For Quick Alerts
ALLOW NOTIFICATIONS  
For Daily Alerts
 

ಪ್ರಧಾನಿ ಮಾತಿಗೂ ಬೆಲೆ ಕೊಡದ ನ್ಯೂಜಿಲೆಂಡ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಇನ್ಜಮಾಮ್ ಆಗ್ರಹ

ICC Should Take action against New Zealand for cancelled Pakistan tour says Inzamam-ul-Haq

ಉದ್ದೇಶಿತ ಸರಣಿಯನ್ನಾಡಲು ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿದ್ದ ನ್ಯೂಜಿಲೆಂಡ್ ತಂಡ ಪಂದ್ಯ ಆರಂಭಕ್ಕೆ ಇನ್ನೇನು ಕೆಲವೇ ನಿಮಿಷಗಳು ಬಾಕಿ ಇರುವಾಗ ಭಯೋತ್ಪಾದನಾ ಭೀತಿಯ ಕಾರಣವನ್ನು ನೀಡಿ ಸರಣಿಯನ್ನು ರದ್ದುಗೊಳಿಸಿತು. ಹೀಗೆ ಕೊನೆಯ ಹಂತದಲ್ಲಿ ಸರಣಿ ಆಡುವುದಿಲ್ಲ ಎಂದು ಭಯೋತ್ಪಾದನಾ ಭೀತಿಯ ಕಾರಣವನ್ನು ನೀಡಿ ಸರಣಿಯನ್ನು ರದ್ದುಗೊಳಿಸಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಪಾಕಿಸ್ತಾನದ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು ಹಾಗೂ ಹಲವಾರು ಕ್ರಿಕೆಟ್ ಅಭಿಮಾನಿಗಳು ಅಸಮಾಧಾನವನ್ನು ಹೊರಹಾಕಿದ್ದಾರೆ.

ಸುಮಾರು 18 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಪ್ರವಾಸ ಬಂದಿದ್ದ ನ್ಯೂಜಿಲೆಂಡ್ ತಂಡ ಸೆಪ್ಟೆಂಬರ್‌ 17ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆಡಬೇಕಿತ್ತು. ಆದರೆ ಸರಣಿಯ ಆರಂಭಿಕ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ಸರ್ಕಾರದಿಂದ ಕಿವೀಸ್ ತಂಡಕ್ಕೆ ಪಾಕ್‌ನಲ್ಲಿ ಅಪಾಯದ ಎಚ್ಚರಿಕೆ ಬಂದಿತ್ತು. ಹೀಗಾಗಿ ಉದ್ದೇಶಿತ ಪ್ರವಾಸ ಸರಣಿಯನ್ನು ನ್ಯೂಜಿಲೆಂಡ್ ಮುಂದೂಡಿತ್ತು.

ಇದೀಗ ನ್ಯೂಜಿಲೆಂಡ್ ತಂಡದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಇನ್ಜಮಾಮ್ ಉಲ್ ಹಕ್ ಕೂಡ ಕಿಡಿಕಾರಿದ್ದಾರೆ. ಸರಣಿ ನಿಶ್ಚಯಗೊಂಡು, ನ್ಯೂಜಿಲೆಂಡ್ ತಂಡದ ಆಟಗಾರರು ಪಾಕಿಸ್ತಾನದವನ್ನೂ ತಲುಪಿ, ಪಂದ್ಯಗಳೆಲ್ಲ ಯಶಸ್ವಿಯಾಗಿ ಆಯೋಜನೆಯಾದ ನಂತರ ಇನ್ನೇನು ಮೊದಲ ಪಂದ್ಯ ಆರಂಭವಾಗಬೇಕು ಎನ್ನುವಷ್ಟರಲ್ಲಿ ಸರಣಿಯನ್ನು ರದ್ದುಗೊಳಿಸಿದ ನ್ಯೂಜಿಲೆಂಡ್ ತಂಡದ ವಿರುದ್ಧ ಐಸಿಸಿ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಇನ್ಜಮಾಮ್ ಉಲ್ ಹಕ್ ಮನವಿ ಮಾಡಿಕೊಂಡಿದ್ದಾರೆ.

ಹೀಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಕಿಡಿಕಾರಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇನ್ಜಮಾಮ್ ಉಲ್ ಹಕ್ ಈ ಕೆಳಕಂಡಂತೆ ಆಕ್ರೋಶ ಹೊರಹಾಕಿದ್ದಾರೆ..

