For Quick Alerts
ALLOW NOTIFICATIONS  
For Daily Alerts
 

ICC Rankings: ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ; 2023ರ ವಿಶ್ವಕಪ್‌ಗೆ ನಂ.1 ಆಗಿ ಪ್ರವೇಶಿಸುವ ತಂಡ ಯಾವುದು?

ಭಾನುವಾರ, ಸೆಪ್ಟೆಂಬರ್ 18ರಂದು ನಡೆದ 2023ರ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾ ತಂಡವನ್ನು 10 ವಿಕೆಟ್‌ಗಳಿಂದ ಹೀನಾಯವಾಗಿ ಸೋಲಿಸಿತು ಮತ್ತು 8ನೇ ಬಾರಿಗೆ ಏಷ್ಯಾ ಕಪ್ ಟ್ರೋಫಿ ಎತ್ತಿ ಹಿಡಿಯಿತು.

ಆದರೆ, ತಮ್ಮ ಕೊನೆಯ ಸೂಪರ್ 4 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 6 ರನ್‌ಗಳಿಂದ ಸೋತ ಕಾರಣ ಐಸಿಸಿ ಏಕದಿನ ತಂಡಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಏರಲು ಟೀಮ್ ಇಂಡಿಯಾ ವಿಫಲವಾಗಿದೆ.

ICC ODI Rankings: India, Pakistan, Australia: Which Team Will Enter The 2023 World Cup As No.1?

ಇನ್ನು ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸತತ ಮೂರು ಏಕದಿನ ಪಂದ್ಯಗಳನ್ನು ಸೋತು ಐದು ಪಂದ್ಯಗಳ ಸರಣಿಯನ್ನು 2-3 ಅಂತರದಲ್ಲಿ ಕಳೆದುಕೊಂಡಿದ್ದಲ್ಲದೆ, ಐಸಿಸಿ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಿತು.

ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ 2023ರ ಏಷ್ಯಾ ಕಪ್ ಫೈನಲ್ ತಲುಪಲು ವಿಫಲವಾಗಿದ್ದರೂ, ಭಾರತಕ್ಕಿಂತ ಕಡಿಮೆ ಪಂದ್ಯಗಳನ್ನು ಆಡಿದ ಕಾರಣಕ್ಕಾಗಿ, ಭಾರತದೊಂದಿಗೆ 115 ರೇಟಿಂಗ್ ಪಾಯಿಂಟ್‌ಗಳ ಮಟ್ಟದಲ್ಲಿ ನಂ.1 ಶ್ರೇಯಾಂಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಸೋತ ನಂತರ ಆಸ್ಟ್ರೇಲಿಯಾ ತಂಡ ಕೂಡ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವನ್ನು ಕಳೆದುಕೊಂಡಿದೆ.

ICC ODI Rankings: India, Pakistan, Australia: Which Team Will Enter The 2023 World Cup As No.1?

ದಕ್ಷಿಣ ಆಫ್ರಿಕಾ ಪ್ರಭಾವಶಾಲಿಯಾಗಿ ಪುನರಾಗಮನ ಮಾಡುವ ಮುನ್ನ ಆಸೀಸ್ ಸರಣಿಯಲ್ಲಿ 2-0 ಮುನ್ನಡೆಯಲ್ಲಿತ್ತು. ಆದರೆ, ಭಾನುವಾರದಂದು ಸರಣಿ ವಿಜಯವನ್ನು ಪೂರ್ಣಗೊಳಿಸಲು ಹರಿಣ ಪಡೆ ಸತತ ಮೂರು ಪಂದ್ಯಗಳನ್ನು ಗೆದ್ದುಕೊಂಡಿತು.

ಫೈನಲ್‌ಗೆ ಮುಂಚಿತವಾಗಿ ಬಾಂಗ್ಲಾದೇಶದ ವಿರುದ್ಧದ ಸೋಲು ಭಾರತಕ್ಕೆ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವನ್ನು ಹಾಳು ಮಾಡಿಕೊಂಡಿದೆ. ಅಲ್ಲದೆ ಶ್ರೀಲಂಕಾ ವಿರುದ್ಧ ಕೇವಲ ಆರು ಓವರ್‌ಗಳಲ್ಲಿ ದಾಖಲೆಯ ಗೆಲುವು ಪಡೆದರೂ ಸಹ ಅಗ್ರಸ್ಥಾನಕ್ಕೆ ಏರಲು ಸಾಧ್ಯವಾಗಲಿಲ್ಲ.

