Mickey Arthur: ಭಾರತದ ವಿರುದ್ದ ಕೋಪದ ಕೈಗೆ ಬುದ್ದಿ ಕೊಟ್ಟ ಪಾಕ್ ಕ್ರಿಕೆಟ್ ತಂಡದ ನಿರ್ದೇಶಕ, ಮುಂದಾ..
ಪಾಕಿಸ್ತಾನ ಕ್ರಿಕೆಟ್ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ ಅವರು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ವಿರುದ್ಧ ಪಂದ್ಯದಲ್ಲಿ ಸೋತ ನಂತರ ಕೋಪದಿಂದ ಮಾಡಿದ ಹೇಳಿಕೆ ಈಗ ಅವರಿಗೆ ದುಬಾರಿಯಾಗಬಹುದು. ಈ ಪಂದ್ಯವು ಯಾವುದೇ ಐಸಿಸಿ ಟೂರ್ನಿಯ ಭಾಗವಾಗಿ ಕಾಣುತ್ತಿಲ್ಲ ಬದಲಾಗಿ ಬಿಸಿಸಿಐನ ದ್ವಿಪಕ್ಷೀಯ ಸರಣಿಯಂತೆ ಕಾಣುತ್ತಿದೆ ಎಂದು ಮಿಕ್ಕಿ ಆರ್ಥರ್ ಹೇಳಿದ್ದರು.
ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಿಕ್ಕಿ ಆರ್ಥರ್ ಹೇಳಿಕೆಯನ್ನು ಪರಿಶೀಲಿಸಲಿದೆ. ವಿಶ್ವಕಪ್ ಪಂದ್ಯದಲ್ಲಿ ಪಾಕ್ ತಂಡದ ಏಳು ವಿಕೆಟ್‌ಗಳ ಸೋಲಿನ ನಂತರ, ಆರ್ಥರ್ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನಿ ಅಭಿಮಾನಿಗಳು ಇಲ್ಲದ ಕಾರಣ ತಾರತಮ್ಯ ಎಸಗಲಾಗಿದೆ ಎಂದು ಹೇಳಿದ್ದರು.

ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮುಂಬೈಗೆ ಬಂದಿದ್ದರು. ಅಲ್ಲಿ ಅವರು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಟಿ-20 ಕ್ರಿಕೆಟ್ ಸೇರ್ಪಡೆಗೆ ಮತ ಹಾಕಿದರು.
ಅಲ್ಲಿ ಪತ್ರಕರ್ತರು ಅವರಿಗೆ ಪ್ರಶ್ನೆಗಳನ್ನು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಅವರು ಹೇಳಿದ್ದನ್ನು ನಾವು ಪರಿಶೀಲಿಸುತ್ತೇವೆ. ಒಂದು ವೇಳೆ ಅವರ ಹೇಳಿಕೆಯಲ್ಲಿ ಏನಾದರೂ ತಪ್ಪು ಕಂಡುಬಂದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಚರ್ಚೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.
ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್
ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್ ಮುಗಿದ ನಂತರ, ಟೂರ್ನಿಯು ತನ್ನ ಇತಿಹಾಸದಲ್ಲಿ ಅತ್ಯುತ್ತಮ ಆವೃತ್ತಿಯಾಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಐಸಿಸಿ ವಿಶ್ವಾಸ ವ್ಯಕ್ತಪಡಿಸಿದೆ.
ಯಾವುದೇ ಪಾಕಿಸ್ತಾನಿ ಅಭಿಮಾನಿಗಳಿಗೆ ಭಾರತ ಸರ್ಕಾರವು ವೀಸಾ ನೀಡದ ಕಾರಣ ಮೈದಾನದಲ್ಲಿ ಪಾಕಿಸ್ತಾನಿ ಅಭಿಮಾನಿಗಳ ಅನುಪಸ್ಥಿತಿಯು ಸ್ಪಷ್ಟವಾಗಿತ್ತು. ಪಾಕಿಸ್ತಾನದ ಬೆರಳೆಣಿಕೆಯ ಪತ್ರಕರ್ತರು ಮಾತ್ರ ಪಂದ್ಯವನ್ನು ವರದಿ ಮಾಡಲು ಆಗಮಿಸಿದ್ದರು. ಇತರ ದೇಶಗಳ ನಿವಾಸಿಗಳು/ನಾಗರಿಕರಾಗಿದ್ದ ಪಾಕಿಸ್ತಾನಿ ಮೂಲದ ಕೆಲವೇ ಕೆಲವು ಅಭಿಮಾನಿಗಳು ಮೈದಾನದಲ್ಲಿ ಉಪಸ್ಥಿತರಿದ್ದರು.
ಸುಮಾರು 1.25 ಲಕ್ಷ ಸಾಮರ್ಥ್ಯದ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ
ನರೇಂದ್ರ ಮೋದಿ ಸ್ಟೇಡಿಯಂ ಸುಮಾರು 1.25 ಲಕ್ಷ ಸಾಮರ್ಥ್ಯದ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂದು ಪರಿಗಣಿಸಲ್ಪಟ್ಟಿದೆ, ಆದರೆ ಇಲ್ಲಿಯವರೆಗೆ ಆಯೋಜಕರು ಪಂದ್ಯದಲ್ಲಿ ಹಾಜರಿದ್ದ ಜನರ ಯಾವುದೇ ಅಧಿಕೃತ ಹಾಜರಾತಿಯನ್ನು ನೀಡಿಲ್ಲ. ಪಂದ್ಯಾವಳಿಯ ಆತಿಥೇಯ ICC ಮತ್ತು BCCI ಎರಡಕ್ಕೂ ಈ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ.
ಈ ಪ್ರತಿಷ್ಠಿತ ಪಂದ್ಯವನ್ನು ವೀಕ್ಷಿಸಲು ಅಧಿಕೃತವಾಗಿ ಎಷ್ಟು ಸೀಟುಗಳನ್ನು ಮಾರಾಟಕ್ಕೆ ಇಡಲಾಗಿತ್ತು ಎಂಬ ಪ್ರಶ್ನೆಗೆ ಐಸಿಸಿ ಮತ್ತು ಬಿಸಿಸಿಐನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮತ್ತು ಕ್ರೀಡಾಂಗಣಗಳು ಖಾಲಿಯಾಗಿ ಕಾಣುತ್ತಿರುವ ಬಗ್ಗೆ ಅಭಿಮಾನಿಗಳಿಂದ ಸಾಕಷ್ಟು ದೂರುಗಳು ಬಂದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications