ODI World Cup Prize Money: ವಿಶ್ವಕಪ್ ಗೆದ್ದವರಿಗೆ ಹಾಗೂ ರನ್ನರ್‌ಅಪ್‌ಗೆ ಸಿಗುವ ಮೊತ್ತ ಎಷ್ಟು ಗೊತ್ತಾ!?
ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಈಗ ಅಂತಿಮ ಘಟ್ಟವನ್ನು ತಲುಪಿದೆ. ಇನ್ನು ಕೇವಲ ಮೂರು ಪಂದ್ಯಗಳು ಮಾತ್ರವೇ ಬಾಕಿಯಿದ್ದು ಯಾರು ಚಾಂಪಿಯನ್ ಎನ್ನುವುದು ಅಧಿಕೃತವಾಗಲಿದೆ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಮಾತ್ರವೇ ಬಾಕಿಯಿದ್ದು ಭಾರತ ಸೇರಿದಂತೆ ಒಟ್ಟು ನಾಲ್ಕು ತಂಡಗಳ ನಡುವೆ ಈ ಪ್ರಶಸ್ತಿಗಾಗಿ ಕಾದಾಟ ನಡೆಯಲಿದೆ.
ಒಟ್ಟು 10 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಆರು ತಂಡಗಲು ಹೊರಬಿದ್ದಿದೆ. ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಈ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಸೆಮಿಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಎದುರಿಸಿದರೆ ಎರಡನೇ ಸೆಮಿಫೈನಲ್ ಪಂದ್ಯ ದಕ್ಷಿಣ ಆಪ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ಮಧ್ಯೆ ನಡೆಯಲಿದೆ.

ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳ ಪೈಕಿ ಒಂದಾಗಿರುವ ಕ್ರಿಕೆಟ್‌ನ ಏಕದಿನ ಮಾದರಿಯ ಅತ್ಯುನ್ನತ ಟೂರ್ನಿಯಾಗಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿ ಚಾಂಪಿಯನ್ ಪಟ್ಟಕ್ಕೇರುವ ತಂಡ ಗಳಿಸುವ ಬಹುಮಾನ ಮೊತ್ತ ಎಷ್ಟು ಎನ್ನುವ ಕುತೂಹಲ ಸಹಜವಾಗಿಯೇ ಇರುತ್ತದೆ. ಈ ಬಾರಿಯ ವಿಶ್ವಕಪ್ ಟೂರ್ನಿಯ ವಿಜೇತ ತಂಡಕ್ಕೆ, ರನ್ನರ್‌ಅಪ್ ತಂಡಕ್ಕೆ ಹಾಗೂ ಉಳಿದ ತಂಡಗಳಿಗೆ ದೊರೆಯುವ ಬಹುಮಾನದ ಮೊತ್ತದ ಮಾಹಿತಿ ಇಲ್ಲಿದೆ. ಮುಂದೆ ಓದಿ..
ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿನ ಪ್ರಶ್ತಿಯ ಒಟ್ಟು ಮೊತ್ತ 10 ಮಿಲಿಯನ್ ಡಾಲರ್. ಅಂದರೆ ಸುಮಾರು 84 ಕೋಟಿ ರೂಪಾಯಿ. ಇದರ ಪೈನ ಮುಂದಿನ ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ 4 ಮಿಲಿಯನ್ ಡಾಲರ್ ಪಡೆಯಲಿದೆ. ಅಂದರೆ ಸುಮಾರು 33 ಕೋಟಿ ರೂಪಾಯಿಯಾಗಿರಲಿದೆ. ಇನ್ನು ರನ್ನರ್‌ಅಪ್ ತಂಡಕ್ಕೆ 2 ಮಿಲಿಯನ್ ಡಾಲರ್ ಅಂದರೆ ಸುಮಾರು 16.5 ಕೋಟಿ ರೂಪಾಯಿ ಬಹುಮಾನದ ರೂಪದಲ್ಲಿ ದೊರೆಯಲಿದೆ.
ಇನ್ನು ಎಲ್ಲಾ 10 ಭಾಗವಹಿಸುವ ತಂಡಗಳು ಗುಂಪು ಹಂತಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು ಗ್ರೂಪ್ ಹಂತದಲ್ಲಿ ಪ್ರತಿ ಪಂದ್ಯದಲ್ಲಿ ಗೆಲ್ಲುವ ತಂಡ ಪ್ರತಿ ಗೆಲುವಿಗೆ 40,000 ಡಾಲರ್ (ಅಂದಾಜು ₹ 33 ಲಕ್ಷ) ಬಹುಮಾನವಾಗಿ ಪಡೆಯಲಿದೆ. ಅಂತಿಮವಾಗಿ ನಾಕೌಟ್ ಹಂತಗಳಿಗೆ ಅರ್ಹತೆ ಪಡೆಯಲು ವಿಫಲವಾದ ತಂಡಗಳು 100,000 ಡಾಲರ್ ಅಂದರೆ ಸುಮಾರು ₹8.4 ಲಕ್ಷ ರೂಪಾಯಿ ಹಣ ಪಡೆಯುತ್ತಾರೆ.
ಈ ಬಾರಿಯ ವಿಶ್ವಕಪ್ ಟೂರ್ನಿ ಕಳೆದ ಬಾರಿಯ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ವಿರುದ್ಧ ಅಹ್ಮದಾಬಾದ್‌ನಲ್ಲಿ ಅಕ್ಟೋಬರ್ 5ರಂದು ಪಂದ್ಯ ನಡೆಯುವ ಮೂಲಕ ಚಾಲನೆ ಪಡೆದುಕೊಂಡಿತ್ತು. ಇದೀಗ ಲೀಗ್ ಹಂತದ ಎಲ್ಲಾ ಪಂದ್ಯಗಳು ಅಂತ್ಯಕಂಡಿದ್ದು ನಾಲ್ಕು ತಂಡಗಳು ಮಾತ್ರವೇ ಟೂರ್ನಿಯಲ್ಲಿ ಉಳಿದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications