For Quick Alerts
ALLOW NOTIFICATIONS  
For Daily Alerts
 

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ಟೂ ಕಿಕ್ಕೇರಿಸಲಿದೆ !

ICC to push for cricket featuring in 2028 Olympics

ನವದೆಹಲಿ, ಏ. 28: ಕ್ಯಾಲಿಫೋರ್ನಿಯಾದ ಲಾಸ್ ಏಂಜಿಲೀಸ್ ನಲ್ಲಿ 2028ರಂದು ನಡೆಯಲಿರುವ ಒಲಿಂಪಿಕ್ಸ್ ಗೇಮ್ಸ್ ನಲ್ಲಿ ನಾವು ಕ್ರಿಕೆಟ್ ಆಟವನ್ನೂ ಕಣ್ತುಂಬಿಕೊಳ್ಳಬಹುದು. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈ ವಿಚಾರವನ್ನು ಬಹಿರಂಗಪಡಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2024ರ ಪ್ಯಾರೀಸ್ ಒಲಿಂಪಿಕ್ಸ್ ನಲ್ಲೇ ಕ್ರಿಕೆಟ್ ಆಟವನ್ನು ಸೇರಿಸುವ ಯೋಜನೆ ಇಟ್ಟುಕೊಂಡಿತ್ತಾದರೂ ಕಾರಣಾಂತರ ಕ್ರಿಕೆಟನ್ನು 2028ರ ಒಲಿಂಪಿಕ್ಸ್ ನಲ್ಲಿ ಸೇರಿಸಲು ಮುಂದಾಗಿದೆ.

ಇದಕ್ಕೂ ಮುನ್ನ 1900ರ ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಕೊನೆಯ ಬಾರಿ ಕ್ರಿಕೆಟ್ ಆಡಲಾಗಿತ್ತು. ಅನಂತರ ಕ್ರಿಕೆಟನ್ನು ಒಲಿಂಪಿಕ್ಸ್ ನಿಂದ ಹೊರಗಿಡಲಾಗಿತ್ತು. ಇದೀಗ ಮತ್ತೆ ಕ್ರಿಕೆಟ್ ಒಲಿಂಪಿಕ್ಸ್ ಕ್ರೀಡಾಪಟ್ಟಿಯಲ್ಲಿ ಸೇರಿಕೊಳ್ಳಲಿದೆ. ಒಲಿಂಪಿಕ್ಸ್ ಕ್ರೀಡೆಗಳ ಮಧ್ಯೆ ಕ್ರಿಕೆಟ್ಟೂ ಇನ್ನು ಕಿಕ್ಕೇರಿಸಲಿದೆ. ಆದರೆ ಕ್ರಿಕೆಟ್ ಆಟವನ್ನು ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನೋಡಲು ನಾವಿನ್ನು ಹತ್ತು ವರ್ಷ ಕಾಯಬೇಕಷ್ಟೇ.

ಒಲಿಂಪಿಕ್ಸ್ ಆಯೋಜನಾ ಸಮಿತಿಯೂ ಕ್ರಿಕೆಟ್ ಆಟವನ್ನು ಮತ್ತೆ ಒಲಿಂಪಿಕ್ಸ್ ನಲ್ಲಿ ಸೇರಿಸುವತ್ತ ಒಲವುತಾಳಿದ್ದು, ಒಲಿಂಪಿಕ್ಸ್ ಮತ್ತು ಕ್ರಿಕೆಟ್ ಸಮಿತಿ ಅದರ ಎಲ್ಲ 104 ಅಂತಾರಾಷ್ಟ್ರೀಯ ಸದಸ್ಯರಿಗೆ ಟಿ20 ಪಂದ್ಯವನ್ನು ಒಲಿಂಪಿಕ್ಸ್ ನಲ್ಲಿ ಸೇರಿಸುವ ಮಾಹಿತಿ ರವಾನಿಸುವ ನಿರ್ಧಾರವನ್ನು ಕೈಗೊಂಡಿವೆ.

2024ರ ಪ್ಯಾರೀಸ್ ಒಲಿಂಪಿಕ್ಸ್ ನಲ್ಲೇ ಕ್ರಿಕೆಟನ್ನು ಸೇರಿಸುವುದರಲ್ಲಿದ್ದೆವು. ಆದರೆ ಅದಕ್ಕೆ ಕಾಲಾವಕಾಶ ಕೈ ಮೀರಿದೆ ಎಂದು ಐಸಿಸಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯೂ ಆಗಿರುವ ಸೌತಾಫ್ರಿಕನ್ ಮಾಜಿ ವಿಕೆಟ್ ಕೀಪರ್, ಡೇವ್ ರಿಚರ್ಡ್ಸನ್ ಹೇಳಿದ್ದಾರೆ.

'ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರಿಸಲು ಅವಕಾಶವಿಲ್ಲ. ಆದರೆ 2028ರ ಲಾಸ್ ಏಂಜಲೀಸ್ ಒಲಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರಿಸಲು ಅವಕಾಶವಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧಿಕಾರಿಗಳೊಂದಿಗೆ ಮಾತು ಮುಂದುವರೆಸುತ್ತೇವೆ. ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಕಾಣಿಸಿಕೊಳ್ಳುವ ಎಲ್ಲ ನಿರೀಕ್ಷೆಗಳಿವೆ' ಎಂದು ರಿಚರ್ಡ್ಸನ್ ತಿಳಿಸಿದ್ದಾರೆ.

Story first published: Saturday, April 28, 2018, 12:47 [IST]
Other articles published on Apr 28, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+