ನ್ಯೂಜಿಲೆಂಡ್ ಮಾಡಿದ ಕೆಲಸವನ್ನು ಯಾವುದೇ ದೇಶ ಮಾಡಲು ಇಚ್ಛಿಸುವುದಿಲ್ಲ

ಹೀಗೆ ನ್ಯೂಜಿಲೆಂಡ್ ತಂಡ ಕೊನೆಯ ಗಳಿಗೆಯಲ್ಲಿ ಭಯೋತ್ಪಾದನಾ ಭೀತಿಯ ಕಾರಣವನ್ನು ನೀಡಿ ಪಾಕಿಸ್ತಾನ ವಿರುದ್ಧದ ಸರಣಿಯನ್ನು ರದ್ದಾಗುವಂತೆ ಮಾಡಿದ್ದರ ಕುರಿತು ಕಿಡಿಕಾರಿರುವ ಇನ್ಜಮಾಮ್ ಉಲ್ ಹಕ್ ನ್ಯೂಜಿಲೆಂಡ್ ತಂಡ ಮಾಡಿದ ಈ ರೀತಿಯ ಕೆಲಸವನ್ನು ಇತರೆ ಯಾವುದೇ ದೇಶದ ಕ್ರಿಕೆಟ್ ತಂಡಗಳು ಕೂಡ ಮಾಡಲು ಇಚ್ಛಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗೆ ಭದ್ರತೆಯ ಕುರಿತು ಅನುಮಾನವಿದ್ದರೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಜೊತೆ ಚರ್ಚೆ ನಡೆಸಬೇಕಿತ್ತು, ಆ ರೀತಿ ಭದ್ರತಾ ಕೊರತೆ ಇದ್ದಿದ್ದರೆ ನಮ್ಮ ದೇಶವೇ ಇನ್ನೂ ಹೆಚ್ಚಿನ ಭದ್ರತೆ ಒದಗಿಸುತ್ತಿತ್ತು, ಈ ರೀತಿ ಯಾವುದೇ ಸರಿಯಾದ ಕಾರಣಗಳಿಲ್ಲದೇ ಸರಣಿ ರದ್ದುಗೊಳಿಸಿದ ನ್ಯೂಜಿಲೆಂಡ್‌ ವಿರುದ್ಧ ಐಸಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಇನ್ಜಮಾಮ್ ಉಲ್ ಹಕ್ ಮನವಿ ಮಾಡಿಕೊಂಡಿದ್ದಾರೆ.

ನಮ್ಮ ಪ್ರಧಾನಿ ಮಾತನಾಡಿದರೂ ಕೇಳಲಿಲ್ಲ

ಇನ್ನೂ ಮುಂದುವರೆದು ನ್ಯೂಜಿಲೆಂಡ್‌ ತಂಡದ ವಿರುದ್ಧ ಮಾತನಾಡಿರುವ ಇನ್ಜಮಾಮ್ ಉಲ್ ಹಕ್ ನ್ಯೂಜಿಲೆಂಡ್‌ ತಂಡ ಭದ್ರತೆಯ ಕೊರತೆ ಕಾರಣ ನೀಡಿ ಸರಣಿ ರದ್ದುಗೊಳಿಸಲು ತೀರ್ಮಾನಿಸಿದಾಗ ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ನ್ಯೂಜಿಲೆಂಡ್‌ನ ಮನವೊಲಿಸಲು ಯತ್ನಿಸಿತಾದರೂ ನ್ಯೂಜಿಲೆಂಡ್ ತಂಡ ಅದಕ್ಕೆ ಕಿವಿಗೊಡಲಿಲ್ಲ, ಅಷ್ಟೇ ಅಲ್ಲದೆ ಮನವೊಲಿಸಲು ಯತ್ನಿಸಿದ ಪಾಕಿಸ್ತಾನದ ಪ್ರಧಾನಿ ಮಾತಿಗೂ ನ್ಯೂಜಿಲೆಂಡ್ ತಂಡ ಬೆಲೆ ಕೊಡಲಿಲ್ಲ ಎಂದು ಇನ್ಜಮಾಮ್ ಉಲ್ ಹಕ್ ಅಸಮಾಧಾನ ವ್ಯಕ್ತಪಡಿಸಿದರು.

ನ್ಯೂಜಿಲೆಂಡ್‌ ವಿರುದ್ಧ ಶೋಯೆಬ್‌ ಅಖ್ತರ್‌ ಕಿಡಿ:

ನ್ಯೂಜಿಲೆಂಡ್ ನಿಲುವಿಗೆ ಶೋಯೆಬ್ ಅಖ್ತರ್ ಟ್ವಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ. "ಪಾಕಿಸ್ತಾನ ಕ್ರಿಕೆಟ್ ಅನ್ನು ನ್ಯೂಜಿಲೆಂಡ್ ಕೊಂದು ಹಾಕಿತು," ಎಂದು ಅಖ್ತರ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಅದೊಂದು ಪರಿಶೀಲಿಸದ ಬೆದರಿಕೆಯಾಗಿತ್ತು. ಅದನ್ನು ಕೇಳಿ ನ್ಯೂಜಿಲೆಂಡ್ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿತು ಎಂದು ಅಖ್ತರ್ ಹೇಳಿದ್ದಾರೆ.

Story first published: Saturday, September 18, 2021, 23:13 [IST]
Other articles published on Sep 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+