ICC Rankings: ಲಾಂಗೆಸ್ಟ್‌ನಲ್ಲಿ ಭಾರತ, ಶಾರ್ಟೆಸ್ಟ್‌ನಲ್ಲಿ ಪಾಕ್ ನಂ.1

ನವದೆಹಲಿ, ಮೇ 2: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ಕ್ರಿಕೆಟ್‌ಗೆ ಸಂಬಂಧಿಸಿ ಗುರುವಾರ (ಮೇ 2) ನೂತನ ರ್ಯಾಂಕ್ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಕ್ರಮವಾಗಿ ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಮಾದರಿಯಲ್ಲಿ ನಂ.1 ಸ್ಥಾನ ಅಲಂಕರಿಸಿವೆ.
ಅಂತಾರಾಷ್ಟ್ರೀಯ ಏಕದಿನ ಪಂದ್ಯ(ಒಡಿಐ)ದಲ್ಲಿ ಇಂಗ್ಲೆಂಡ್ ತಂಡ ಅಗ್ರ ಸ್ಥಾನದಲ್ಲಿದೆ. ಇನ್ನು ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಐಸಿಸಿ ಹೊಸ ರ್ಯಾಂಕ್ ಪಟ್ಟಿಯಲ್ಲಿ ಟೆಸ್ಟ್, ಏಕದಿನ ಮತ್ತು ಟಿ20ಯಲ್ಲಿ ತಂಡ, ಆಟಗಾರರ ಸ್ಥಾನ ಪಲ್ಲಟಕ್ಕೆ ಸಂಬಂಧಿಸಿ ಇಲ್ಲಿ ಸಂಕ್ಷಿಪ್ತ ಮಾಹಿತಿಯಿದೆ.

ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ಫಸ್ಟು
ಪುರುಷರ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡ ಅಗ್ರ ಸ್ಥಾನದಲ್ಲೇ ಮುಂದುವರೆದಿದೆ. ಭಾರತದ ಖಾತೆಯಲ್ಲೀಗ 116 ರೇಟಿಂಗ್ ಪಾಯಿಂಟ್ಸ್ ಇವೆ. ದ್ವಿತೀಯ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ (108 ಪಾಯಿಂಟ್ಸ್), ತೃತೀಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ (105), ಚತುರ್ಥ ಸ್ಥಾನದಲ್ಲಿ ಆಸ್ಟ್ರೇಲಿಯಾ (104), 5ನೇ ಸ್ಥಾನದಲ್ಲಿ ಇಂಗ್ಲೆಂಡ್ (104) ತಂಡವಿದೆ.

ಏಕದಿನದಲ್ಲಿ ಆಂಗ್ಲರಿಗೆ ನಂ.1 ಪಟ್ಟ
50 ಓವರ್‌ಗಳ ಮಾದರಿಯಲ್ಲಿ ಇಂಗ್ಲೆಂಡ್ ಮೊದಲ ಸ್ಥಾನ ಪಡೆದುಕೊಂಡಿದೆ. ಇಂಗ್ಲೆಂಡ್ ಒಟ್ಟು 123 ಅಂಕ ಕಲೆ ಹಾಕಿದೆ. ಆಂಗ್ಲರ ಬೆನ್ನಲ್ಲೇ ಇರುವ ಭಾರತ 120 ಪಾಯಿಂಟ್ ಗಳಿಸಿದೆ. ಇನ್ನು ಮೂರನೇ ಸ್ಥಾನದಲ್ಲಿ ಕಿವೀಸ್ (112), 4ನೇ ಸ್ಥಾನದಲ್ಲಿ ಸೌತ್ ಆಫ್ರಿಕಾ (112), 5ನೇ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ (108) ತಂಡವಿದೆ.

ಶಾರ್ಟೆಸ್ಟ್‌ನಲ್ಲಿ ಪಾಕ್ ಬೆಸ್ಟು
ಟೆಸ್ಟ್ ಮತ್ತು ಏಕದಿನದಲ್ಲಿ 5ರ ನಂತರದ ಸ್ಥಾನಗಳಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಅತೀ ಚುಟುಕು ಅಂತಾರಾಷ್ಟ್ರೀಯ ಕ್ರಿಕೆಟ್ ಮಾದರಿಯಾದ ಟಿ20ಯಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರೆದಿದೆ. 135 ಪಾಯಿಂಟ್ಸ್ ಗಳಿಂದ ಪಾಕ್ ಮೊದಲ ಸ್ಥಾನ ಆವರಿಸಿದ್ದರೆ, 122 ಅಂಕಗಳೊಂದಿಗೆ ಭಾರತ, ಪಾಕ್ ಬೆನ್ನಲ್ಲಿದೆ. ಇಂಗ್ಲೆಂಡ್ (121), ಆಸ್ಟ್ರೇಲಿಯಾ (120), ದಕ್ಷಿಣ ಆಫ್ರಿಕಾ (120) ಅನಂತರದ ಸ್ಥಾನಗಳಲ್ಲಿವೆ.

ಟೆಸ್ಟ್‌ನಲ್ಲಿ ಕಿಂಗ್ ಕೊಹ್ಲಿ
ಆಟಗಾರರ ಶ್ರೇಯಾಂಕ ಗಮನಿಸಿದರೆ, ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. ಟೆಸ್ಟ್ ನಲ್ಲಿ ಕೊಹ್ಲಿ 922 ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದರೆ, ಏಕದಿನದಲ್ಲಿ 890 ಅಂಕ ಕಲೆ ಹಾಕಿದ್ದಾರೆ. ಟೆಸ್ಟ್ ವೈಯಕ್ತಿಕ ರ್ಯಾಂಕಿಂಗ್ಸ್‌ನಲ್ಲಿ ಕೇನ್ ವಿಲಿಯಮ್ಸನ್ (913-ಕಿವೀಸ್), ಚೇತೇಶ್ವರ್ ಪೂಜಾರಾ (881) ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.

ಏಕದಿನದಲ್ಲಿ ಬೂಮ್ರಾ ಅಗ್ರ ಸ್ಥಾನಿಗ
ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮೊದಲ ಸ್ಥಾನ ಪಡೆದರೆ, ಟೆಸ್ಟ್ ಆಲ್ ರೌಂಡರ್ಸ್ ಯಾದಿಯಲ್ಲಿ ವೆಸ್ಟ್ ಇಂಡೀಸ್ ನ ಜೇಸನ್ ಹೋಲ್ಡರ್ ನಂ.1 ಶ್ರೇಯಾಂಕದಲ್ಲಿದ್ದಾರೆ. ಏಕದಿನ ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ ದ್ವಿತೀಯ, ರಾಸ್ ಟೇಲರ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ಆಲ್ ರೌಂಡರ್ ಆಗಿ ಅಫ್ಘಾನ್‌ನ ರಶೀದ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ.

ಬಾಬರ್ ಸೂಪರ್
ಟಿ20 ಮಾದರಿ ಬ್ಯಾಟಿಂಗ್ ವಿಭಾಗದಲ್ಲಿ ಪಾಕಿಸ್ಥಾನ ಸ್ಫೋಟಕ ಬ್ಯಾಟ್ಸ್ಮನ್ ಬಾಬರ್ ಅಝಾಮ್ ಗೆ ಮೊದಲ ಸ್ಥಾನ ಲಭಿಸಿದೆ. ಕಾಲಿನ್ ಮುನ್ರೋ (ಕಿವೀಸ್), ಗ್ಲೆನ್ ಮ್ಯಾಕ್ಸ್‌ವೆಲ್ (ಆಸೀಸ್) ಅನಂತರದ ಸ್ಥಾನಗಳಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ಮೊದಲಿಗರಾದರೆ, ಆಲ್ ರೌಂಡರ್ ಆಗಿ ಗ್ಲೆನ್ ಮ್ಯಾಕ್ಸ್‌ವೆಲ್ ಮಿಂಚಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications