For Quick Alerts
ALLOW NOTIFICATIONS  
For Daily Alerts
 

ಟಿ20ಐ ಶ್ರೇಯಾಂಕದಲ್ಲಿ ಕುಲದೀಪ್, ರಶೀದ್ ರಿಂದ 'ದೊಡ್ಡ ನೆಗೆತ'

ICC Rankings: Kuldeep, Adam Zampa make big leap in T20I chart

ದುಬೈ, ನವೆಂಬರ್ 26: ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20ಐ ಪಂದ್ಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಹೊಸ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ.

ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಸ್ಪಿನ್ನರ್​ ಕುಲ್​ದೀಪ್​ ಯಾದವ್ ಹಾಗೂ ಆಸ್ಟ್ರೇಲಿಯಾದ ಆಡಂ ಝಂಪಾ ಅವರು ಟಾಪ್ 05ಯೊಳಗೆ ಲಗ್ಗೆ ಇಟ್ಟಿದ್ದಾರೆ.

ಕುಲದೀಪ್ ಯಾದವ್ ಅವರು 20 ಸ್ಥಾನ ಏರಿಕೆ ಕಂಡು ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಆಸ್ಟ್ರೇಲಿಯಾದ ಆಡಂ ಝಂಪಾ 17 ಸ್ಥಾನಗಳ ಏರಿಕೆ ಕಂಡು ಮೊದಲ ಬಾರಿಗೆ ವೃತ್ತಿ ಜೀವನದಲ್ಲಿ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.

ಬ್ಯಾಟಿಂಗ್​ ವಿಭಾಗದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ 5 ಸ್ಥಾನಗಳ ಏರಿಕೆ ಕಂಡಿದ್ದು, ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ 11ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಪಾಕಿಸ್ತಾನದ ಬಾಬರ್ ಅಜಂ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, ಕಾಲಿನ್ ಮನ್ರೋ, ಆರೋನ್ ಫಿಂಚ್, ಫಖರ್ ಜಮಾನ್ ಹಾಗೂ ಗ್ಲೇನ್ ಮ್ಯಾಕ್ಸ್​ವೆಲ್ ಕ್ರಮವಾಗಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬೌಲಿಂಗ್​​ ವಿಭಾಗ

ಬೌಲಿಂಗ್​​ ವಿಭಾಗ

1. ರಶೀದ್ ಖಾನ್(ಅಫ್ಘಾನಿಸ್ತಾನ) 793 ರೇಟಿಂಗ್
2. ಶಾದಾಬ್ ಖಾನ್(ಪಾಕಿಸ್ತಾನ ) 752
3. ಕುಲ್ದೀಪ್ ಯಾದವ್(ಭಾರತ) 714
4. ಆದಿಲ್ ರಶೀದ್(ಇಂಗ್ಲೆಂಡ್) 676
5. ಆಡಂ ಝಂಪಾ (ಆಸ್ಟ್ರೇಲಿಯಾ) 670

ಬ್ಯಾಟಿಂಗ್​ ವಿಭಾಗ

ಬ್ಯಾಟಿಂಗ್​ ವಿಭಾಗ

1. ಬಾಬರ್ ಅಜಂ(ಪಾಕಿಸ್ತಾನ) 858 ರೇಟಿಂಗ್
2. ಕಾಲಿನ್ ಮನ್ರೊ(ನ್ಯೂಜಿಲೆಂಡ್) 815
3. ಆರೋನ್ ಫಿಂಚ್(ಆಸ್ಟ್ರೇಲಿಯಾ) 806
4. ಫಖರ್ ಜಮಾನ್(ಪಾಕಿಸ್ತಾನ) 749
5. ಗ್ಲೇನ್ ಮ್ಯಾಕ್ಸ್​ವೆಲ್​​(ಆಸ್ಟ್ರೇಲಿಯಾ) 745
6. ಕೆ.ಎಲ್ ರಾಹುಲ್(ಭಾರತ) 719

ಆಲ್ ರೌಂಡರ್

ಆಲ್ ರೌಂಡರ್

1. ಗ್ಲೆನ್ ಮ್ಯಾಕ್ಸ್ ವೆಲ್ (ಆಸ್ಟ್ರೇಲಿಯಾ) 362 rating
2. ಮೊಹಮ್ಮದ್ ನಬಿ (ಅಫ್ಘಾನಿಸ್ತಾನ) 313
3. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) 310
4. ಜೆಪಿ ಡುಮಿನಿ (ದಕ್ಷಿಣ ಆಫ್ರಿಕಾ) 216
5. ಥಿಸಿರಾ ಪೆರರಾ (ಶ್ರೀಲಂಕಾ) 213

ಟಾಪ್ 05 ಟಿ20ಐ ತಂಡಗಳು

ಟಾಪ್ 05 ಟಿ20ಐ ತಂಡಗಳು

1. ಪಾಕಿಸ್ತಾನ 36 ಪಂದ್ಯ 4,979 ಅಂಕ, 138 ರೇಟಿಂಗ್
2. ಭಾರತ 40 ಪಂದ್ಯ, 5,064 ಅಂಕ, 127 ರೇಟಿಂಗ್
3. ಇಂಗ್ಲೆಂಡ್ 22 ಪಂದ್ಯ, 2,586 ಅಂಕ, 118 ರೇಟಿಂಗ್
4.ಆಸ್ಟ್ರೇಲಿಯಾ 26 ಪಂದ್ಯ, 3,014 ಅಂಕ, 116 ರೇಟಿಂಗ್
5.ದಕ್ಷಿಣ ಆಫ್ರಿಕಾ 22 ಪಂದ್ಯ, 2,502 ಅಂಕ, 114 ರೇಟಿಂಗ್

Story first published: Tuesday, November 27, 2018, 0:22 [IST]
Other articles published on Nov 27, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+