವ ವಿಷಯ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮುಖ್ಯಸ್ಥ ರಿಚರ್ಡ್ ಗೌಲ್ಡ್ ಅವರು ಭಾರತವಿಲ್ಲದೆ ಐಸಿಸಿ ಟೂರ್ನಿಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಬಿಸಿಸಿಐ ಭಾರತ ತಂಡವನ್ನು ಕಳುಹಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ಘೋಷಿಸಿಲ್ಲ. ಏಕೆಂದರೆ ಭಾರತ ಕೇಂದ್ರ ಸರ್ಕಾರದ ಅನುಮತಿಯ ನಂತರವೇ ತಂಡವನ್ನು ಕಳುಹಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಹೇಳಿದೆ.

ಇತ್ತೀಚೆಗೆ ಬಿಸಿಸಿಐಗೆ ಪಿಸಿಬಿ ಪತ್ರ ಬರೆದಿತ್ತು. ಬಿಸಿಸಿಐ ಬಯಸಿದರೆ, ಪಾಕಿಸ್ತಾನದಲ್ಲಿ ಪಂದ್ಯ ಆಡಿದ ನಂತರ ಭಾರತ ತಂಡವು ದೆಹಲಿ ಅಥವಾ ಚಂಡೀಗಢಕ್ಕೆ ಮರಳುವುದಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪತ್ರ ತಿಳಿಸಿತ್ತು. ಆದರೆ ಈ ಬಗ್ಗೆ ಯೋಚಿಸುವುದಿಲ್ಲ ಎಂದು ಬಿಸಿಸಿಐ ಈಗಾಗಲೇ ನಿರಾಕರಿಸಿದೆ.

Story first published: Tuesday, October 22, 2024, 20:46 [IST]
Other articles published on Oct 22, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+