2023ರ ಐಸಿಸಿ ಏಕದಿನ ವಿಶ್ವಕಪ್ ಮೊದಲು ನಂ.1 ಶ್ರೇಯಾಂಕವನ್ನು ತಲುಪಲು ಆಸ್ಟ್ರೇಲಿಯಾ, ಭಾರತ ಮತ್ತು ಪಾಕಿಸ್ತಾನ ನಡುವೆ ಪೈಪೋಟಿ ಏರ್ಪಟ್ಟಿದ್ದು, ಅಗ್ರಸ್ಥಾನಕ್ಕೇರಲು ಏನು ಮಾಡಬೇಕೆಂಬುದು ಇಲ್ಲಿದೆ.

ಆಸ್ಟ್ರೇಲಿಯಾ - 3ನೇ ಶ್ರೇಯಾಂಕ; ಪ್ರಸ್ತುತ ರೇಟಿಂಗ್: 113

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋತ ನಂತರ ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯ ತಂಡ ಐಸಿಸಿ ನಂ.1 ಶ್ರೇಯಾಂಕದ ತಂಡವಾಗಲು ಸದ್ಯಕ್ಕೆ ಕಷ್ಟಸಾಧ್ಯ.

ICC ODI Rankings: India, Pakistan, Australia: Which Team Will Enter The 2023 World Cup As No.1?

ವಿಶ್ವಕಪ್‌ನಲ್ಲಿ ನಂ.1 ಶ್ರೇಯಾಂಕದ ತಂಡವಾಗಿ ಹೋಗಲು ಆಸ್ಟ್ರೇಲಿಯಾ ಭಾರತ ವಿರುದ್ಧದ ಏಕದಿನ ಸರಣಿಯನ್ನು ವೈಟ್‌ವಾಶ್ ಮಾಡಬೇಕಾಗುತ್ತದೆ. ಸೆಪ್ಟೆಂಬರ್ 22, ಸೆಪ್ಟೆಂಬರ್ 24, ಸೆಪ್ಟೆಂಬರ್ 27ರಂದು ಮೂರು ಪಂದ್ಯಗಳು ನಡೆಯಲಿವೆ.

ಆದಾಗ್ಯೂ, ಆಸ್ಟ್ರೇಲಿಯಾ ಎರಡು ಗೆಲುವಿನೊಂದಿಗೆ ಸರಣಿಯನ್ನು ಪ್ರಾರಂಭಿಸಿದರೆ, ಕನಿಷ್ಠ ಅಂತಿಮ ಏಕದಿನ ಪಂದ್ಯದವರೆಗೆ ಅಗ್ರ ಶ್ರೇಯಾಂಕದಲ್ಲಿರುತ್ತಾರೆ.

ಈ ತಿಂಗಳ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಆಸ್ಟ್ರೇಲಿಯಾದ ಮೂರು ಪಂದ್ಯಗಳ ಏಕದಿನ ಸರಣಿಯು, ವಿಶ್ವಕಪ್‌ನ ಆರಂಭದಲ್ಲಿ ಯಾರು ಅಗ್ರ ಶ್ರೇಯಾಂಕವನ್ನು ಹೊಂದಿದ್ದಾರೆ ಎಂಬುದರ ಕುರಿತು ಪ್ರಮುಖವಾಗಿರುತ್ತದೆ.

ಭಾರತ - 2ನೇ ಶ್ರೇಯಾಂಕ; ಪ್ರಸ್ತುತ ರೇಟಿಂಗ್: 115

ಸೆಪ್ಟೆಂಬರ್ 22ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಸರಣಿ ಗೆಲುವು ಸಾಧಿಸಿದರೆ ಭಾರತ ತಂಡ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರುವ ಸಾಧ್ಯತೆ ಇದೆ.

