Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶೇಷವಾದ ವೀಡಿಯೋ ಪೋಸ್ಟ್‌ ಮಾಡಿದ ಐಸಿಸಿ: ಕೊಹ್ಲಿ, ಮನೀಷ್ ಪಾಂಡೆ, ಜಡೇಜಾ ನೋಡಿ

ICC Shares 2008 Under-19 Cricket World Cup Introductions Video

ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬಹಳ ವಿಶೇಷವಾದ ವೀಡಿಯೋವೊಂದನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಈ ವೀಡಿಯೋ ಎಷ್ಟು ವಿಶೇಷ ಎಂದರೆ ನಿಮ್ಮ ಫೇವರಿಟ್ ಕ್ರಿಕೆಟರ್‌ ಅಂಡರ್- 19 ವಿಶ್ವಕಪ್ ಅವಧಿಯಲ್ಲಿ ಹೇಗಿದ್ದರೂ ಎಂದು ನೋಡಬಹುದು.

ಐಸಿಸಿಯು 2008ರ ಅಂಡರ್-19 ವಿಶ್ವಕಪ್‌ನಲ್ಲಿ ಭಾಗವಹಿಸಿದ ತಂಡಗಳ ನಾಯಕರ ವೀಡಿಯೋವನ್ನು ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಆಗಿನ ಭಾರತ ಅಂಡರ್-19 ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಮನೀಶ್ ಪಾಂಡೆ ಹಾಗೂ ರವೀಂದ್ರ ಜಡೇಜಾ ಕೂಡ ಇದ್ದಾರೆ.

ಭಾರತ ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ಜೇಮ್ಸ್ ಪ್ಯಾಟಿನ್ಸನ್, ವೆಸ್ಟ್ ಇಂಡೀಸ್‌ನ ಡರೆನ್ ಬ್ರಾವೊ, ಕಿರನ್ ಪೊವೆಲ್, ಇಂಗ್ಲೆಂಡ್‌ನ ಸ್ಟೀವನ್ ಫಿನ್, ಜೇಮ್ಸ್ ಟೇಲರ್, ಪಾಕಿಸ್ತಾನದ ಇಮಾದ್ ವಾಸಿಂ, ಅಹ್ಮದ್ ಶೆಹಜಾದ್ ಹಾಗೂ ದಕ್ಷಿಣ ಆಫ್ರಿಕಾದ ವೇಯ್ನ್ ಪರ್ನೆಲ್, ರೀಜಾ ಹೆಂಡ್ರಿಕ್ಸ್‌ರನ್ನು ಕಾಣಬಹುದು.

ಈ ವೀಡಿಯೋ ಜೊತೆಗೆ ನಿಮ್ಮ ಫೇವರಿಟ್ ಕ್ರಿಕೆಟರ್ ಯಾರು ಎಂಬ ಶೀರ್ಷಿಕೆಯೊಂದಿಗೆ ಐಸಿಸಿ ವೀಡಿಯೋ ಹರಿಬಿಟ್ಟಿದೆ. ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಕಮೆಂಟ್ ಮಾಡಿದ್ದಾರೆ.

Story first published: Thursday, November 5, 2020, 9:40 [IST]
Other articles published on Nov 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+