
ಬುಧವಾರ, ಮಾರ್ಚ್ 22ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಇತ್ತೀಚಿನ ಏಕದಿನ ಬೌಲಿಂಗ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅಗ್ರಸ್ಥಾನದಿಂದ ಕೆಳಗಿಳಿದಿದ್ದಾರೆ.
ಕಳೆದ 10 ತಿಂಗಳುಗಳಿಂದ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಜನವರಿ ಅಂತ್ಯದಲ್ಲಿ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್ ಅಗ್ರಸ್ಥಾನಕ್ಕೇರಿದ್ದರು.
ಆದರೆ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಅವರಿಂದ ದಂಡನೆಗೆ ಒಳಗಾದ ನಂತರ ಬೌಲಿಂಗ್‌ನಲ್ಲಿ ತಮ್ಮ ನಂ.1 ಸ್ಥಾನವನ್ನು ಕಳೆದುಕೊಂಡು ಮೂರನೇ ಸ್ಥಾನಕ್ಕೆ ಇಳಿದರು.
ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 118 ರನ್‌ಗಳ ಗುರಿಯನ್ನು ಪ್ರವಾಸಿ ಆಸ್ಟ್ರೇಲಿಯಾ ತಂಡದ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಷ್ ಜೋಡಿ ಮೊಹಮ್ಮದ್ ಸಿರಾಜ್ ಅವರ ಮೂರು ಓವರ್‌ಗಳಲ್ಲಿ 37 ರನ್ ಬಾರಿಸಿದರು.

ಐಸಿಸಿ ರ್‍ಯಾಂಕಿಂಗ್‌ನಲ್ಲಿ ಬದಲಾವಣೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿರುವ ಐಸಿಸಿ, ಗಾಯಗೊಂಡಿರುವ ಜೋಶ್ ಹ್ಯಾಝಲ್‌ವುಡ್ ಅವರು ಇತ್ತೀಚಿನ ಐಸಿಸಿ ಪಟ್ಟಿಯಲ್ಲಿ ಅಗ್ರ ಏಕದಿನ ಬೌಲರ್ ಆಗಿ ತನ್ನ ಸ್ಥಾನವನ್ನು ಮರಳಿ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.
"ಭಾರತದಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಆಡದ ಆಸ್ಟ್ರೇಲಿಯಾದ ವೇಇ ಜೋಶ್ ಹ್ಯಾಝಲ್‌ವುಡ್ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನವನ್ನು ಮರಳಿ ಪಡೆದಿದ್ದಾರೆ. ನ್ಯೂಜಿಲೆಂಡ್ ಎಡಗೈ ಆಟಗಾರ ಟ್ರೆಂಟ್ ಬೌಲ್ಟ್ ಎರಡನೇ ಸ್ಥಾನದಲ್ಲಿದ್ದಾರೆ".
"ಇನ್ನು ಮೊಹಮ್ಮದ್ ಸಿರಾಜ್ ಅವರು ಅತ್ಯುತ್ತಮ ಫಾರ್ಮ್‌ನಲ್ಲಿರುವ ವೇಗಿ ಮಿಚೆಲ್ ಸ್ಟಾರ್ಕ್ ಅವರೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ," ಎಂದು ಐಸಿಸಿ ಹೇಳಿಕೆಯಲ್ಲಿದೆ.

ಐಸಿಸಿ ಪುರುಷರ ಏಕದಿನ ಬೌಲಿಂಗ್ ರ್‍ಯಾಂಕಿಂಗ್
1. ಜೋಶ್ ಹ್ಯಾಝಲ್‌ವುಡ್
2. ಟ್ರೆಂಟ್ ಬೌಲ್ಟ್
3. ಮೊಹಮ್ಮದ್ ಸಿರಾಜ್
4. ಮಿಚೆಲ್ ಸ್ಟಾರ್ಕ್
5. ರಶೀದ್ ಖಾನ್
6. ಶಕೀಬ್ ಅಲ್ ಹಸನ್
7. ಶಾಹೀನ್ ಶಾ ಆಫ್ರಿದಿ
8. ಮುಜೀಬ್ ಉರ್ ರೆಹಮಾನ್
9. ಆಡಮ್ ಝಂಪಾ
10. ಮೊಹಮ್ಮದ್ ನಬಿ
ಗಾಯಾಳು ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಎಲ್ಲಾ ಮೂರು ಸ್ವರೂಪದ ಆಟಗಳಲ್ಲಿ ಭಾರತ ತಂಡದ ಪ್ರಮುಖ ಬೌಲರ್ ಆಗಿದ್ದಾರೆ. ಭಾರತದಲ್ಲಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್‌ಗಾಗಿ ಮೊಹಮ್ಮದ್ ಶಮಿ ಅವರ ಜೊತೆಗೆ ಸಿರಾಜ್ ಭಾರತದ ಪ್ರಮುಖ ವೇಗಿಯಾಗುತ್ತಾರೆ ಎಂದು ಅಂದಾಜಿಸಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಚೊಚ್ಚಲ ಕ್ರಿಕೆಟ್ ಪ್ರವೇಶ ಮಾಡಿದಾಗ ಮೊಹಮ್ಮದ್ ಸಿರಾಜ್ ಹೆಚ್ಚು ರನ್ ಬಿಟ್ಟುಕೊಡುತ್ತಿದ್ದರು. ಇತ್ತೀಚಿನ ದಿನಗಳ ವೈಟ್‌ಬಾಲ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ವಿಕೆಟ್ ಕಬಳಿಸುವಲ್ಲಿಯೂ ಸಫಲರಾಗಿದ್ದಾರೆ.