For Quick Alerts
ALLOW NOTIFICATIONS  
For Daily Alerts
 

ICC Player Of The Month For March: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಈ ಮೂವರು ಕ್ರಿಕೆಟಿಗರು ನಾಮನಿರ್ದೇಶನ

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಗೆ ಮೂವರು ಕ್ರಿಕೆಟಿಗರನ್ನು ನಾಮನಿರ್ದೇಶನ ಮಾಡಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಈ ಬಾರಿ ಮಾರ್ಚ್ ತಿಂಗಳ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೂವರು ಆಟಗಾರರೆಂದರೆ, ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್, ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಮತ್ತು ಯುಎಇ ಬ್ಯಾಟ್ಸ್‌ಮನ್ ಆಸಿಫ್ ಖಾನ್.

ICC Player Of The Month Award For March; These 3 Cricketers Have Been Nominated

ಕೇನ್ ವಿಲಿಯಮ್ಸನ್ - ನ್ಯೂಜಿಲೆಂಡ್
ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ ಅವರು ಮಾರ್ಚ್ ತಿಂಗಳಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಆಡಿದ ಎರಡು ಪಂದ್ಯಗಳಲ್ಲೂ ಶತಕಗಳನ್ನು ಬಾರಿಸಿದ್ದಾರೆ. 32 ವರ್ಷದ ಕೇನ್ ವಿಲಿಯಮ್ಸನ್ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ನ್ಯೂಜಿಲೆಂಡ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 121 ರನ್ ಗಳಿಸಿ ಎರಡು ವಿಕೆಟ್‌ಗಳ ರೋಚಕ ಗೆಲುವಿಗೆ ನೆರವಾಗಿದ್ದರು.

RCB vs KKR IPL 2023: ಕೆಕೆಆರ್ ವಿರುದ್ಧ ಆರ್‌ಸಿಬಿ ತಂಡದ ಒಂದು ಬದಲಾವಣೆ; ಹೇಗಿರಲಿದೆ ಆಡುವ 11ರ ಬಳಗ?

ನಂತರ ಕೇನ್ ವಿಲಿಯಮ್ಸನ್ ಅವರು ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದರು. ಅಲ್ಲದೇ ಪ್ರವಾಸಿ ತಂಡವನ್ನು ಇನ್ನಿಂಗ್ಸ್ ಮತ್ತು 58 ರನ್‌ಗಳಿಂದ ಸೋಲಿಸಲು ಪ್ರಮುಖ ಪಾತ್ರ ವಹಿಸಿದರು. ಕೇನ್ ವಿಲಿಯಮ್ಸನ್ 296 ಎಸೆತಗಳಲ್ಲಿ 23 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 215 ರನ್ ಬಾರಿಸಿದರು.

ICC Player Of The Month Award For March; These 3 Cricketers Have Been Nominated

ಒಟ್ಟಾರೆಯಾಗಿ, ಕೇನ್ ವಿಲಿಯಮ್ಸನ್ ಮಾರ್ಚ್‌ ತಿಂಗಳಿನಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳಿಂದ 337 ರನ್ ಗಳಿಸಿದ್ದಾರೆ. ತವರಿನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಕ್ಲೀನ್ ಸ್ವೀಪ್ ಮಾಡಲು ನ್ಯೂಜಿಲೆಂಡ್ ತಂಡಕ್ಕೆ ಅದ್ಭುತವಾಗಿ ಆಡಿದರು.

ಶಕೀಬ್ ಅಲ್ ಹಸನ್ - ಬಾಂಗ್ಲಾದೇಶ
ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-2 ಅಂತರದ ಸೋಲಿನಲ್ಲಿಯೂ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದರು. ನಂತರ ಶಕೀಬ್ ಅಲ್ ಹಸನ್ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್‌ ವಿರುದ್ಧ 3-0 ಅಂತರದ ವೈಟ್‌ವಾಶ್ ಮಾಡಲು ಬಾಂಗ್ಲಾದೇಶ ತಂಡಕ್ಕೆ ಪ್ರಮುಖ ಪಾತ್ರ ವಹಿಸಿದರು.

ICC Player Of The Month Award For March; These 3 Cricketers Have Been Nominated

ನಂತರ ಶಕೀಬ್ ಅಲ್ ಹಸನ್ ಅವರು ಬಾಂಗ್ಲಾದೇಶ ತಂಡ ತವರಿನಲ್ಲಿ ಐರ್ಲೆಂಡ್ ವಿರುದ್ಧ 2-0 ಏಕದಿನ ಸರಣಿ ಗೆಲುವು ಮತ್ತು 2-1 ಅಂತರದ ಟಿ20 ಸರಣಿಯನ್ನು ಗೆಲುವಿನಲ್ಲಿ ನೆರವಾಗಿದ್ದರು. ಐರ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 93 ರನ್ ಗಳಿಸಿದರು. ಶಕೀಬ್ ಅಲ್ ಹಸನ್ ಅವರು ಮಾರ್ಚ್‌ನಲ್ಲಿ ಆಡಿದ 12 ಪಂದ್ಯಗಳಲ್ಲಿ 353 ರನ್ ಗಳಿಸಿ 15 ವಿಕೆಟ್ ಪಡೆದಿದ್ದಾರೆ.

ಆಸಿಫ್ ಖಾನ್ - ಯುಎಇ
ಯುಎಇ ಬ್ಯಾಟರ್ ಆಸಿಫ್ ಖಾನ್ ಮಾರ್ಚ್ ತಿಂಗಳ ಏಕದಿನ ಕ್ರಿಕೆಟ್‌ನಲ್ಲಿ ಎರಡು ಶತಕ ಮತ್ತು ಎರಡು ಅರ್ಧ ಶತಕಗಳೊಂದಿಗೆ 403 ರನ್ ಗಳಿಸಿದ್ದಾರೆ. ನೇಪಾಳದಲ್ಲಿ ನಡೆದ ಏಕದಿನ ಸರಣಿಯಲ್ಲಿ ಆಸಿಫ್ ಖಾನ್ 42 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದರು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅಸೋಸಿಯೇಟ್ ದೇಶದ ಆಟಗಾರನ ವೇಗದ ಶತಕ ಇದಾಗಿತ್ತು. ನಂತರ ಯುಎಸ್ಎ ವಿರುದ್ಧ ಮತ್ತೊಂದು ಶತಕವನ್ನು ಬಾರಿಸಿದರು.

ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಅವರು ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ವೆಸ್ಟ್ ಇಂಡೀಸ್ ಬೌಲರ್ ಗುಡಾಕೇಶ್ ಮೋಟಿ ಅವರನ್ನು ಹಿಂದಿಕ್ಕಿ ಫೆಬ್ರವರಿ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು.

Story first published: Thursday, April 6, 2023, 20:08 [IST]
Other articles published on Apr 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+