Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರಿ ಬದಲಾವಣೆ: 'ಸೂಪರ್ 7' ಹಾಗೂ 'ಸೂಪರ್ 10' ನಿಯಮ ಘೋಷಣೆ

ಕ್ರಿಕೆಟ್‌ನ್ನು ಜನಪ್ರೀಯಗೊಳಿಸಲು ಹಾಗೂ ಸ್ಪರ್ಧೆಯನ್ನು ಹೆಚ್ಚಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ ( ಐಸಿಸಿ) ದಿಟ್ಟ ಹೆಜ್ಜೆ ಇಟ್ಟಿದೆ. ಬುಧವಾರ ಐಸಿಸಿ ಪುರುಷರ ವಿಶ್ವಕಪ್ ಮತ್ತು ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಬದಲಾವಣೆಗಳನ್ನು ಘೋಷಿಸಿದೆ.

ಐಸಿಸಿ ಪೂರ್ಣ ಸದಸ್ಯರು ಹಾಗೂ ಅಸೋಸಿಯೇಟ್‌ ಪ್ರತಿನಿಧಿಗಳನ್ನು ಒಳಗೊಂಡ ಐಸಿಸಿ ಸಭೆಯಲ್ಲಿ ಕಳೆದುಕೊಳ್ಳಲಾಗಿದೆ. ಆರಂಭದಲ್ಲಿ ಕ್ರಿಕೆಟ್‌ ವಿಶ್ವಕಪ್‌ ಅರ್ಹತಾ ಪಂದ್ಯಗಳಲ್ಲಿ ಮೂರು ತಂಡಗಳು ಅರ್ಹತಾ ಸುತ್ತಿನಲ್ಲಿ ಆಡುತ್ತವೆ. ಈ ಗುಂಪಿನಿಂದ ಒಂದು ತಂಡ ಮಾತ್ರ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಉಳಿದ ತಂಡಗಳು ಟೂರ್ನಿಗೆ ಗುಡ್‌ ಬೈ ಹೇಳುತ್ತವೆ.

ICC Revamps WC Formats

ಒಟ್ಟು 12 ತಂಡಗಳು ಪ್ರಧಾನ ಸುತ್ತಿನಲ್ಲಿ ಕಾದಾಟವನ್ನು ನಡೆಸಲಿವೆ. ಎರಡು ಗುಂಪುಗಳಲ್ಲಿ 6 ತಂಡಗಳನ್ನು ವಿಂಗಡಿಸಲಾಗುತ್ತದೆ. ಅಲ್ಲದೆ ಈ ಹಂತದಲ್ಲಿ ಎರಡೂ ಗುಂಪಿನಿಂದ ಅಗ್ರ ಮೂರು ತಂಡಗಳು ನೇರವಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿವೆ. ಎರಡೂ ತಂಡಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ನಾಲ್ಕನೇ ಸ್ಥಾನದ ಒಂದು ತಂಡ ಮುನ್ನಡೆ ಸಾಧಿಸುತ್ತದೆ. ಒಟ್ಟು ಏಳು ತಂಡಗಳು ಸೂಪರ್ 7 ಹಂತದಲ್ಲಿ ಕಾದಾಡಲಿವೆ.

Rohit Sharma: ಹಿಟ್‌ಮ್ಯಾನ್‌ ಮುಡಿಗೆ ಮತ್ತೊಂದು ಗರಿ

Rohit Sharma: ಹಿಟ್‌ಮ್ಯಾನ್‌ ಮುಡಿಗೆ ಮತ್ತೊಂದು ಗರಿ

ಸೂಪರ್ 7 ಹಂತದ ಪಂದ್ಯಗಳಲ್ಲಿಯೇ ಸೆಮಿಫೈನಲ್‌ಗೆ ತಂಡಗಳು ಅರ್ಹತೆ ಪಡೆಯುತ್ತವೆ. ಈ ಹಂತದಲ್ಲಿ ಎಲ್ಲರ ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯವನ್ನು ಆಡುತ್ತವೆ. ಈ ವೇಳೆ ಅಗ್ರ ನಾಲ್ಕು ತಂಡಗಳು ಉಪಾಂತ್ಯವನ್ನು ಪ್ರವೇಶಿಸಲಿವೆ. ಇನ್ನು ಉಳಿದ ಸೆಮಿಫೈನಲ್‌ ಪಂದ್ಯದಲ್ಲಿ ಜಯ ಸಾಧಿಸಿದ, ಫೈನಲ್‌ನಲ್ಲಿ ಕಾದಾಟ ನಡೆಸಲಿವೆ.

ಈ ಬದಲಾವಣೆಯ ಉದ್ದೇಶವೇನು?

ಎಡಿನ್‌ಬರ್ಗ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇನ್ನು ಟೂರ್ನಿಯ ಗುಣಮಟ್ಟ ಹೆಚ್ಚಿಸುವುದು, ಅಭಿಮಾನಿಗಳ ಕ್ರಿಕೆಟ್‌ ಅನುಭವ ಮತ್ತಷ್ಟು ರೋಚಕತೆ ಗೊಳಿಸುವುದು ಇದರ ಉದ್ದೇಶವಾಗಿದೆ.

ಮುಂದಿನ ಬಾರಿಯ ಏಕದಿನ ವಿಶ್ವಕಪ್‌ ಎಲ್ಲಿ ನಡೆಯಲಿದೆ?

ಮುಂದಿನ ವರ್ಷ ಏಕದಿನ ವಿಶ್ವಕಪ್‌ ಟೂರ್ನಿಯನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾ ದೇಶಗಳು ಜಂಟಿಯಾಗಿ ಆಯೋಜಿಸುತ್ತಿವೆ. ಇನ್ನು ಅಕ್ಟೋಬರ್‌ 4 ರಿಂದ ನವೆಂಬರ್‌ 21ರ ವರೆಗೆ ನಡೆಯಲಿದೆ.

ICC Revamps WC Formats

ಇನ್ನು ಮುಂದಿನ ಟಿ20 ವಿಶ್ವಕಪ್‌ನಲ್ಲೂ ಕೆಲವು ಮಹತ್ವದ ಬದಲಾವಣೆಗಳನ್ನು ನೋಡಬಹುದಾಗಿದೆ. 2028ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಜಂಟಿಯಾಗಿ ಆಯೋಜಿಸುವ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು 55 ಪಂದ್ಯಗಳೇ ನಡೆಯಲಿವೆ. ಆದರೆ ಪಂದ್ಯವಾಳಿಯ ರಚನೆಯಲ್ಲಿ ಮಾರ್ಪಾಡು ಮಾಡಲಾಗಿದೆ.

ಐದು ಗುಂಪುಗಳು

ಟಿ20 ವಿಶ್ವಕಪ್‌ನಲ್ಲಿ ಇನ್ನು ಮುಂದೆ ಐದು ಗುಂಪುಗಳಲ್ಲಿ ನಡೆಯಲಿದೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳು ಸ್ಥಾನ ಪಡೆಯಲಿವೆ. ಪ್ರತಿ ಗುಂಪಿನ ಅಗ್ರ 2 ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯುತ್ತದೆ. ನಂತರ ಸೂಪರ್ 10 ಮಾದರಿ ನಡೆಯುತ್ತವೆ. ಈ ಹಂತದಲ್ಲಿ 10 ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಿಲಾಗುತ್ತದೆ. ಅಲ್ಲದೆ ಎರಡೂ ಗುಂಪಿನ ಅಗ್ರ 2 ತಂಡಗಳು ಮುಂದಿನ ಹತಕ್ಕೆ ಪ್ರವೇಶ ಪಡೆಯುತ್ತವೆ.

Wimbledon ಮೈದಾನದಲ್ಲಿ ಭಾರತದ ಕಂಪು; ಟೆನಿಸ್ ತಾರೆಯರ ಮನಗೆದ್ದ ಟವೆಲ್‌ಗಳು!

Wimbledon ಮೈದಾನದಲ್ಲಿ ಭಾರತದ ಕಂಪು; ಟೆನಿಸ್ ತಾರೆಯರ ಮನಗೆದ್ದ ಟವೆಲ್‌ಗಳು!

ಸೆಮಿಫೈನಲ್‌ ಹಂತಕ್ಕೂ ಮೊದಲು ದೊಡ್ಡ ಬದಲಾವಣೆ ಮಾಡಲಾಗಿದೆ. ಈ ಹಂತದಲ್ಲಿ ಸೂಪರ್ 10 ಹಂತದಲ್ಲಿ ಮೊದಲ ಸ್ಥಾನವನ್ನು ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್‌ ಪ್ರವೇಶಿಸುತ್ತವೆ. ಇನ್ನು ಎರಡನೇ ಹಾಗೂ ಮೂರನೇ ಸ್ಥಾನವನ್ನು ಪಡೆದ ತಂಡಗಳು ಕ್ರಾಸ್‌ ಓವರ್‌ ಎಲಿಮಿನೇಟರ್‌ ಪಂದ್ಯಗಳನ್ನು ಆಡುತ್ತವೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಮುನ್ನಡೆ ಸಾಧಿಸುತ್ತದೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಸೆಮಿಫೈನಲ್‌ ಹಂತಕ್ಕೂ ಮುನ್ನ ನಾಕೌಟ್ ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಹೆಚ್ಚುವರಿಯಾಗಿ ಆಡಿಸಲಾಗುತ್ತದೆ.

ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಒಟ್ಟು 12 ತಂಡಗಳು ಪ್ರವೇಶ ಪಡೆದಿವೆ. ಆತಿಥೇಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ನೇರ ಪ್ರವೇಶ ಪಡೆದಿವೆ. ಇನ್ನು 2026ರ ವಿಶ್ವಕಪ್‌ನ ಎರಡನೇ ಸುತ್ತನ್ನು ಪ್ರವೇಶಿಸಿದ ತಂಡಗಳು ಮುಂದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಐರ್ಲೆಂಡ್ ತಂಡಗಳು ಟಿ20 ಶ್ರೇಯಾಂಕದ ಆಧಾರದ ಮೇಲೆ ಅರ್ಹತೆ ಪಡೆಯಲಿವೆ.

Story first published: Wednesday, July 15, 2026, 19:44 [IST]
Other articles published on Jul 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+