ವಾಸ್ತವವಾಗಿ, ಮೊದಲ ಏಕದಿನ ಪಂದ್ಯದಲ್ಲಿನ ಗೆಲುವು ಭಾರತ ತಂಡ ಪಾಕಿಸ್ತಾನವನ್ನು ಹಿಂದಿಕ್ಕಲಿದೆ. ಆಗ ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ನಂ.1 ಶ್ರೇಯಾಂಕದ ತಂಡವಾಗಲಿದೆ.

ರೋಹಿತ್ ಶರ್ಮಾ ಅವರ ತಂಡವು ಅದ್ಭುತ ಏಷ್ಯಾ ಕಪ್ ಗೆಲುವಿನಿಂದ ಹೊರಬರುತ್ತಿದೆ. ಮೊಹಾಲಿಯಲ್ಲಿ ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಶುಕ್ರವಾರದ ವೇಳೆಗೆ ನಂ.1 ಸ್ಥಾನವನ್ನು ತಲುಪಲಿದೆ.

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು ಕಳೆದುಕೊಂಡರೆ, ಪಾಕಿಸ್ತಾನ ತಂಡ ವಿಶ್ವಕಪ್‌ನಲ್ಲಿ ಅಗ್ರ ಶ್ರೇಯಾಂಕದ ತಂಡವಾಗಿ ಉಳಿಯಲಿದೆ. ಇದಕ್ಕೆ ವ್ಯತಿರಿಕ್ತವಾಗಿ, ಆಸ್ಟ್ರೇಲಿಯಾ ವಿರುದ್ಧ 3-0 ಸೋತರೆ ಭಾರತ ಮೂರನೇ ಸ್ಥಾನಕ್ಕೆ ಕುಸಿಯುತ್ತದೆ ಮತ್ತು ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರುತ್ತದೆ ಎಂಬುದು ಗಮನಾರ್ಹ.

ಪಾಕಿಸ್ತಾನ - ಮೊದಲ ಸ್ಥಾನ; ಪ್ರಸ್ತುತ ರೇಟಿಂಗ್: 115

ಏಷ್ಯಾ ಕಪ್‌ನಲ್ಲಿ ತಮ್ಮ ಅಂತಿಮ ಸೂಪರ್ 4 ಪಂದ್ಯವನ್ನು ಶ್ರೀಲಂಕಾ ವಿರುದ್ಧ ಸೋತ ಬಳಿಕ ವಿಶ್ವಕಪ್‌ಗೆ ಮುನ್ನ ಪಾಕಿಸ್ತಾನದ ನಂ.1 ಶ್ರೇಯಾಂಕವನ್ನು ಪಡೆಯುವ ಸಾಧ್ಯತೆಗಳು ಭಾರಿ ಕುಸಿತವನ್ನು ಕಂಡವು.

ವಿಶ್ವಕಪ್‌ಗೆ ಮುನ್ನ ಪಾಕಿಸ್ತಾನಕ್ಕೆ ಯಾವುದೇ ಅಧಿಕೃತ ಏಕದಿನ ಪಂದ್ಯಗಳನ್ನು ನಿಗದಿಪಡಿಸಲಾಗಿಲ್ಲ. ನಂ.1 ಶ್ರೇಯಾಂಕದೊಂದಿಗೆ ಪಂದ್ಯಾವಳಿಯನ್ನು ಪ್ರವೇಶಿಸುವ ಅವರ ಭರವಸೆಯು ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯ ಮೇಲೆ ಅವಲಂಬಿತವಾಗಿರುತ್ತದೆ.

ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಯಾರೇ ಸರಣಿ ಜಯಿಸಿದರೂ ಅಗ್ರಸ್ಥಾನಕ್ಕೇರುತ್ತಾರೆ. ಇದರಿಂದ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಬೀಳಲಿದೆ. ವಿಶ್ವಕಪ್‌ಗೆ ಮುನ್ನ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳಲು ಮೂರೂ ತಂಡಗಳು ಎದುರು ನೋಡುತ್ತಿವೆ.

Story first published: Monday, September 18, 2023, 13:38 [IST]
Other articles published on Sep 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+