ICC ODI Ranking: ಏಕದಿನ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡ ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್
ಸದ್ಯ ಭಾರತದಲ್ಲಿ 2023ರ ಐಪಿಎಲ್‌ನ 16ನೇ ಋತು ಆರಂಭವಾಗಿದ್ದು, ಭಾರತ ಸೇರಿದಂತೆ ವಿಶ್ವ ಪ್ರಮುಖ ಆಟಗಾರರು ಶ್ರೀಮಂತ ಟಿ20 ಲೀಗ್‌ನಲ್ಲಿ ಆಡುತ್ತಿದ್ದಾರೆ. ಇದೇ ವೇಳೆ ಬುಧವಾರ, ಏಪ್ರಿಲ್ 5ರಂದು ಐಸಿಸಿ ಏಕದಿನ ರ್‍ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ.
ಇತ್ತೀಚಿನ ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನಕ್ಕಾಗಿ ಭಾರತದ ಶುಭ್ಮನ್ ಗಿಲ್ ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ 738 ಅಂಕಗಳೊಂದಿಗೆ 4ನೇ ಸ್ಥಾನ ತಲುಪಿದ್ದು, ನಂ.3 ಬ್ಯಾಟರ್ ಪಾಕಿಸ್ತಾನದ ಇಮಾಮ್-ಉಲ್-ಹಕ್ ಅವರಿಗಿಂತ ಕೇವಲ 2 ಅಂಕ ಕಡಿಮೆ ಹೊಂದಿದ್ದಾರೆ.

ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಅವರು 4ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿತ ಕಂಡ ನಂತರ ಶುಭ್ಮನ್ ಗಿಲ್ ಏರಿಕೆ ಕಂಡರು. ಕ್ವಿಂಟನ್ ಡಿ ಕಾಕ್ ಅವರ ಇಳಿಕೆ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಲಾಭ ತಂದುಕೊಟ್ಟಿದ್ದು, 6ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.
ಕಳೆದ ತಿಂಗಳು ತವರಿನಲ್ಲಿ ಭಾರತ ತಂಡ 2-1 ಅಂತರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತ ವೇಳೆ 3 ಪಂದ್ಯಗಳಲ್ಲಿ ಶುಭ್ಮನ್ ಗಿಲ್ ಕೇವಲ 57 ರನ್ ಗಳಿಸಿದರು. ಆದರೂ, ಆರಂಭಿಕ ಬ್ಯಾಟರ್ 50-ಓವರ್ ಸ್ವರೂಪದಲ್ಲಿ ಉತ್ತಮ ರೂಪದಲ್ಲಿದ್ದರು. ಈ ವರ್ಷ ಶುಭ್ಮನ್ ಗಿಲ್ 3 ಶತಕಗಳನ್ನು ಗಳಿಸಿದ್ದಾರೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ಪ್ರಸಕ್ತ ವರ್ಷದ ಏಕದಿನ ಪಂದ್ಯಗಳಲ್ಲಿ 2 ಶತಕ ಮತ್ತು ಏಕೈಕ ಅರ್ಧಶತಕದೊಂದಿಗೆ 427 ರನ್ ಗಳಿಸಿದ್ದಾರೆ.
ಭಾರತದ ತಂಡದ ನಾಯಕ ರೋಹಿತ್ ಶರ್ಮಾ 8ನೇ ಸ್ಥಾನದಲ್ಲಿ ಮುಂದುವರೆದಿದ್ದು, ಅಗ್ರ 10ರಲ್ಲಿ ಭಾರತದ ಮೂವರು ಬ್ಯಾಟ್ಸ್‌ಮನ್‌ಗಳು ಸ್ಥಾನ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ 41ನೇ ಸ್ಥಾನ ತಲುಪಲು 13 ಸ್ಥಾನಗಳ ಏರಿಕೆ ಕಂಡಿದ್ದಾರೆ ಮತ್ತು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 16 ಸ್ಥಾನ ಏರಿಕೆ ಕಂಡು 32ನೇ ಸ್ಥಾನ ತಲುಪಿದ್ದಾರೆ.
ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾವು ನೆದರ್ಲ್ಯಾಂಡ್ಸ್ ವಿರುದ್ಧ 2-0 ಅಂತರದಿಂದ ದಕ್ಷಿಣ ಆಫ್ರಿಕಾ ಸೋಲಿಸಿತು.
ಇದೇ ವೇಳೆ ನೆದರ್ಲೆಂಡ್ಸ್ ಬ್ಯಾಟರ್‌ಗಳು ಸಹ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದರು. ಮ್ಯಾಕ್ಸ್ ಒ'ಡೌಡ್ 78ನೇ ಸ್ಥಾನದಿಂದ 75ನೇ ಸ್ಥಾನ, ವಿಕ್ರಮಜಿತ್ ಸಿಂಗ್ 119ನೇ ಸ್ಥಾನದಿಂದ 109ನೇ ಸ್ಥಾನ ಗಳಿಸಿದರು.
ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕ (ಏಪ್ರಿಲ್ 5ರಂತೆ)
1. ಬಾಬರ್ ಅಜಂ - ಪಾಕಿಸ್ತಾನ - 887 ಅಂಕಗಳು
2. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್- ದಕ್ಷಿಣ ಆಫ್ರಿಕಾ - 777 ಅಂಕಗಳು
3. ಇಮಾಮ್-ಉಲ್-ಹಕ್ - ಪಾಕಿಸ್ತಾನ - 740 ಅಂಕಗಳು
4. ಶುಭ್ಮನ್ ಗಿಲ್ - ಭಾರತ - 738 ಅಂಕಗಳು
5. ಡೇವಿಡ್ ವಾರ್ನರ್ - ಆಸ್ಟ್ರೇಲಿಯಾ - 726 ಅಂಕಗಳು
6. ವಿರಾಟ್ ಕೊಹ್ಲಿ - ಭಾರತ - 719 ಅಂಕಗಳು
7. ಕ್ವಿಂಟನ್ ಡಿ ಕಾಕ್ - ದಕ್ಷಿಣ ಆಫ್ರಿಕಾ - 718 ಅಂಕಗಳು
8. ರೋಹಿತ್ ಶರ್ಮಾ - ಭಾರತ - 707 ಅಂಕಗಳು
9. ಸ್ಟೀವ್ ಸ್ಮಿತ್ - ಆಸ್ಟ್ರೇಲಿಯಾ - 702 ಅಂಕಗಳು
10. ಫಖರ್ ಜಮಾನ್ - ಪಾಕಿಸ್ತಾನ - 699 ಅಂಕಗಳು

ಇನ್ನು ಬೌಲಿಂಗ್ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ತನ್ನ ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದು, ನಂ.1 ಶ್ರೇಯಾಂಕದ ಬೌಲರ್ ಆಗಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಇದ್ದಾರೆ. ಎರಡನೇ ಸ್ಥಾನದ ಸಮೀಪದಲ್ಲಿ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಮೂರನೇ ಸ್ಥಾನ ಪಡೆದಿದ್ದಾರೆ.
ನ್ಯೂಜಿಲೆಂಡ್‌ನ ಮ್ಯಾಟ್ ಹೆನ್ರಿ ಬೌಲಿಂಗ್ ಶ್ರೇಯಾಂಕದಲ್ಲಿ 10ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿಕೆ ಕಂಡರು. ಇದೇ ವೇಳೆ ದಕ್ಷಿಣ ಆಫ್ರಿಕಾದ ಸಿಸಂಡಾ ಮಗಾಲಾ 35 ಸ್ಥಾನಗಳ ಜಿಗಿತದೊಂದಿಗೆ ತಮ್ಮ ವೃತ್ತಿಜೀವನದ ಅತ್ಯುತ್ತಮ165ನೇ ಸ್ಥಾನ ತಲುಪಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications