ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳ ಪೈಕಿ ಒಂದಾಗಿರುವ ಟೀಮ್ ಇಂಡಿಯಾ ಮತ್ತೊಂದು ಫೈನಲ್‌ಗೆ ಪ್ರವೇಶಿಸಿ ಮತ್ತೊಂದು ಸೋಲು ಕಂಡಿದೆ. ಕಳೆದ ಒಂದು ದಶಕದಿಂದ ಟೀಮ್ ಇಂಡಿಯಾದ ಕಥೆ ಇದೇ ಎನ್ನುವಂತಾಗಿದೆ. ಕಳೆದ ಒಂದು ದಶಕದಲ್ಲಿ ಅತಿ ಹೆಚ್ಚು ನಾಕೌಟ್ ಪಂದ್ಯಗಳನ್ನು ಆಡಿದ್ದರೂ ಭಾತ ಒಂದು ಕೂಡ ಟ್ರೋಪಿ ಗೆಲ್ಲು ಸಾಧ್ಯವಾಗಿಲ್ಲ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿಯೂ ಮುಂದುವರಿದಿದ್ದ ಭಾರತ ಮತ್ತೊಂದು ಐಸಿಸಿ ಟೂರ್ನಿಯಲ್ಲಿ ಸೋತು ರನ್ನರ್‌ಅಪ್ ಎನಿಸಿಕೊಂಡಿದೆ.
ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ಅನುಭವಿಸಿದ ಸತತ ಎಡನೇ ಸೋಲಾಗಿದೆ. ಸತತ ಎರಡು ಬಾರಿಯೂ ಈ ಸಾಧನೆ ಮಾಡಿದ್ದರೂ ಭಾರತಕ್ಕೆ ಫೈನಲ್‌ನಲ್ಲಿ ಗೆಲುವಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ. ಈ ಮೂಲಕ ಐಸಿಸಿ ನಾಕೌಟ್ ಟೂರ್ನಿಗಳಲ್ಲಿ ಭಾರತ ತಂಡಕ್ಕೆ ಮತ್ತೊಮ್ಮೆ ಅದೃಷ್ಟ ಕೈಕೊಟ್ಟಿದೆ. ಹಾಗಾಗಿ ಐಸಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ ಫೈನಲ್‌ಗೆ ಪ್ರವೇಶಿಸಿ ಸೋಲು ಕಂಡಿರುವ ತಂಡ ಯಾವುವು? ಅಂಥಾ ಟಾಪ್ ನಾಲ್ಕು ತಂಡಗಳ ಬಗ್ಗೆ ಮಾಹಿತಿ ಇಲ್ಲಿದೆ.

4. ನ್ಯೂಜಿಲೆಂಡ್- 4 ಐಸಿಸಿ ಫೈನಲ್ ಸೋಲು
ನ್ಯೂಜಿಲಂಡ್ ತಂಡ ಈವರೆಗೆ ಯಾವುದೇ ವೈಟ್‌ಬಾಲ್ ವಿಶ್ವಕಪ್ ಟೂರ್ನಿಯನ್ನು ಗೆದ್ದಿಲ್ಲ. ಆದರೆ ಫೈನಲ್‌ವರೆಗೆ ಪ್ರವೇಶಿಸಿ ಚಾಂಪಿಯನ್ ಪಟ್ಟದಿಂದ ಹಲವು ಬಾರಿ ವಂಚಿತವಾಗಿದೆ. ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಚಾಂಪಿಯನ್ ತಂಡವಾಗಿರುವ ನ್ಯೂಜಿಲೆಂಡ್ 2015 ಹಾಗೂ 2019ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಗೆಲುವು ಸಾಧ್ಯವಾಗದೆ ರನ್ನರ್‌ಅಪ್ ಎನಿಸಿಕೊಂಡಿದೆ. ಅದಕ್ಕೂ ಮುನ್ನ 2009ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್‌ನಲ್ಲಿಯೂ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. 2021ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿಯೂ ಫೈನಲ್‌ಗೆ ಪ್ರವೇಶಿಸಿದ್ದು ಅಲ್ಲಿಯೂ ಆಸ್ಟ್ರೇಲಿಯಾ ವಿರುದ್ಧವೇ ಸೋಲು ಕಂಡಿತ್ತು. ಈ ಮೂಲಕ ನಾಲ್ಕು ಐಸಿಸಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕಿವೀಸ್ ಪಡೆ ಸೋಲು ಕಂಡಿದೆ.
