For Quick Alerts
ALLOW NOTIFICATIONS  
For Daily Alerts
 

ರಮೀಜ್‌ ರಾಜಾ ಬಿಡುಗಡೆ ಮಾಡಿದ ಮ್ಯಾಚ್ ರೆಫರಿ ದಾಖಲೆಯ ಅಸಲಿಯತ್ತು ಏನು?

ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಬಹು ಚರ್ಚೆಯಾಗುತ್ತಿರುವ ವಿಷಯ ಹ್ಯಾಂಡ್‌ ಶೇಕ್. ಭಾರತ ಹಾಗೂ ಪಾಕ್‌ ನಡುವಣ ಪಂದ್ಯದ ವೇಳೆ ನಡೆದ ಆ ಒಂದು ಘಟನೆ ಇಡೀ ವಿಶ್ವದ ಗಮನ ಸೆಳೆಯಿತು. ಟೀಮ್ ಇಂಡಿಯಾ ಆಟಗಾರರು ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದ ಬಳಿಕ ಪಾಕ್‌ ಆಟಗಾರರೊಂದಿಗೆ ಕೈ ಕುಲುಕದೇ ಇರುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಐಸಿಸಿಗೆ ದೂರನ್ನು ಸಹ ನೀಡಿದೆ.

ಟೀಮ್ ಇಂಡಿಯಾ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಆರೋಪಿಸಿ ಪಿಸಿಬಿ ದೂರು ನೀಡಿತ್ತು. ಅಲ್ಲದೆ ಭಾರತ ಹಾಗೂ ಪಾಕ್‌ ನಡುವಣ ಪಂದ್ಯಕ್ಕೆ ಮ್ಯಾಚ್ ರೆಫ್ರಿ ಆಂಡಿ ಪೈಕ್ರಾಫ್ಟ್ ಪಕ್ಷ ಪಾತಿ. ಇವರು ಟೀಮ್ ಇಂಡಿಯಾವನ್ನು ಹೆಚ್ಚಾಗಿ ಬೆಂಬಲಿಸುತ್ತಾರೆ. ಇದೇ ಕಾರಣಕ್ಕೆ ಅವರನ್ನು ಟೂರ್ನಿಯಿಂದ ವಜಾ ಮಾಡಬೇಕು ಎಂದು ಪಿಸಿಬಿ, ಐಸಿಸಿಗೆ ದೂರು ನೀಡಿತ್ತು. ಆದರೆ ಪಾಕ್‌ ಬೇಡಿಕೆಗೆ ಐಸಿಸಿ ಸೊಪ್ಪು ಹಾಕಲಿಲ್ಲ. ಆದರೆ ಸಮಾಧಾನ ಮಾಡುವ ಕೆಲಸವನ್ನು ಮಾಡಿತ್ತು.

ICC Match Referee Bias Claims Debunked by Data

ಪಾಕಿಸ್ತಾನ ಹಾಗೂ ಯುಎಇ ನಡುವಣ ಪಂದ್ಯಕ್ಕೆ ಮ್ಯಾಚ್‌ ರೆಫ್ರಿ ಅವರನ್ನು ಐಸಿಸಿ ಬದಲಿಸಿತ್ತು. ಅಲ್ಲದೆ ಆಂಡಿ ಪೈಕ್ರಾಫ್ಟ್ ಪಾಕಿಸ್ತಾನದ ಯಾವುದೇ ಪಂದ್ಯಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿತ್ತು. ಐಸಿಸಿ ತಮ್ಮ ಬೇಡಿಕೆಯನ್ನು ಈಡೇರಿಸುವಲ್ಲಿ ಹಿಂದೇಟು ಹಾಕಿದ್ದಕ್ಕೆ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಸಹ ಯುಎಇ ವಿರುದ್ಧ ಪಂದ್ಯವನ್ನು ಆಡಲು ನಿರಾಕರಿಸಿತ್ತು. ಅಲ್ಲದೆ ಅಂಗಳಕ್ಕೆ ಇಳಿಯದಿರಲು ತೀರ್ಮಾನಿಸಿತ್ತು. ಆದರೆ ಬಳಿಕ ಪಾಕ್‌ ಅಂಗಳಕ್ಕೆ ಇಳಿದು ಅಚ್ಚರಿ ಮೂಡಿಸಿತು.

ರಮೀಜ್‌ ರಾಜಾ ಹೇಳಿದ್ದೇನು?

ಹ್ಯಾಂಡ್ ಶೇಕ್ ಹಾಗೂ ಭಾರತ-ಪಾಕ್‌ ನಡುವಣ ಪಂದ್ಯಕ್ಕೆ ಸಂಬಂಧಿಸಿದಂತೆ ಮಾಜಿ ಆಟಗಾರ ರಮೀಜ್ ರಾಜಾ ದೊಡ್ಡ ಹೇಳಿಕೆ ನೀಡಿದ್ದಾರೆ. ಪಿಸಿಬಿ ಮಾಜಿ ಮುಖ್ಯಸ್ಥ ರಮೀಜ್‌ ರಾಜಾ ರೆಫರಿ ಆಂಡಿ ಪೈಕ್ರಾಫ್ಟ್ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ, ಅದು ದಾಖಲೆಯಲ್ಲಿ ಬಹಿರಂಗವಾಗಿದೆ. ಪೈಕ್ರಾಫ್ಟ್ ಅವರು ಭಾರತೀಯ ತಂಡವನ್ನು ಹೆಚ್ಚು ಬೆಂಬಲಿಸುತ್ತಾರೆ ಎಂದು ಆರೋಪಿಸಿದ್ದಾರೆ. ಪೈಕ್ರಾಫ್ಟ್ ಯಾವಾಗಲೂ ಭಾರತೀಯ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಭಾರತ ಪಂದ್ಯ ಆಡುವಾಗ ಇವರನ್ನೇ ಹೆಚ್ಚಾಗಿ ನೋಡಿದ್ದೇನೆ ಎಂದು ರಮೀಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದ ವಿರುದ್ಧದ ಪಂದ್ಯದಲ್ಲಿ ನಾನು ಹೆಚ್ಚಾಗಿ ಟಾಸ್‌ ವೇಳೆ ಮೈದಾನದಲ್ಲಿ ಇರುತ್ತಿದೆ. ಇನ್ನು ಇದು ವೇಳೆ ಪೈಕ್ರಾಫ್ಟ್ ಅಲ್ಲಿ ಇರುತ್ತಿದ್ದರು. ಡಾಟಾಗಳ ಮೇಲೆ ಕಣ್ಣು ಆಡಿಸಿದಾಗ ಪೈಕ್ರಾಫ್ಟ್ ಭಾರತದ ಪಂದ್ಯಗಳಿಗೆ 90 ಬಾರಿ ರೆಫರಿಯಾಗಿದ್ದಾರೆ ಎಂದು ತೋರಿಸುತ್ತದೆ. ಇದು ನನಗೆ ತುಂಬಾ ವಿಚಿತ್ರವೆನಿಸುತ್ತದೆ ಎಂದು ರಮೀಜ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಮೀಜ್‌ ರಾಜಾ ಮಾಹಿತಿಯನ್ನು ಡೇಟಾಗಳೊಂದಿಗೆ ತುಲನೆ ಮಾಡಿದಾಗ ಇದು ತಪ್ಪು ಎಂದು ಸಾಬೀತು ಆಗುತ್ತದೆ. ಪೈಕ್ರಾಫ್ಟ್ ಭಾರತದ 124 ಪಂದ್ಯಗಳಲ್ಲಿ ಕಾಣಿಸಿಕೊಂಡರೆ, ಪಾಕ್‌ನ 102 ಪಂದ್ಯಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಈ ಅಂಕಿ ಅಂಶಗಳನ್ನು ನೋಡಿದಾಗ ಪೈಕ್ರಾಫ್ಟ್ ಪಕ್ಷಪಾತಿ ಎನ್ನುವ ವಾದ ಸುಳ್ಳು ಎಂದು ಸಾಬೀತಾಗುತ್ತದೆ.

Story first published: Thursday, September 18, 2025, 14:04 [IST]
Other articles published on Sep 18, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+