3. ಶ್ರೀಲಂಕಾ- 3 ಐಸಿಸಿ ಫೈನಲ್ ಸೋಲು
ಶ್ರೀಲಂಕಾ ತಂಡ ವೈಟ್‌ಬಾಲ್ ಮಾದರಿಯಲ್ಲಿ ಐಸಿಸಿ ಟ್ರೋಫಿ ಗೆದ್ದ ತಂಡಗಳಲ್ಲಿ ಒಂದು. 1996ರಲ್ಲಿ ಏಕದಿನ ವಿಶ್ವಕಪ್, 2014ರ ಟಿ20 ವಿಶ್ವಕಪ್ ಮತ್ತು 2000ನೇ ಇಸವಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ಆದರೆ ಶ್ರೀಲಂಕಾ ಕೂಡ ನಾಲ್ಕು ಬಾರಿ ಐಸಿಸಿ ಟೂರ್ನಿಯ ಫೈನಲ್‌ಗೆ ಪ್ರವೇಶಿಸಿ ಸೋಲು ಕಂಡಿದೆ. 2007 ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದ್ದ ಲಂಕಾ ಆಸ್ಟ್ರೇಲಿಯಾ ಹಾಗೂ ಭಾರತದ ವಿರುದ್ಧ ಸೋಲು ಕಂಡಿತ್ತು. ಇನ್ನು 2009 ಹಾಗೂ 2012ರಲ್ಲಿ ಟಿ20 ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿದ್ದ ಲಂಕಾ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಅನುಭವಿಸಿತ್ತು.
2. ಇಂಗ್ಲೆಂಡ್- 6 ಸೋಲು
ಇತ್ತೀಚಿನ ವರ್ಷದಲ್ಲಿ ಇಂಗ್ಲೆಂಡ್ ತಂಡ ಎಲ್ಲಾ ಮಾದರಿಯಲ್ಲಿಯೂ ಅತ್ಯಂತ ಬಲಿಷ್ಠ ತಂಡ ಎನಿಸಿಕೊಂಡಿದೆ. ಆದರೆ ದುರದೃಷ್ಟ ತಂಡಗಳಲ್ಲಿ ಇಂಗ್ಲೆಂಡ್ ಕೂಡ ಒಂದು ಎನ್ನಬಹುದು. ಇಂಗ್ಲೆಂಡ್ ತಂಡ ಐಸಿಸಿ ಟೂರ್ನಿಯಲ್ಲಿ ಒಟ್ಟು 6 ಬಾರಿ ಫೈನಲ್‌ನಲ್ಲಿ ಸೋಲು ಕಂಡಿದೆ. 1979ರ ಏಕದಿನ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿದ್ದರೆ 1987ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ 1992ರಲ್ಲಿ ಪಾಕಿಸ್ತಾನದ ವಿರುದ್ಧ ಏಕದಿನ ವಿಶ್ವಕಪ್‌ನಲ್ಲಿ ಸೋಲು ಕಂಡಿತ್ತು.
ಇದಲ್ಲದೆ 2004 ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿಯೂ ಸೋಲು ಕಂಡಿತ್ತು. ನಂತರ 2016ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿಯೂ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿತ್ತು. 2019ರ ಏಕದಿನ ವಿಶ್ವಕಪ್‌ನಲ್ಲಿ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ಮೊದಲ ಬಾರಿಗೆ ಇಂಗ್ಲೆಂಡಗ ನನಸು ಮಾಡಿಕೊಂಡಿತು.
1. ಟೀಮ್ ಇಂಡಿಯಾ- 6 ಫೈನಲ್ ಸೋಲು
ಆಸ್ಟ್ರೇಲಿಯಾ ತಂಡವನ್ನು ಹೊರತುಪಡಿಸಿದರೆ ಅತಿ ಹೆಚ್ಚು ಬಾರಿ ಐಸಿಸಿ ಟೂರ್ನಿಯ ಫೈನಲ್‌ಗೆ ಪ್ರವೇಶಿಸಿದ ತಂಡ ಎಂಬ ಹೆಗ್ಗಳಿಕೆಯನ್ನು ಭಾರತ ಹೊಂದಿದೆ. ಭಾರತ ಒಟ್ಟು 11 ಬಾರಿ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಆಡಿದ್ದು ಇದರಲ್ಲಿ 6 ಬಾರಿ ಸೋಲು ಕಂಡಿದೆ. 2003ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋಲು ಅನುಭವಿಸಿತ್ತು. ಇನ್ನು 2000 ಹಾಗೂ 2017ರಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನದ ವಿರುದ್ಧ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋಲು ಕಂಡಿತ್ತು.
ಇನ್ನು 2014ರಲ್ಲಿ ಶ್ರೀಲಂಕಾ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಸೋಲು ಕಂಡಿತ್ತು. ಇದಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಎರಡು ಆವೃತ್ತಿಯಲ್ಲಿಯೂ ಫೈನಲ್‌ಗೆ ಪ್ರವೇಶ ಪಡೆದುಕೊಂಡ ಟೀಮ್ ಇಂಡಿಯಾ ಎರಡು ಆವೃತ್ತಿಯಲ್ಲಿಯೂ ಗೆಲುವು ಸಾಧಿಸಲು ವಿಫಲವಾಗಿದೆ. ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದ್ದರೆ ಎರಡನೇ ಆವೃತ್ತಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾಗೆ ಶರಣಾಗಿದೆ.